ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ವೀಕ್ಷಿಸಲು ಹೋದ ನಟಿ ಊರ್ವಶಿ ರೌಟೇಲಾ ಅವರ ಚಿನ್ನದ ಐಫೋನ್​ ಕಳೆದುಹೋಗಿದೆಯಂತೆ. ನಟಿ ಹೇಳಿದ್ದೇನು? 

ನಿನ್ನೆ ಗುಜರಾತ್​ನ ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯಾವಳಿ ವೇಳೆ, ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿಗೆ ಭಾರತೀಯರೆಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಈ ಕ್ರಿಕೆಟ್​ ಪಂದ್ಯಕ್ಕೆ ಸಾಕ್ಷಿಯಾಗಲು ಹಲವಾರು ನಟ-ನಟಿಯರು ಅಹಮದಾಬಾದ್​ಗೆ ತೆರಳಿದ್ದರು. ಅವರಲ್ಲಿ ಒಬ್ಬರು ಬಾಲಿವುಡ್​ ಖ್ಯಾತ ನಟಿ ಊರ್ವಶಿ ರೌಟೇಲಾ (Uravashi Rautela) . ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದರು. ಇವರು ಕೂಡ ಭಾರತ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದರು. ಆದರೆ ಇದೇ ವೇಳೆ ಅವರಿಗೆ ಶಾಕ್​ ಆಗುವ ಘಟನೆ ನಡೆದಿದೆ. ಅದೇನೆಂದರೆ, ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಮ್ಯಾಚ್ ನೋಡಲು ಹೋಗಿದ್ದ ವೇಳೆ ಊರ್ವಶಿ ಅವರು ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದಾರಂತೆ!

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

ಊರ್ವಶಿ ರೌಟೇಲಾ ಸುಳ್ಳು ಹೇಳುತ್ತಿದ್ದಾರೆ. ಇದೊಂದು ಪ್ರಚಾರ ಪಡೆಯುವ ತಂತ್ರ ಎಂದು ಕೆಲವರು ಆರೋಪ ಮಾಡಿದ್ದಾರೆ. ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ನಟಿಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಚಿನ್ನದ ಫೋನು ಸಿಕ್ಕಿದವನು ಅದೃಷ್ಟ ಮಾಡಿದ್ದಾನೆ ಎಂತಲೂ, ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ಕುಹುಕವಾಡಿದ್ದಾರೆ.

ಅಷ್ಟಕ್ಕೂ ನಟಿ ಟ್ರೋಲ್​ಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಊರ್ವಶಿ ರೌಟೇಲಾ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿರೋ ನಟಿ. ಕ್ರಿಕೆಟಿಗ ರಿಷಬ್ ಪಂತ್ (Rishab Pant) ಅವರನ್ನು ಬಿಟ್ಟೂಬಿಡದೆ ಕಾಡುತ್ತಿದ್ದ ಈ ನಟಿಯ ಬಗ್ಗೆ ರಿಷಬ್ ಪಂತ್​ ಅಭಿಮಾನಿಗಳು ಹರಿಹಾಯ್ದಿದ್ದರು. ರಿಷಬ್​ ಮತ್ತು ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೂ ರಿಷಬ್​ ಅವರನ್ನು ಊರ್ವಶಿ ಬಿಡದೇ ಕಾಡುತ್ತಿದ್ದರು. ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, 'ಅಕ್ಕಾ ನನ್ನ ಬಿಟ್ಟು ಬಿಡು' ಎಂದಿದ್ದರು. ಹೀಗೆ ಈಕೆ ಅವರನ್ನು ಕಾಡಿದ್ದು ಎಲ್ಲಿಯವರೆಗೆ ಎಂದರೆ ಭೀಕರ ಅಪಘಾತದಲ್ಲಿ ರಿಷಬ್​ ಪಂತ್​ ಆಸ್ಪತ್ರೆಗೆ ದಾಖಲಾಗಿದ್ದರೂ ಊರ್ವಶಿ ರೌಟೇಲಾ ಅವರ ಹಿಂದೆ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ರಿಷಬ್‌ ಅವರಿಗೆ ಅಪಘಾತವಾಗಿದೆ ಎಂದು ತಿಳಿದಾಗ ಊರ್ವಶಿ 'ಪ್ರಾರ್ಥನೆ' (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್​ ಅಭಿಮಾನಿಗಳು ಛೀಮಾರಿ ಹಾಕಿದ್ದರು.

ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್​!

Scroll to load tweet…