ಬಾಲಿವುಡ್ ಸ್ಟಾರ್ ನಟ ವರುಣ್ ಧವನ್(Varun Dhawan) ಸದ್ಯ ಜಗ್ ಜಗ್ ಜಿಯೋ(Jug Jug Jiyo) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈ ನಡುವೆ ವರುಣ್ ಧವನ್ ಅಭಿಮಾನಿಯೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ. 

ಬಾಲಿವುಡ್ ಸ್ಟಾರ್ ನಟ ವರುಣ್ ಧವನ್(Varun Dhawan) ಸದ್ಯ ಜಗ್ ಜಗ್ ಜಿಯೋ(Jug Jug Jiyo) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈ ನಡುವೆ ವರುಣ್ ಧವನ್ ಅಭಿಮಾನಿಯೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನಗೆ ಮತ್ತು ತಾಯಿಗೆ ತಂದೆ ಚಿತ್ರಹಿಂಸೆ ನೀಡುತ್ತಿದ್ದಾರೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವರುಣ್ ಇದು ತುಂಬಾ ಗಂಭೀರ ವಿಚಾರ, ಸಹಾಯ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವರುಣ್ ಧವನ್ ಈ ಮಾತು ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ವ್ಯಕ್ತವಾಗಿದೆ.

ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ, ಸರ್, ನನ್ನ ತಂದೆ ನನಗೆ ಅನೇಕ ಬಾರಿ ಹೊಡೆದಿದ್ದಾರೆ. ದೌರ್ಜನ್ಯ ನೀಡುತ್ತಿದ್ದಾರೆ. ನನ್ನ ತಾಯಿ ಮತ್ತು ನನಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದಾರೆ. ಊಟ ಮಾಡಲು ಸಹ ಬಿಡುವುದಿಲ್ಲ. ಕೆಟ್ಟ ಪದಗಳಿಂದ ನಿಂದಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಬಳಿಕ ಈ ಬಗ್ಗೆ ಗುಜರಾತ್ ಪೊಲೀಸರಿಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ.

ಪೊಲೀಸರಿಂದ ಅಗತ್ಯವಿದ್ದಾಗ ಸಹಾಯ ಸಿಗುತ್ತೆ ಎನ್ನುವ ಭರವಸೆ ಕಳೆದುಕೊಂಡಿದ್ದೇನೆ. ಇದು ಸರಿಯಲ್ಲ. ಮಹಿಳಾ ಸಹಾಯವಾಣಿ ಕೂಡ ನಮಗೆ ಸಹಾಯ ಮಾಡಿಲ್ಲ. ದಯವಿಟ್ಟು ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಿ ಎಂದು ಟ್ವೀಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

Varun Dhawan ಈ ಕೃತ್ಯದಿಂದ ಕೋಪಗೊಂಡು ಕಪಾಳಮೋಕ್ಷ ಮಾಡುತ್ತೇನೆ ಎಂದ salman khan

ಮಹಿಳೆ ಟ್ವೀಟ್ ಮಾಡಿದ ಕೆಲವೇ ಗಂಟೆಯಲ್ಲಿ ನಟ ವರುಣ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ. 'ಇದು ಖಂಡಿತವಾಗಿಯೂ ತುಂಬಾ ಗಂಭೀರ ಸಮಸ್ಯೆಯಾಗಿದೆ. ಇದು ನಿಜವೇ ಆಗಿದ್ದರೇ ನಾನು ನಿಮಗೆ ಖಂಡಿತ ಸಹಾಯ ಮಾಡುತ್ತೇನೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ಇದಕ್ಕೆ ಮಹಿಳಾ ಅಭಿಮಾನಿ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. 'ಧನ್ಯವಾದಗಳು ವರುಣ್ ಧವನ್. ನಾನು ನಿಮಗೆ ಯಾವಾಗಲು ಕೃತಜ್ಞಳಾಗಿರುತ್ತೇನೆ' ಎಂದು ಹೇಳಿದ್ದಾರೆ.

Scroll to load tweet…

Rashmika Mandanna: ಮೋಡಿ ಮಾಡುತ್ತಿದೆ ವರುಣ್-ರಶ್ಮಿಕಾ ಡ್ಯಾನ್ಸ್ ಸ್ಟೆಪ್ಸ್!

ವರುಣ್ ಧವನ್ ಮತ್ತು ಮಹಿಳಾ ಅಭಿಮಾನಿಯ ಟ್ವಿಟ್ಟರ್ ಮಾತುಕತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ವರುಣ್ ಧವನ್ ಅವರನ್ನು ಹಾಡಿಹೊಗಳುತ್ತಿದ್ದಾರೆ. ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ ನೀವು ತುಂಬ ಸರಳ ವ್ಯಕ್ತಿ. ಸ್ವೀಟ್ ಪರ್ಸನ್ ಎಂದು ಹೇಳಿದ್ದಾರೆ. ವರುಣ್ ಸದ್ಯ ಜಗ್ ಜಗ್ ಜಿಯೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಜೊತೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್, ನೀತು ಕಪೂರ್ ಸೇರಿದಂತೆ ಅನೇಕ ಕಲಾವಿದರು ಮಿಂಚಿದ್ದಾರೆ. ಈ ಸಿನಿಮಾ ಜೂನ್ 24ರಂದು ತೆರೆಗೆ ಬರುತ್ತಿದೆ.