ಗ್ಯಾರಂಟಿಗೆ ಲಂಚ ಕೇಳಿ​ದರೆ ಒದ್ದು ಒಳಗಾಕ್ತೀವಿ: ಡಿಸಿಎಂ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ

ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆಗೆ ಯಾರಾ​ದರು ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದರು.

If you ask for a bribe for a guarantee you will be kicked Says DK Shivakumar gvd

ಹಾರೋ​ಹಳ್ಳಿ /ಕನ​ಕ​ಪುರ (ಜೂ.04): ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆಗೆ ಯಾರಾ​ದರು ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದರು. ತಾಲೂ​ಕಿನ ಹಾರೋ​ಹಳ್ಳಿ, ಕಬ್ಬಾಳು, ಕಲ್ಲ​ಹಳ್ಳಿ, ಶಿವ​ನ​ಹಳ್ಳಿ , ಸಾತ​ನೂರು, ದೊಡ್ಡಾ​ಲ​ಹಳ್ಳಿ, ಕೋಡಿ​ಹಳ್ಳಿ ಹಾಗೂ ಕನ​ಕ​ಪುರ ಟೌನ್‌ ನಲ್ಲಿ ಪ್ರವಾ​ಸ ಕೈಗೊಂಡ ಡಿ.ಕೆ.​ಶಿ​ವ​ಕು​ಮಾರ್‌ ಅವರು ಮತ​ದಾ​ರರು, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯ​ಕ​ರ್ತ​ರಿಗೆ ಕೃತ​ಜ್ಞತೆ ಸಲ್ಲಿ​ಸಿ ಮಾತ​ನಾ​ಡಿದರು.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ​ಗ​ಳನ್ನು ಇಡೀ ದೇಶ ಎದುರು ನೋಡು​ತ್ತಿದೆ. ಕಾಂಗ್ರೆಸ್‌ ಪಕ್ಷ ನುಡಿ​ದಂತೆ ನಡೆ​ದು ಐದು ಗ್ಯಾರಂಟಿ​ಗ​ಳನ್ನು ಈಡೇ​ರಿ​ಸಿ​ದ್ದೇವೆ. ಜೂನ್‌ 15ರಿಂದ ಜುಲೈ 15ರವ​ರೆಗೆ ಅರ್ಜಿ ಸಲ್ಲಿ​ಸ​ಬ​ಹುದು. ಈ ಯೋಜ​ನೆ​ಗಳ ಫಲಾ​ನು​ಭ​ವಿ​ಯಾ​ಗಲು ಯಾರು ಕೂಡ ಲಂಚ ಕೊಡ​ಬೇ​ಕಾ​ಗಿಲ್ಲ. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೇ ದಿನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ನವರ ದುಃಖ, ದುಗುಡ ಹೆಚ್ಚಾಗಿದ್ದು, ರಾಜ್ಯದ ಜನ ನೋಡುತ್ತಿದ್ದಾರೆ ಎಂದು ಚೇಡಿ​ಸಿ​ದ​ರು.

ಆ​ರೋಗ್ಯ, ಶಿಕ್ಷ​ಣದ ವಲಸೆ ತಪ್ಪಿ​ಸುವುದು ನನ್ನ ಗುರಿ: ಡಿ.ಕೆ.​ಶಿ​ವ​ಕು​ಮಾರ್‌

ಬಿಜೆಪಿ ಮತ್ತು ಜೆಡಿ​ಎಸ್‌ ಇಂತಹ ಕಾರ್ಯ​ಕ್ರ​ಮ​ಗ​ಳನ್ನು ನೀಡ​ಲಿಲ್ಲ. ಜನರ ಖಾತೆಗೆ 15 ಲಕ್ಷ ಬರ​ಲಿಲ್ಲ, ರೈತರ ಸಾಲ​ಮನ್ನಾ ಆಗ​ಲಿಲ್ಲ. ಜನ​ರಿಗೆ ಅಚ್ಛೇ​ದಿನ್‌ ಬರಲೇ ಇಲ್ಲ ಎಂದು ಬಿಜೆಪಿ ನೇತೃ​ತ್ವದ ಕೇಂದ್ರ ಸರ್ಕಾ​ರದ ವಿರುದ್ಧ ಕಿಡಿ ಕಾರಿದ ಡಿ.ಕೆ.​ಶಿ​ವ​ಕು​ಮಾರ್‌, ರಾಜ್ಯದ ಜನತೆ ನಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯುವಂತಹ ಕೆಲಸ ಮಾಡದೇ ನಾವು ಕೊಟ್ಟಿರುವ ಆಶ್ವಾಸನೆಯನ್ನು ಸಂಪೂರ್ಣವಾಗಿ ಈಡೇರಿಸುವುದರ ಮೂಲಕ ನುಡಿದಂತೆ ನಡೆದ ಪಕ್ಷ ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ಹೇಳಿ​ದ​ರು.

ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2ಸಾವಿರ ಕೊಡುತ್ತೇವೆ. ಆದರೆ, ಮನೆ ಯಜ​ಮಾನಿ ಯಾರು ಅಂತ ಕುಟುಂಬ​ದ​ವ​ರೇ ತೀರ್ಮಾನ ಮಾಡಿಕೊ​ಳ್ಳ​ಬೇಕು. ಅತ್ತೆ - ಸೊಸೆ ಯಾರೂ ಜಗಳ ಮಾಡಿ​ಕೊ​ಳ್ಳ​ಬಾ​ರದು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್‌ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗ​ಲಿದೆ. ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜ​ನೆ​ಯಲ್ಲಿ 3 ಸಾವಿರ ಕೊಡು​ತ್ತೇವೆ. ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಸಿಗ​ಲಿ​ದೆ. ಹೆಣ್ಣು ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ ಬರ​ಬ​ಹುದು. ಕೆಎಸ್‌ಆರ್‌ಟಿಸಿ ನಡೆ​ಯ​ಬೇ​ಕಲ್ಲ. ಆದ್ದ​ರಿಂದ ಗಂಡ​ಸರು ಮಾತ್ರ ಟಿಕೆಟ್‌ ಪಡೆದು ಪ್ರಯಾಣ ಮಾಡ​ಬೇಕು ಎಂದು ಹೇಳಿ​ದ​ರು.

ಕಾಂಗ್ರೆಸ್‌ ಪಕ್ಷ​ವನ್ನು ಅಧಿಕಾರಕ್ಕೆ ತಂದಿರುವ ಕಾರ​ಣ ನಿಮಗೆ ಕೊಡು​ತ್ತಿ​ರುವ ಯೋಜ​ನೆ​ಗ​ಳಿವು. ಈಗ ನೀವೆಲ್ಲರೂ (ಕಾಂಗ್ರೆಸ್‌ ಕಾರ್ಯ​ಕ​ರ್ತ​ರು​) ನಿಮ್ಮ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡಬೇಕು. ಗೃಹಲಕ್ಷ್ಮೀ ಯೋಜನೆಗೆ ಜೂನ್‌ 15ರಿಂದ ಆನ್‌ಲೈನ್‌ ಹಾಗೂ ಆಫ್‌ ಲೈನ್‌ ಅರ್ಜಿ ಕರೆಯಲಾಗುವುದು. ನೀವು ಮನೆ ಮನೆಗೆ ಹೋಗಿ ಅವರ ಮಾಹಿತಿ, ದಾಖಲೆ ಸಂಗ್ರಹಿಸಿ ಅರ್ಜಿ ತುಂಬಿ ಅವರಿಗೆ ಈ ಯೋಜನೆ ಸಿಗುವಂತೆ ಮಾಡಬೇಕು ಎಂದು ಡಿ.ಕೆ.​ಶಿ​ವ​ಕು​ಮಾರ್‌ ಕರೆ ನೀಡಿದರು. ರಾಮ​ನ​ಗರ ಕ್ಷೇತ್ರ ಶಾಸಕ ಇಕ್ಬಾಲ್‌ ಹುಸೇನ್‌, ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ನಗ​ರ​ಸಭೆ ಮಾಜಿ ಅಧ್ಯಕ್ಷರಾದ ದಿಲೀಪ್‌, ಕೃಷ್ಣ​ಮೂರ್ತಿ ಮುಖಂಡರಾದ ನಾರಾಯಣ ಗೌಡ, ರಾಯಸಂದ್ರ ರವಿ, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ ಮತ್ತಿ​ತ​ರರು ಹಾಜ​ರಿ​ದ್ದರು.

ಪ್ರವಾ​ಸೋ​ದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲ​ಕೃಷ್ಣ ಜೊತೆ ಸಂಸದ ಸುರೇಶ್‌ ಚರ್ಚೆ

ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದೀರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ. ಈಗ ನಾನು ಮತ್ತು ಸಿದ್ದರಾಮಯ್ಯ, ಸಚಿವ ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ.
-ಡಿ.ಕೆ.​ಶಿ​ವ​ಕು​ಮಾರ್‌, ಉಪ ಮುಖ್ಯ​ಮಂತ್ರಿ

Latest Videos
Follow Us:
Download App:
  • android
  • ios