ಒಂದ್ ಮಾತಾಡಿದ್ರೆ 2-3 ಕಾಂಟ್ರವರ್ಸಿ ಆಗತ್ತೆ.... ಎಂದು ಅತ್ತ Rashmika Mandanna

ತಮಿಳಿನ ಹೊಸ ಚಿತ್ರವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು ಅದರ ಪ್ರಮೋಷನ್​ ವಿಡಿಯೋ ಸಿಕ್ಕಾಪಟ್ಟೆ ಕುತೂಹಲದಿಂದ ತುಂಬಿದೆ. ಇದರಲ್ಲಿ ನಟ-ನಟಿ ಹೇಳಿದ್ದೇನು?
 

G V Prakash Rashmika Mandannas new movie announced with hilarious video

ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಹೆಚ್ಚಾಗಿ ನೆಗೆಟಿವ್​ ಸುದ್ದಿಗಳಿಂದಲೇ ಇತ್ತೀಚಿನ ದಿನಗಳಲ್ಲಿ ಇವರು ಸುದ್ದಿಯಲ್ಲಿದ್ದಾರೆ.  ಇತ್ತೀಚಿನ ದಿನಗಳಲ್ಲಿ  ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್​ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ (Maitri Movie) ಮೇಕರ್ಸ್ ತಯಾರಿಸುತ್ತಿರುವ ಮತ್ತೊಂದು ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ಇದರಿಂದಾಗಿ ಸದ್ಯ ಸುದ್ದಿಯಲ್ಲಿದ್ದಾರೆ!

ತಾವು ಮಾಡಿಕೊಳ್ಳುತ್ತಿರುವ ಕಿರಿಕ್​ ಬಗ್ಗೆ, ತಾವು ಮಾತನಾಡುವುದು, ತಮ್ಮ ವೇಷ ಭೂಷಣವೆಲ್ಲವೂ ಟ್ರೋಲ್​ ಆಗುತ್ತಿರುವ ಬಗ್ಗೆ ನಟಿ ಚೆನ್ನಾಗಿ ಅರಿತುಕೊಂಡಿದ್ದಾರೆ. ಹಾಗೆಂದು ಅವರೇನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ತಲೆ ಕೆಡಿಸಿಕೊಂಡದ್ದೇ ಹೌದಾಗಿದ್ದರೆ ಅದರಿಂದ ಹೊರಕ್ಕೆ ಬರುತ್ತಿದ್ದರು. ಇವುಗಳಿಂದಲೇ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತಿದೆ ಎಂದು ಗೊತ್ತಾದರೂ ತಾವು ಟ್ರೋಲ್​  ಆಗುವ ವಿಷಯವನ್ನು ಖುದ್ದು ಅವರೇ ಹೊಸ ಚಿತ್ರಕ್ಕೆ ಪ್ರಮೋಷನ್​ ವೇಳೆ ಈಗ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಅವರು, ನಿತೀನ್ (Nithin) ಅವರ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  2020ರಲ್ಲಿ ನಟ ನಿತಿನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ವೆಂಕಿ ಕುಡುಮುಲ ಸೇರಿ ಮಾಡಿದ್ದ 'ಭೀಷ್ಮ' ಚಿತ್ರ ಭಾರಿ ಹಿಟ್​ ಆಗಿತ್ತು. ಈ ತ್ರಿವಳಿಗಳೇ ಈಗ ಮತ್ತೆ ಜೊತೆಯಾಗಿದ್ದಾರೆ. ಇದರ  ವಿಶೇಷ ಪ್ರೋಮೋ ಹಂಚಿಕೊಂಡಿದೆ ಚಿತ್ರತಂಡ. 

ಸಾಮಿ ಸಾಮಿ ಡಾನ್ಸ್​ ಇನ್ನು ಮಾಡೋಲ್ಲ ಎಂದ Rashmika Mandanna: ಕಾರಣ ಕೇಳಿ ಫ್ಯಾನ್ಸ್ ಸುಸ್ತು!

ಈ ಇಬ್ಬರು ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ಕಾಮಿಡಿ ಕಥೆಯನ್ನು ಹೊಂದಿದ್ದರಿಂದ, ಇವರ ಮಾತುಗಳು ಕೂಡ ಫನ್ನಿ ಫನ್ನಿಯಾಗಿಯೇ ಮುಂದುವರೆದಿದೆ.  ತಮಿಳಿನಲ್ಲಿ (Tamil) ಇವರ ಸಂಭಾಷಣೆ ಕೇಳಬಹುದು. ನಿತಿನ್, ರಶ್ಮಿಕಾ ಹಾಸ್ಯದ ರೂಪದಲ್ಲಿ ಮಾತನಾಡಿಕೊಂಡಿದ್ದಾರೆ. ಇಬ್ಬರೂ ಟ್ರೋಲಿಂಗ್​, ಫ್ಲಾಪ್​ ಇತ್ಯಾದಿ ವಿಷಯಗಳ ಕುರಿತು ಮಾತನಾಡಿದ್ದಾರೆ. ಹೊಸ ಸಿನಿಮಾದ ಘೋಷಣೆಗಾಗಿ ಈ ರೀತಿ ಫನ್ನಿ ವಿಡಿಯೋವೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಇದರಲ್ಲಿ ಮೊದಲಿಗೆ ನಿತಿನ್‌ ಅವರು, ನಮ್ಮ ನಿರ್ದೇಶಕರು ಸ್ಕ್ರಿಪ್ಟ್‌ ಬರೆಯುವಾಗ 'ಓಂ' ಅಂತ ಬರೆಯುವ ಮೊದಲು  ರಶ್ಮಿಕಾ ಅಂತನೇ  ಬರೆಯುತ್ತಾರೆ ಎಂದು ನಟಿಯ ಕಾಲೆಳೆದಿದ್ದಾರೆ. ನಂತರ ಈ ಪ್ರಮೋಷನ್​ಗೆ ಅವಧಿಗಿಂತ ಮೊದಲೇ ಬಂದಿರೋ ರಶ್ಮಿಕಾ ಅವರನ್ನುಉದ್ದೇಶಿಸಿ ನಿತಿನ್​ ಅವರು,  'ಇಷ್ಟು ಬೇಗ ಬಂದು ಏನ್ ಮಾಡ್ತಾ ಇದ್ದೀರಾ' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಶ್ಮಿಕಾ, ದೆಹಲಿ, ಬಾಂಬೆ ಫ್ಯಾನ್ಸ್ ಜೊತೆಗೆ ಇಷ್ಟೋತನಕ ಇನ್‌ಸ್ಟಾಗ್ರಾಮ್‌ ಲೈವ್ ಮಾಡ್ತಿದ್ದೆ. ಈ ಶೂಟ್ ಆಗುತ್ತಿದ್ದಂತೆಯೇ, ಬೆಂಗಳೂರು, ಕೊಚ್ಚಿ, ಚೆನ್ನೈ....' ಎಂದು ರಾಗ ಎಳೆಯುತ್ತಿದ್ದಂತೆಯೇ ನಿತಿನ್​, ಒಹೊ ಸಾಕು ಸಾಕು... ಎಷ್ಟೆಂದರೂ  ನ್ಯಾಷನಲ್‌ ಕ್ರಷ್​ (National Crush) ಅಲ್ವಾ, ಇಷ್ಟು ಇದ್ದೇ ಇರುತ್ತದೆ ಎನ್ನುತ್ತಲೇ ಬರೀ ಲೈವಾ ಅಥ್ವಾ ಏನಾದ್ರೂ  ಕಾಂಟ್ರವರ್ಸಿನಾ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಕೂಡಲೇ ರಶ್ಮಿಕಾ, ಇಲ್ಲಪ್ಪಾ ಇಲ್ಲ. ನಾನೇನೂ ಕಾಂಟ್ರವರ್ಸಿ ಮಾಡಲ್ಲ. ಆದ್ರೆ ಉಫ್​... ನಾನು ಒಂದೇ ಒಂದು ಮಾತು ಹೇಳಿದ್ರೂ  ಎರಡ್ಮೂರು ಕಾಂಟ್ರವರ್ಸಿ ತಂತಾನೇ ಆಗ್ತಾವೆ. ಏನ್​ ಮಾಡೋಕಾಗತ್ತೆ ಎಂದು ಕೇಳಿದ್ದಾರೆ. ಅದಕ್ಕೆ ನಿತಿನ್​, ಇರ್ಲಿ, ನಿಮ್ದೇ ಬೆಸ್ಟು,  ನಾನು ಒಂದು ಹಿಟ್ ನೀಡಿದ್ರೆ, ಎರಡ್ಮೂರು ಸಿನಿಮಾ ಫ್ಲಾಪ್ ಆಗ್ತಾವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ಅಂದಹಾಗೆ, ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸುತ್ತಿರೋ  ಈ ಚಿತ್ರದ ಕಲಾ ನಿರ್ದೇಶಕರಾಗಿ ರಾಮ್ ಕುಮಾರ್ ಕೆಲಸ ಮಾಡುತ್ತಿದ್ದಾರೆ.  ಪಬ್ಲಿಸಿಟಿ ಡಿಸೈನರ್ ಆಗಿ ಗೋಪಿ ಪ್ರಸನ್ನ, ಸಂಕಲನ ಪ್ರವೀಣ್ ಪುಡಿ, ಛಾಯಾಗ್ರಾಹಕರಾಗಿ ಸಾಯಿ ಶ್ರೀರಾಮ್ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತ ಇನ್ನಿತರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಿದೆಯಂತೆ ಚಿತ್ರತಂಡ.

ಜಪಾನೀಸ್‌ ಫ್ಯಾಷನ್‌ ಬ್ರಾಂಡ್‌: ದೇಶದಲ್ಲೇ ಮೊದಲ ಬಾರಿಗೆ Rashmika Mandanna ರಾಯಭಾರಿ

ಈಗಾಗಲೇ ರಶ್ಮಿಕಾ ಮೈತ್ರಿ ಮೂವಿ ಮೇಕರ್ಸ್ (Maitri Movie Makers) ನಿರ್ಮಾಣದ ಪುಷ್ಪ ಸಿನಿಮಾದಲ್ಲಿ ನಟಿಸಿದ್ದರು, ಸದ್ಯ ಪುಷ್ಪ 2ನಲ್ಲೂ (Pushpa 2) ನಟಿಸುತ್ತಿದ್ದಾರೆ. ವೆಂಕಿ ನಿರ್ದೇಶನದ ಹೊಸ ಸಿನಿಮಾಗೂ ಆಯ್ಕೆಯಾಗುವ ಮೂಲಕ ದೊಡ್ಡ ಸುದ್ದಿಯಲ್ಲಿದ್ದಾರೆ. 

 

Latest Videos
Follow Us:
Download App:
  • android
  • ios