Asianet Suvarna News Asianet Suvarna News

Maaveeran Pillai: ಕಾಲಿವುಡ್​ಗೆ ಎಂಟ್ರಿ ಕೊಟ್ಟ ಕಾರಣ ತಿಳಿಸಿದ ವೀರಪ್ಪನ್​ ಪುತ್ರಿ ವಿಜಯಲಕ್ಷ್ಮಿ

ದಂತಚೋರ ವೀರಪ್ಪನ್​ನ ಪುತ್ರಿ ವಿಜಯಲಕ್ಷ್ಮಿ ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ. 
 

Veerappans Daughter Vijayalakshmi Reveals The Reason For Entering Cinema
Author
First Published Mar 26, 2023, 1:08 PM IST

ಒಂದು ಕಾಲದಲ್ಲಿ ಇಡೀ ಕರ್ನಾಟಕ, ತಮಿಳುನಾಡು ಸೇರಿದಂತೆ ಸುತ್ತಮುತ್ತಲಿನ ಜನರನ್ನು, ಪೊಲೀಸರನ್ನು ಬೆಚ್ಚಿಬೀಳಿಸಿದ್ದ ವೀರಪ್ಪನ್​ (Veerappan) ಹೆಸರು ಕೇಳದವರೇ ಬಹುಶಃ ಇಲ್ಲವೆನ್ನಬಹುದು. ದಂತಚೋರ, ನರಹಂತಕ ಎಂದೆಲ್ಲಾ ಕುಖ್ಯಾತಿ ಪಡೆದಿದ್ದ ವೀರಪ್ಪನ್​ ಕಾಡಿನಂಚಿನಲ್ಲಿ ಇರುವವರ ಪಾಲಿಗೆ ದೇವರು ಕೂಡ ಎಂದೆನಿಸಿಕೊಂಡವ. ಈತನ ಕಥೆಯೇ ರೋಚಕವಾಗಿದ್ದು, ಈತನ  ಈತನ ಬಗ್ಗೆ ಸಿನಿಮಾ ಕೂಡ ತೆರೆ ಕಂಡು ಬಹಳ ವರ್ಷಗಳೇ ಆಗಿವೆ.  ಈತನ ಪುತ್ರಿ ವಿಜಯಲಕ್ಷ್ಮೀ ಅವರು ಸದ್ಯ  ತಮಿಳುನಾಡಿನ  ಬಿಜೆಪಿ  ಯುವ ಘಟಕದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇದೀಗ ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಮಾವೀರನ್ ಪಿಳ್ಳೈ (Maaveeran Pillai) ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಿಂದ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಇದೆ. ಈ ಕಾರಣಕ್ಕೆ ತಾವು ಸಿನಿಮಾ ಒಪ್ಪಿಕೊಂಡಿರುವುದಾಗಿ ವಿಜಯಲಕ್ಷ್ಮೀ ಹೇಳಿದ್ದಾರೆ. ಇವರೀಗ  ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಚಿತ್ರದ ಹಾಡುಗಳು ರಿಲೀಸ್‌ ಆಗಿವೆ. ಶೀಘ್ರದಲ್ಲೇ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ. 

ಚೆನ್ನೈನ ಪ್ರಸಾದ್‌ ಲ್ಯಾಬ್​ನಲ್ಲಿ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವೀರಪ್ಪನ್​ ಪತ್ನಿ ಮುತ್ತುಲಕ್ಷ್ಮೀ, ಆಲ್​ ಪೀಪಲ್ಸ್​ ಪಾಲಿಟಿಕಲ್​ ಪಾರ್ಟಿ (All people's Political Party) ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ ರಾಜ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಲಕ್ಷ್ಮೀ ಅವರು, ನಾನು ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಅದರೆ ಚಿತ್ರದಲ್ಲಿ ನಟಿಸಬೇಕು ಎನ್ನುವುದು ನನ್ನ ಬಾಲ್ಯದ ಕನಸು. ಅದು ಈಗ ಇಡೇರಿದೆ. ಅಷ್ಟೇ ಅಲ್ಲದೇ ಒಳ್ಳೆಯ ಸಂದೇಶ ಬೀರುವ ಚಿತ್ರದಲ್ಲಿ ನಟಿಸುವ ಆಸೆ ಇತ್ತು. ಅದಕ್ಕೆ ಹೇಳಿ ಮಾಡಿಸಿದ ಚಿತ್ರವೇ ಮಾವೀರನ್ ಪಿಳ್ಳೈʼ ಎಂದಿದ್ದಾರೆ.  ಕುಡಿತದಿಂದಾಗಿ ಸಾಕಷ್ಟು  ಮನೆಗಳಲ್ಲಿ ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಮಾವೀರನ್ ಪಿಳ್ಳೈನಲ್ಲಿ  ತೋರಿಸಲಾಗಿದೆ. ಇದರ ಕಥೆ ನನಗೆ ಇಷ್ಟವಾದುದ್ದಕ್ಕೆ  ಒಪ್ಪಿಕೊಂಡೆ ಎಂದರು.  

ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

ನಿರ್ಮಾಪಕ ರಾಜ ಅವರು, 'ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ' ಎಂದಿದ್ದಾರೆ. ವೀರಪ್ಪನ್ ಮಗಳು ಚಿತ್ರರಂಗಕ್ಕೆ ಎಂಟ್ರಿ  ಕೊಡುತ್ತಿರುವ ಬಗ್ಗೆ ನಿರ್ದೇಶಕ ಪೇರರಸು (Perarasu) ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ‘ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ. ತಮಿಳು ಚಿತ್ರರಂಗದಲ್ಲಿ ಮುಖ್ಯಮಂತ್ರಿ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗ ವೀರಪ್ಪನ್​ ಮಗಳು ವಿಜಯಲಕ್ಷ್ಮಿ ಬಂದಿದ್ದಾರೆ ಅಷ್ಟೇ ಎಂದಿದ್ದಾರೆ.  ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ, ಅವರಿಗೆ  ಚಿತ್ರರಂಗಕ್ಕೆ ಸ್ವಾಗತ ಎಂದಿದ್ದಾರೆ. ‘ವೋಟ್​ ಬ್ಯಾಂಕ್ ದೃಷ್ಟಿಯಿಂದ ರಾಜಕಾರಣಿಗಳು ಕುಡಿತವನ್ನು ನಿಷೇಧಿಸುವ ಬಗ್ಗೆ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತದ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಕುಡಿತದಿಂದ ಪ್ರತೀದಿನ ನೂರಾರು ಜನ ಸಾಯುತ್ತಿದ್ದಾರೆ’ ಎಂದು ನಿರ್ದೇಶಕರು ಆತಂಕವ್ಯಕ್ತಪಡಿಸಿದರು.

ಒಂದ್ ಮಾತಾಡಿದ್ರೆ 2-3 ಕಾಂಟ್ರವರ್ಸಿ ಆಗತ್ತೆ.... ಎಂದು ಅತ್ತ Rashmika Mandanna

ಆನ್​ಲೈನ್​ನಲ್ಲಿ  ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್ ಬೇಕಿಲ್ಲ. ನೀಟ್ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ (Ban) ಎಂದಿದ್ದಾರೆ.  ಇಂದು ಚಿಕ್ಕ  ಮಕ್ಕಳು ಸಹ ಕುಡಿಯುತ್ತಿದ್ದಾರೆ.  ಈ ಚಿತ್ರದಲ್ಲಿ `ಸಾರಾಯಂ ಅಭಯಂ’ ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ ಎಂದರು. ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ (Raviverma) ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನಕಾರರಾಗಿ ದುಡಿದಿದ್ದಾರೆ. 

Follow Us:
Download App:
  • android
  • ios