3 hour 1 Minute Super Hit Cinema: ಕೇವಲ 4 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ 90ರ ದಶಕದ ರೊಮ್ಯಾಂಟಿಕ್ ಸಿನಿಮಾವೊಂದು 524 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. 30 ವರ್ಷಗಳ ನಂತರವೂ ಈ ಚಿತ್ರ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
Biggest Blockbuster Movie: ಆಕ್ಷನ್ , ಕಾಮಿಡಿ ಜೊತೆ ಜೊತೆಗೆ ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಲು ಜನರು ಹೆಚ್ಚುಇಷ್ಟಪಡುತ್ತಾರೆ. ಈ ಎಲ್ಲಾ ಅಭಿರುಚಿಯ ಸಿನಿಮಾ ಒಂದು ಕೇವಲ 4 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. 90ರ ದಶಕದ ಈ ಸಿನಿಮಾವನ್ನು ಇಂದಿನ ಲವರ್ಸ್‌ಗಳು ನೋಡಲು ಇಷ್ಟಪಡುತ್ತಾರೆ. ಈ ಸಿನಿಮಾ ಎಷ್ಟರಮಟ್ಟಿಗೆ ಯಶಸ್ಸು ಆಗ್ತಿಂದ್ರೆ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ ಕಲಾವಿದರನ್ನು ಜನರು ಗುರುತಿಸುತ್ತಿದ್ದರು. ಇಂದು 2 ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯವಾದ್ರೆ ಬೋರ್ ಅಂತಾರೆ. ಆದ್ರೆ ಇದು 3 ಗಂಟೆ 1 ನಿಮಿಷದ ಈ ಸಿನಿಮಾ ಆಗಿದ್ರೂ ಇಂದಿಗೂ ಎಲ್ಲಾ ವರ್ಗದವರಿಗೆ ಇಷ್ಟವಾಗುವ ಸಿನಿಮಾ. ಈ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾಗಿ 30 ವರ್ಷ ಕಳೆದ್ರೂ ಇಂದಿಗೂ ಇದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.
ಸಿನಿಮಾ ಬಿಡುಗಡೆಯಾದ ಬಳಿಕ ಬಾಕ್ಸ್ ಆಫಿಸ್‌ನಲ್ಲಿಇದರ ಸಂಪಾದನೆ ನೋಡಿ ನಿರ್ಮಾಪಕ ಮತ್ತು ನಿರ್ದೇಶಕರೇ ಶಾಕ್ ಆಗಿದ್ದರು. ಬಿಡುಗಡೆಯಾದ ಬೆರಳಣಿಕೆ ದಿನಗಳಲ್ಲಿ ಸಿನಿಮಾಗೆ ಹಾಕಿದ ದುಡ್ಡು ರಿಟರ್ನ್ ಅಗಿತ್ತು. ಐಎಂಡಿಬಿ ಪ್ರಕಾರ, ಈ ಚಿತ್ರಕ್ಕೆ 4 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿತ್ತು. ಒಟ್ಟು 524 ಕೋಟಿ ಹಣವನ್ನು ಈ ಸಿನಿಮಾ ಕಲೆಕ್ಷನ್ ಮಾಡಿತ್ತು. ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿದ್ದವು. ಇಂದಿಗೂ ಮದುವೆ ಮನೆಗಳಲ್ಲಿ ಈ ಚಿತ್ರದ ಹಾಡುಗಳನ್ನು ಹಾಕಲಾಗುತ್ತದೆ.
ಕಾಜೋಲ್ ಮತ್ತು ಶಾರೂಖ್ ಖಾನ್ ನಟನೆಯ 'ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಭಾರತ ಕಂಡ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ರಾಜ್ ಮತ್ತು ಸಿಮ್ರನ್ ಆಗಿ ಕಾಣಿಸಿಕೊಂಡಿದ್ದ ಶಾರೂಖ್-ಕಾಜೋಲ್ ಪಾತ್ರಗಳಿಗೆ ಜೀವ ತುಂಬಿದ್ದರು. ವಿದೇಶದಲ್ಲಿ ಆರಂಭವಾಗುವ ರಾಜ್-ಸಿಮ್ರನ್ ಪ್ರೇಮ್ ಕಹಾನಿ ಭಾರತದಲ್ಲಿ ಕೊನೆಯಾಗುತ್ತದೆ. ತನ್ನನ್ನು ಮದುವೆಯಾಗುವ ಹುಡುಗನ ಬಗ್ಗೆ ಕಲ್ಪನೆ ಕಟ್ಟಿಕೊಂಡ ಸಿಮ್ರನ್ ಮದುವೆ ತಂದೆಯ ಗೆಳೆಯನ ಮಗನೊಂದಿಗೆ ನಿಶ್ಚಯವಾಗುತ್ತದೆ. ಪ್ರವಾಸದಲ್ಲಿ ಭೇಟಿಯಾಗುವ ರಾಜ್ ಮೇಲೆ ಸಿಮ್ರನ್‌ಗೆ ಪ್ರೇಮಾಂಕುರವಾಗುತ್ತದೆ. ಈ ವಿಷಯ ತಿಳಿಯುತ್ತಲೇ ಸಿಮ್ರನ್ ತಂದೆ ವಿದೇಶದಲ್ಲಿರೋ ಎಲ್ಲಾ ಆಸ್ತಿ ಮಾರಾಟ ಮಾಡಿ ಕುಟುಂಬದೊಂದಿಗೆ ಭಾರತಕ್ಕೆ ಹಿಂದಿರುಗುತ್ತಾರೆ. ಇಲ್ಲಿಂದ ಈ ಪ್ರೇಮಕಥೆಗೆ ದೇಶಿ ಮೆರಗು ಸಿಗುತ್ತದೆ.
ಚಿತ್ರದ ಕ್ಲೈಮ್ಯಾಕ್ಸ್ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುತ್ತದೆ. ರೈಲಿನಲ್ಲಿ ಹೊರಡುವ ಗೆಳೆಯ ರಾಜ್‌ನನ್ನು ಸೇರಲು ಸಿಮ್ರನ್ ಓಡುತ್ತಾಳೆ. ಈ ದೃಶ್ಯವನ್ನು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ರೀಕ್ರಿಯೇಟ್ ಮಾಡಲಾಗಿದೆ. ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಈ ದೃಶ್ಯವನ್ನು ಮರುಸೃಷ್ಟಿಸಲಾಗಿತ್ತು.
ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ
20 ಅಕ್ಟೋಬರ್ 1995ರಲ್ಲಿ ಬಿಡುಗಡೆಯಾದ ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾದಲ್ಲಿ ಶಾರೂಖ್ ಖಾನ್, ಕಾಜೋಲ್, ಅಮರಿಶ್ ಪುರಿ, ಫರೀದಾ ಜಲಾಲ್, ಸತೀಸ್ ಶಾ, ಅಚಲ್ ಸಚದೇವ್, ಅನುಪಮ್ ಖೇರ್, ಪರ್ಮಿತ್ ಸೇಠಿ, ಮಂದಿರಾ ಬೇಡಿ, ಪೂಜಾ ರೂಪಾರೆಲ್, ಲಲಿತ್ ತಿವಾರಿ, ಕರಣ್ ಜೋಹರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.
ಇದನ್ನೂ ಓದಿ: 16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ

