Asianet Suvarna News Asianet Suvarna News

ಹಿರಿಯ ನಟ ಫನಶ್ಯಾಮ್ ನಾಯಕ ಕ್ಯಾನ್ಸರ್‌ಗೆ ಬಲಿ

ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಸೋತ ಹಿಂದಿ ಹಿರಿಯ ನಟ ನಟ್ಟು ಕಾಕ ನಿಧನ...
 

Veteran actor Ghanshyam Nayak passes away at 77 due to cancer vcs
Author
Bangalore, First Published Oct 4, 2021, 3:18 PM IST
  • Facebook
  • Twitter
  • Whatsapp

ತಾರಕ್‌ ಮೆಹ್ತಾ ಉಲ್ಟಾ ಚಾಶ್ಮಾ ಖ್ಯಾತಿಯ ಫನಶ್ಯಾಮ್ ನಾಯಕ (Ghanashyam Nayak)ಅವರು ಕಳೆದು ಒಂದು ವರ್ಷದಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದರು.  ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸೋತು, ಅಕ್ಟೋಬರ್ 3ರಂದು ಕೊನೆ ಉಸಿರೆಳೆದಿದ್ದಾರೆ.  ಚಿತ್ರರಂಗದಲ್ಲಿ ಫನಶ್ಯಾಮ್‌ ಅವರನ್ನು ನಟ್ಟು ಕಾಕಾ (Nattu Kaka) ಎಂದು ಎಲ್ಲರೂ ಕರೆಯುತ್ತಿದ್ದರು ಹಾಗೂ ಗುರುತಿಸುತ್ತಿದ್ದರು. 

ಘನಶ್ಯಾಮ್ ಅವರಿಗೆ 77 ವರ್ಷವಾಗಿತ್ತು. ಕ್ಯಾನ್ಸರ್‌ ಬಂದ ನಂತರ ಎರಡು ಸಲ ಆಪರೇಷನ್‌ ಕೂಡ ಮಾಡಿಸಿ ಕೊಂಡಿದ್ದರು. ದಿನೇ ದಿನೇ ಆರೋಗ್ಯದ ಹದ ಗೆಡುತ್ತಿದ್ದ ಕಾರಣ, ಪ್ರತಿದಿನ ಶೂಟಿಂಗ್‌ಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. 

Veteran actor Ghanshyam Nayak passes away at 77 due to cancer vcs

ನಟ್ಟು ಕಾಕಾ 100 ಗುಜರಾತ್ (Gujarat) ಚಿತ್ರಗಳು ಹಾಗೂ 100 ಹಿಂದಿ (Hindi) ಸಿನಿಮಾಗಳಲ್ಲಿ ನಟಿಸಿದ್ದಾರೆ.  ಇದರ ಜೊತೆಗೆ 350ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 100 ಗುಜರಾತ್‌ ಸ್ಟೇಜ್‌ ಪ್ಲೇಗಳನ್ನು (Gujarat Stage Play) ಮಾಡಿದ್ದಾರೆ. ಹಿರಿಯ ಲೆಜೆಂಡರಿ ನಟ ಮಹೇಂದರ್ ಕಪೂರ್ (Mahendra Kapoor), Kanhaiyalal ಸೇರಿದಂತೆ ಅನೇಕರಿಗೆ ಧ್ವನಿ ನೀಡಿದ್ದಾರೆ. 

ಬ್ರೈನ್‌ ಹ್ಯಾಮರೇಜ್‌ನಿಂದ ನಟಿ ಮನೀಷಾ ನಿಧನ; 1 ವರ್ಷದ ಕಂದಮ್ಮ ತಬ್ಬಲಿ

'ಘನಶ್ಯಾಮ್ ನಾಯಕ ಅವರು ಮತ್ತು ನಾನು ಹಲವು ವರ್ಷಗಳಿಂದ ಪರಿಚಯ ಹಾಗೂ ನಮ್ಮ ಕುಟುಂಬದವರಿಗೂ ಪರಿಚಯ. ಅವರು ಇನ್ನಿಲ್ಲ ಎಂಬ ವಿಚಾರ ನನಗೆ ವೈಯಕ್ತಿಕವಾಗಿ ನೋವಾಗಿದೆ. ಇಷ್ಟು ವರ್ಷಗಳ ನನ್ನ ಜರ್ನಿಯಲ್ಲಿ ಅವರು ನನಗೆ ಸ್ಪೂರ್ತಿ ನೀಡುತ್ತಿದ್ದರು. ಅವರು ಇನ್ನಿಲ್ಲ. ಇಡೀ ಚಿತ್ರರಂಗಕ್ಕೆ ದೊಡ್ಡ ಲಾಸ್,' ಎಂದು ಆಶಿತ್ ಕುಮಾರ್ ಮೋದಿ ಟ್ಟೀಟ್ ಮಾಡಿದ್ದಾರೆ. 

ನಟ ನೀನಾಸಂ ಸತೀಶ್ ತಾಯಿ ಚಿಕ್ಕತಾಯಮ್ಮ ನಿಧನ

ನಟ್ಟು ಕಾಕಾ ಅಗಲಿದ ವಿಚಾರ ತಿಳಿದು ಇಡೀ ಗುಜರಾತ್ ಹಾಗೂ ಹಿಂದಿ ಚಿತ್ರರಂಗವರು ಕಂಬನಿ ಮಿಡಿದಿದ್ದಾರೆ.

Follow Us:
Download App:
  • android
  • ios