Asianet Suvarna News Asianet Suvarna News

Urfi Javed ಅರೆಬೆತ್ತಲಾಗಿ ಓಡಾಡಿದ್ದಕ್ಕೆ ದುಬೈನಲ್ಲಿ ಅರೆಸ್ಟ್‌?!

ವಿಡಿಯೋ ಮಾಡುತ್ತಿದ್ದ ಉರ್ಫಿನ ತಡೆದ ಪೊಲೀಸರು. ಅರೆಬೆತ್ತಲಾಗಿ ಓಡಾಡಿ ಸಂಕಷ್ಟದಲ್ಲಿ ಸಿಲುಕಿಕೊಂಡು ನಟಿ.....

Urfi Javed detention in dubai for revealing cloth actress statement vcs
Author
First Published Dec 22, 2022, 1:01 PM IST

ಬಾಲಿವುಡ್ ಚಿತ್ರರಂಗದ ಹಾಟ್ ಆಂಡ್ ಕ್ಯೂಟ್ ನಟಿ ಉರ್ಫಿ ಜಾವೇದ್ ಕೆಲವು ದಿನಗಳಿಂದೆ ದುಬೈ ಪ್ರವಾಸದಲ್ಲಿದ್ದಾರೆ. ವಿಚಿತ್ರ ವಿಚಿತ್ರ ಉಡುಪು ಧರಿಸಿ ದುಬೈನ್‌ ಪ್ರಮೋಟ್ ಮಾಡುತ್ತಿರುವುದಾಗಿಯೂ ಬಿಂಬಿಸುತ್ತಿದ್ದಾರೆ ಆದರೆ ಇದರಿಂದ ಉರ್ಫಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅದುವೇ ಅರೆಬೆತ್ತಲಾಗಿ ಪೊಲೀಸರ ಕೈಗೆ ಸಿಲುಕಿಕೊಂಡಿರುವುದು... 

ಹೌದು! ಬಿಗ್ ಬಾಸ್ ಓಟಿಟಿಯಿಂದ ಹೊರ ಬರುತ್ತಿದ್ದಂತೆ ಉರ್ಫಿ ಜಾವೇದ್ ಹೊಸ ರೀತಿಯಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ಉಡುಪು ತಾವೇ ಡಿಸೈನ್ ಮಾಡಿಕೊಂಡು ಸಾರ್ವಜನಿಕ ಸ್ಥಳಗಲ್ಲಿ ಓಡಾಡುವುದಲ್ಲದೆ ಪ್ಯಾಪರಾಜಿಗಳನ್ನು ಕರೆಸಿಕೊಂಡು ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ಇದು ಭಾರತದಲ್ಲಿ ಓಕೆ ಆದರೆ ದುಬೈನಲ್ಲಿ? ದುಬೈ ಪ್ರವಾಸದಲ್ಲಿರುವ ಉರ್ಫಿ ತುಂಟಾಟವನ್ನು ಪೊಲೀಸರು ತಡೆದಿದ್ದಾರೆ. 

ಸೀಕ್ರೆಟ್‌ ಪ್ರಾಜೆಕ್ಟ್‌ಗೆಂದು ಉರ್ಫಿ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ದುಬೈನಲ್ಲಿ ಇರಲಿದ್ದಾರೆ. ಈ ನಡುವೆ ಅರೆಬೆತ್ತಲಾಗಿ ಉಡುಪು ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದ ಉರ್ಫಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ವೈರಲ್ ಅಗುತ್ತಿರುವುದಕ್ಕೆ ಪೊಲೀಸರು ಇಂತಹ ಉಡುಪುಗಳನ್ನು ಪಬ್ಲಿಕ್‌ನಲ್ಲಿ ಧರಿಸುವಂತಿಲ್ಲ ಇದು ತಪ್ಪು ಎಂದು ಕಂಡಿಸಿದ್ದಾರೆ. ಇಟೈಮ್ಸ್‌ ನೀಡಿರುವ ಮಾಹಿತಿ ಪ್ರಕಾರ ಉರ್ಫಿ ಓಪನ್ ಏರಿಯಾದಲ್ಲಿ ಅರೆಬೆತ್ತಲೆ ಉಡುಪು ಧರಿಸಿರುವ ಕಾರಣ ಪ್ರಶ್ನೆ ಮಾಡಿದ್ದಾಗೆ ಹಾಗೂ ಭಾರತಕ್ಕೆ ಹಿಂತಿರುಗ ಟಿಕೆಟ್‌ನ ಮುಂದೂಡಿದ್ದಾರೆ ಎನ್ನಲಾಗಿದೆ. 

Urfi Javed detention in dubai for revealing cloth actress statement vcs

ಉರ್ಫಿ ಕ್ಲಾರಿಟಿ:

'ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ಸುಳ್ಳು. ಬೇರೆ ಯಾವುದೋ ಕಾರಣಕ್ಕೆ ಪೊಲೀಸರು ಶೂಟ್‌ ನಿಲ್ಲಿಸಲು ಬಂದಿದ್ದರೆ ಅದಕ್ಕೂ ನನ್ನ ಉಡುಪಿಗೂ ಯಾವ ಸಂಬಂಧವಿಲ್ಲ. ಶೂಟಿಂಗ್ ನಡೆಸಲು ನಮಗೆಂದು ಸಮಯ ಕೊಟ್ಟಿದ್ದರು ಆದರೆ ಪ್ರೊಡಕ್ಷನ್‌ ಟೀಂ ಸಮಯಕ್ಕೆ ಸರಿಯಾಗಿ ಮುಗಿಸದ ಕಾರಣ ನಾವು ಅಲ್ಲಿಂದ ಹೊರಡಬೇಕಿತ್ತು.ಈ ಘಟನೆಗೂ ನನ್ನ ಉಡುಪಿಗೂ ಯಾವ ಸಂಬಂಧವಿಲ್ಲ. ಮರುದಿನ ನಾವು ಚಿತ್ರೀಕರಣ ಶುರು ಮಾಡಿದೆವು ಹೀಗಾಗಿ ಏನೂ ಸಮಸ್ಯೆ ಇಲ್ಲ' ಎಂದು ಉರ್ಫಿ ಕ್ಲಾರಿಟಿ ಕೊಟ್ಟಿದ್ದಾರೆ.

ಚಿಕ್ಕ ಹುಡುಗರೂ ಕಿರುಕುಳ ಕೊಡ್ತಿದ್ದಾರೆ ಅಂತಿದ್ದಾಳೆ ಉರ್ಫಿ; ಆ 10 ಹುಡುಗರು ಏನ್ ಕಾಟ ಕೊಟ್ರು?

ದೂರು ದಾಖಲು:

ಉರ್ಫಿ ಜಾವೇದ್ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ನಡವಳಿಕೆ ತೋರುತ್ತಿದ್ದಾರೆಂದು ಆಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ ದಾಖಲಿಸಿರುವುದಾಗಿ ತಿಳಿದು ಬಂದಿದೆ. 'ಎರಡು ದಿನಗಳ ಹಿಂದೆ ದೂರಿನ ಪತ್ರ ಕೊಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಿಕಿನಿ ಧರಿಸಿ ಅದಕ್ಕೆ ಗ್ರೀನ್ ಬಣ್ಣದ ನೆಟ್‌ ಧರಿಸಿ ರಸ್ತೆಗಿಳಿದ ಉರ್ಫಿ ಲುಕ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಯಾವ ಕಾರ್ಯಕ್ರಮಕ್ಕೆ ಈ ರೀತಿ ಧರಿಸುತ್ತಿದ್ದಾರೆ, ಈ ರೀತಿ ಉಡುಪು ಧರಿಸಿ ಎಲ್ಲಿಗೆ ಹೋಗುತ್ತಿದ್ದಾರೆ ಏನು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಹೀಗಾಗಿ ಹೆಸರಲು ಮಾಡಲು ಉರ್ಫಿ ಬೇಕೆಂದು ಈ ರೀತಿ ಡ್ರೆಸ್ ಧರಿಸುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. 

ಮೊಬೈಲ್ ಫೋನ್ ಮೂಲಕ ತನ್ನ 'ಖಾಸಗಿ ಆಸ್ತಿ' ರಕ್ಷಿಸಿಕೊಂಡ ಉರ್ಫಿ

ಮೆಣಸಿನ ಟ್ಯಾಟೂ ವೈರಲ್:

ಇತ್ತೀಚೆಗೆ ತಾನೇ ಈಕೆ ಒಂದು ವಿಚಿತ್ರ ಔಟ್‌ಫಿಟ್ ಧರಿಸಿ ಸುದ್ದಿಯಾಗಿದ್ದಳು. ತನ್ನ ಸ್ತನಗಳ ಮೇಲೆ ಬ್ರಾದ ಬದಲು ಎರಡು ಮೊಬೈಲ್ ಫೋನ್‌ಗಳನ್ನು ತೂಗುಬಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಳು. ಈ ಪೋಟೋಗೆ ಜನ ಸಕತ್ ಟ್ರೋಲ್ ಮಾಡಿದ್ದರು. ಇದೇನು ಫೋನ್ ಚಾರ್ಜಿಂಗ್ ಪಾಯಿಂಟಾ ಅನ್ನೋದು ಸುಮಾರು ಮಂದಿಯ ಕೊಂಕುನುಡಿಯಾಗಿತ್ತು.ಈಕೆಯ ಫೋಟೋ ಯಾವಾಗಲೂ ನೋಡುವವರು ಒಂದು ವಿಶೇಷ ಗಮನಿಸಿರಬಹುದು. ಈಕೆಯ ಎಡ ಪಕ್ಕೆಯ ಮೇಲೆ, ಎದೆಯಿಂದ ಕೊಂಚ ಕೆಳಗೆ, ಒಂದು ಮೆಣಸಿನಕಾಯಿಯ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅದನ್ನು ತೋರಿಸುವುದು ಎಂದು ಆಕೆಗೆ ಬಲು ಇಷ್ಟ. ಮೆಣಸಿನಕಾಯಿ ಅಂದ್ರೆ ಮತ್ತೇನಿಲ್ಲ, ತಾನು ಮೆಣಸಿನಷ್ಟೇ ಖಾರ- ಹಾಟ್ ಎಂದು ಹೇಳುವ ಪ್ರಯತ್ನ ಅಷ್ಟೇ!

Follow Us:
Download App:
  • android
  • ios