Archana Puran Singh And Free Dosa: ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಅವರು ವ್ಲಾಗರ್ ಆಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ದೋಸೆ ಅಂಗಡಿಗೆ ಭೇಟಿ ನೀಡಿದಾಗ ಸೆಲ್ಫಿಗೆ ಬದಲಾಗಿ ಫ್ರೀಯಾಗಿ ದೋಸೆ ಕೊಡಲು ವ್ಯಾಪಾರಿ ನಿರಾಕರಿಸಿದ ಘಟನೆ ವೈರಲ್ ಆಗಿದೆ. ಈ ವಿಡಿಯೋ ನೋಡಿ ನಿಮಗಿದು ಬೇಕಿತ್ತಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಸಿನಿಮಾಗಳ ಜೊತೆ ಕಿರುತೆರೆಯಲ್ಲಿಯೂ ಬ್ಯುಸಿಯಾಗಿರೋ ಕಲಾವಿದೆ. ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರಿಂದ ಸ್ಪೂರ್ತಿ ಪಡೆದು ವ್ಲಾಗರ್ ಆಗಿ ಬದಲಾಗಿದ್ದಾರೆ. ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿರೋ ಅರ್ಚನಾ ಪೂರಣ್ ಸಿಂಗ್ ತಮ್ಮ ದೈನಂದಿನ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾರೆ. ಈ ಎಲ್ಲಾ ವಿಡಿಯೋಗಳನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಅರ್ಚನಾ ಅವರಗೆ ಫ್ರೀಯಾಗಿ ಕೊಡಲು ಒಪ್ಪದ ವ್ಯಾಪಾರಿಯ ವಿಡಿಯೋ ವೈರಲ್ ಆಗುತ್ತಿದೆ. ಸೆಲ್ಫಿ ಕೊಡುವೆ ಅಂದ್ರೂ ಅರ್ಚನಾ ಪೂರಣ್ ಸಿಂಗ್‌ಗೆ ಫ್ರಿಯಾಗಿ ದೋಸೆ ಕೊಡಲ್ಲ ಅಂದಿದ್ದಾನೆ. ನನ್ನ ಸೆಲ್ಫಿಗೆ 100 ರೂಪಾಯಿಯ ಬೆಲೆಯೂ ಇಲ್ಲವಾ ಎಂದು ಅರ್ಚನಾ ಹೇಳಿದ್ದಾರೆ. 

ಮುಂಬೈನ ಫುಡ್‌ ಸ್ಟ್ರೀಟ್‌ಗೆ ಪತಿ ಪರ್‌ಮಿತ್, ಮಕ್ಕಳಾದ ಆಯುಷ್ಮಾನ್, ಆರ್ಯಮನ್ ಜೊತೆಯಲ್ಲಿ ಅರ್ಚನಾ ಪೂರಣ್ ಸಿಂಗ್ ಹೇಳಿದ್ದರು. ನಾಲ್ಕು ದೋಸೆ ಸ್ಟಾಲ್‌ಗೆ ಭೇಟಿ ನೀಡುವುದು ಅರ್ಚನಾ ಕುಟುಂಬದ ಪ್ಲಾನ್ ಆಗಿತ್ತು. ಅಲ್ಲಿ ದೋಸೆ ತಿಂದು, ಸ್ಟಾಲ್‌ಗಳಿಗೆ ರೇಟಿಂಗ್ ಕೊಡುತ್ತೇವೆ ಎಂದು ಅರ್ಚನಾ ಹೇಳಿದ್ದರು. ಮುಂಬೈನಲ್ಲಿರುವ ದೋಸೆ ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ಜನರು ಅರ್ಚನಾ ಪೂರಣ್‌ ಸಿಂಗ್ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಯಿಂದ ಮಾತನಾಡಿದ್ದಾರೆ. 

ಮಸಾಲೆ ದೋಸೆ, ಪನ್ನೀರ್, ಪಾಲಕ್ ದೋಸೆ ಸೇರಿದಂತೆ ಬಗೆ ಬಗೆಯ ದೋಸೆಗಳನ್ನು ಅರ್ಚನಾ ಕುಟುಂಬ ಸವಿದಿದೆ. ಕೊನೆಯ ಮಳಿಗೆಗೆ ಭೇಟಿ ನೀಡಿದಾಗ ಅರ್ಚನಾ, ಅಂಗಡಿಯವನಿಗೆ ತಾವು ಬಂದಿರುವ ಉದ್ದೇಶ ಹೇಳುತ್ತಾರೆ. ಹಾಗೆ ಅಲ್ಲಿಯ ಸಿಬ್ಬಂದಿಯೊಂದಿಗೆ ಅರ್ಚನಾ ಪೂರಣ್ ಸಿಂಗ್ ಮಾತನಾಡಿದ್ದಾರೆ. ಹೀಗೆ ಮಾತನಾಡುವ ಸಂದರ್ಭದಲ್ಲಿ ನಮ್ಮ ನಾಲ್ಕು ಜನರ ಪೈಕಿ ನನಗೆ ಫ್ರೀಯಾಗಿ ದೋಸೆ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ನಗುತ್ತಲೇ ವ್ಯಾಪಾರಿ ಫ್ರೀಯಾಗಿ ಕೊಡಲ್ಲ ಅಂದಿದ್ದಾನೆ. ನಾನು ನಿಮಗೆ ಸೆಲ್ಫಿ ಕೊಡುತ್ತೇನೆ ಅಂದ್ರು ದೋಸೆ ವ್ಯಾಪಾರಿ ಒಪ್ಪಿಲ್ಲ. ಇದರಿಂದ ಬೇಸರಗೊಂಡ ಅರ್ಚನಾ, ನನ್ನ ಸೆಲ್ಫಿಗೆ 100 ರೂಪಾಯಿಯ ಬೆಲೆಯೂ ಇಲ್ಲವಾ ಎಂದು ಜೋರಾಗಿ ಹೇಳುತ್ತಾ ನಕ್ಕಿದ್ದಾರೆ.

ನೀವು ಫ್ರಿಯಾಗಿ ಕೊಡ್ತೀನಿ ಅಂದಿದ್ರೆ ನನಗೆ ತುಂಬಾ ಖುಷಿಯಾಗುತ್ತಿತ್ತು. ನನ್ನ ಸಂತೋಷಕ್ಕಾದ್ರೂ ಫ್ರಿಯಾಗಿ ಕೊಡುವೆ ಎಂದು ಹೇಳಿ ಅಂದಾಗ ದೋಸೆ ವ್ಯಾಪಾರಿ ಕೊಡುವೆ ಎಂದಿದ್ದಾರೆ. ಅಲ್ಲಿ ದೋಸೆ ತಿಂದ ಅರ್ಚನಾ ಕುಟುಂಬಸ್ಥರು ಹಣ ಪಾವತಿಸಿ ತೆರಳಿದ್ದಾರೆ. ವ್ಯಾಪಾರಿ ದೋಸೆ ಫ್ರೀಯಾಗಿ ಕೊಡಲ್ಲ ಅಂತ ಹೇಳುತ್ತಿರುವ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರ್ಚನಾ ಪತಿ ಪರ್‌ಮಿತ್ ಪದೇ ಪದೇ ಡೋಸಾ ಅನ್ನೋದು ಕೇಳಿದ ನೆಟ್ಟಿಗರು ಅದು ದೋಸೆ ಎಂದು ಕಮೆಂಟ್ ಮಾಡಿದ್ದಾರೆ. ನಿಮಗೆ ರುಚಿಯಾದ ದೋಸೆ ಬೇಕಾದ್ರೆ ದಕ್ಷಿಣ ಭಾರತದ ಹೋಟೆಲ್‌ಗಳಿಗೆ ಭೇಟಿ ನೀಡಿ. ಮೈಸೂರು ದೋಸೆ ತುಂಬಾ ರುಚಿಯಾಗಿರುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 4 ಕೋಟಿ ಸಿನಿಮಾ ಗಳಿಸಿದ್ದು 524 ಕೋಟಿ; ಇಂದಿಗೂ ಲವರ್ಸ್ ನೋಡಲು ಇಷ್ಟಪಡೋ 1995ರ ರೊಮ್ಯಾಂಟಿಕ್ ಮೂವಿ 

ಕೈ ಮುರಿದುಕೊಂಡಿರುವ ಅರ್ಚನಾ
ಚಿತ್ರೀಕರಣ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದರಿಂದ ಕೈ ಮೂಳೆ ಮುರಿದಿತ್ತು. ಅರ್ಚನಾ ಕೈಗೆ ಶಸ್ತ್ರಚಿಕಿತ್ಸೆಯೂ ನಡೆಸಲಾಗಿತ್ತು. ಒಂದು ಕೈಗೆ ಪ್ಲಾಸ್ಟರ್ ಹಾಕಿಕೊಂಡೇ ದೋಸೆ ಅಂಗಡಿಗಳನ್ನು ಸುತ್ತಿದ್ದಾರೆ. ಕಿರುತೆರೆಯ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋನಲ್ಲಿ ಅರ್ಚನಾ ಕಾಣಿಸಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಕಾಮಿಡಿ ಸರ್ಕಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. ಕುಚ್ ಕುಚ್ ಹೋತಾ ಹೈ ಸಿನಿಮಾದ ಮಿಸ್ ಬ್ರಿಗ್ಯಾಂಜ್ ಪಾತ್ರ ಅರ್ಚನಾ ಪೂರಣ್ ಸಿಂಗ್ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ತಂದು ಕೊಟ್ಟಿತ್ತು.

ಇದನ್ನೂ ಓದಿ: ಕನ್ನಡದ 10 ಮೋಸ್ಟ್ ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಸಿನಿಮಾಗಳು

YouTube video player