Asianet Suvarna News Asianet Suvarna News

ಕೆಲವೇ ಸೆಕೆಂಡ್‌ನ ಪ್ರಮೋಷನ್ ವಿಡಿಯೋದಲ್ಲಿ ನಟಿಸಲು ಊರ್ವಶಿ ಪಡೆದ ಸಂಭಾವನೆ ಕೇಳಿದ್ರೆ ಹೌಹಾರ್ತೀರಾ

ನಟಿ ಊರ್ವಶಿ ರೌಟೇಲಾ ಸಂಭಾವನೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವೇ ಸೆಕೆಂಡ್‌ನ ವಿಡಿಯೋದಲ್ಲಿ ಕಾಣಿಸಿಕೊಳ್ಳಲು ಊರ್ವಶಿ ಭರ್ಜರಿ ಮೊತ್ತದ ಹಣ ಪಡೆದಿದ್ದಾರೆ.  

Urvashi Rautela likely to charge Netflix a staggering Rs 15 crore for few seconds sgk
Author
First Published Dec 24, 2022, 1:58 PM IST

ನಟಿ ಊರ್ವಶಿ ರೌಟೇಲಾ ಸಿನಿಮಾ ವಿಚಾರಗಳಿಂದ ಬೇರೆ ಬೇರೆ ವಿಚಾರಕ್ಕೆ ಸುದ್ದಿಯಾಗಿದ್ದೆ ಹೆಚ್ಚು. ಇತ್ತೀಚಿಗೆ ಊರ್ವಶಿ ಟೀ ಇಂಡಿಯಾ ಆಟಗಾರ ರಿಷಬ್ ಪಂತ್ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇಬ್ಬರ ಮುನಿಸು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದಾ ಸದ್ದು ಸುದ್ದಿಯಲ್ಲಿರಲು ಬಯಸುವ ನಟಿ ಊರ್ವಶಿ ಪ್ರಮೋಷನ್‌ಗೆ ಕೋಟಿ ಕೋಟಿ ಚಾರ್ಜ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ಪ್ರಚಾರದ ಕೆಲವೇ ಸೆಕಂಡ್‌ನ ವಿಡಿಯೋಗಾಗಿ ಊರ್ವಶಿ ಕೋಟಿ ಕೋಟಿ ಬೇಡಿಕೆ ಇಟ್ಟಿದ್ದಾರೆ. ಅಚ್ಚರಿ ಎನಿಸಿದ್ರು ಇದು ನಿಜ. 

ಒಟಿಟಿಗಳ ದೈತ್ಯ ಎಂದೇ ಕರೆಸಿಕೊಳ್ಳುವ ನೆಟ್‌ಫ್ಲಿಕ್ಸ್‌ ಸಿನಿಮಾ ವಿಚಾರವಾಗಿ ವಿಡಿಯೋವನ್ನು ರಿಲೀಸ್ ಮಾಡಿದೆ. 2022ಗೆ ಅದ್ದೂರಿ ತೆರೆ ಬೀಳುತ್ತಿದೆ. ಈ ಸಮಯದಲ್ಲಿ ಒಂದು ವಿಡಿಯೋವನ್ನು ಮಾಡಿದೆ.  ಇದರಲ್ಲಿ ಊರ್ವಶಿ ಕಾಣಿಸಿಕೊಂಡಿದ್ದಾರೆ.  ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಮೊದಲಾದವರು ಇದ್ದಾರೆ.  ಹಾಲಿವುಡ್​ ನಟ ರೈನ್​ ಗಾಸ್ಲಿಂಗ್ ಹಾಗೂ ಊರ್ವಶಿ ಎದುರುಬದುರು ಕೂತಿರುತ್ತಾರೆ. ಊರ್ವಶಿ ಕೈ ಮೇಲೆ ‘RP’ ಎಂದು ಬರೆದುಕೊಂಡಿದ್ದರು. P ಮೇಲೆ ಗೀಟು ಹಾಕಿ G ಎಂದು ಬರೆದುಕೊಳ್ಳುತ್ತಾರೆ. ಆರ್​ ಜಿ ಎಂದರೆ ರೈನ್​ ಗಾಸ್ಲಿಂಗ್ ಎಂದರ್ಥ. ಕೆಲವೇ ಸೆಕೆಂಡ್​ನಲ್ಲಿ ಮುಗಿಯುವ ಈ ದೃಶ್ಯಕ್ಕೆ ಊರ್ವಶಿ ಪಡೆದ ಸಂಭಾವನೆ ಬೆಚ್ಚಿ ಬೇಳಿಸಿದೆ.  

ಪಿಂಕ್ ಟ್ಯೂಬ್ ಬಾಡಿಕಾನ್ ಡ್ರೆಸ್‌ನಲ್ಲಿ ಊರ್ವಶಿ ರೌಟೇಲಾ ಮಾದಕ ಲುಕ್‌ ವೈರಲ್‌

ಅಂದಹಾಗೆ ಈ ಒಂದು ದೃಶ್ಯದಲ್ಲಿ ನಟಿಸಲು ಊರ್ವಶಿ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಊರ್ವಶಿ ರೌಟೇಲಾ ಬಳಿ ಹೆಚ್ಚು ಸಿನಿಮಾಗಳು ಇಲ್ಲದಿದ್ದರೂ ಖ್ಯಾತಿ ಕಡಿಮೆಯಾಗಿಲ್ಲ. ಕನ್ನಡ ಸಿನಿಮಾದಲ್ಲೂ ನಟಿಸಿರುವ ಊರ್ವಶಿ ಕೊನೆಯದಾಗಿ ದಿ ಲೆಜೆಂಡ್ ತಮಿಳು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಊರ್ವಶ ಬಳಿ ಮೂರು ತೆಲುಗು ಮತ್ತು  ಒಂದು ಹಿಂದಿ ಸಿನಿಮಾವಿದೆ. ಸಿನಿಮಾಗಳ ಜೊತೆಗೆ ಊರ್ವಶಿ ಸಂಗೀತ  ವಿಡಿಯೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.  ಜೊತೆಗೆ ವೆಬ್ ಸೀರಿಸ್ ನಲ್ಲೂ ಮಿಂಚಿದ್ದಾರೆ. ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಾಣದಿದ್ದರೂ ಊರ್ವಶಿ ಸಂಭಾವನೆ ಅಚ್ಚರಿ ಮೂಡಿಸಿದೆ.

ರಿಷಭ್ ಪಂತ್, ಊರ್ವಶಿ ರೌಟೇಲಾ ಲಿಂಕ್-ಅಪ್: ಬಾಯಿ ಬಿಟ್ಟ ಶುಭಮನ್ ಗಿಲ್

ರಿಷಬ್ ಪಂತ್ ಜೊತೆ ಡೇಟಿಂಗ್ ವದಂತಿ 

ನಟಿ ಊರ್ವಶಿ ಹಾಗೂ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ  2018ರಲ್ಲಿ ವೈರಲ್ ಆಗಿತ್ತು. ಇಬ್ಬರೂ ಕೆಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ಬೇರೆ ಆದರು. ಆದರೆ, ಈ ವಿಚಾರವನ್ನು ರಿಷಬ್ ಪಂತ್ ಅಲ್ಲ ಗಳೆದಿದ್ದರು. ಇಶಾ ನೇಗಿ ಜತೆ ರಿಲೇಶನ್​ಶಿಪ್​ನಲ್ಲಿರುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಈಗ ಊರ್ವಶಿ ರೌಟೇಲಾ ಪಂತ್ ಹಿಂದೆ ಬಿದ್ದಾರೆ ಎನ್ನಲಾಗಿದೆ. ಸ್ಟೇಡಿಯಮ್ ನಲ್ಲೂ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.   

Follow Us:
Download App:
  • android
  • ios