Asianet Suvarna News Asianet Suvarna News

ಚಿಕ್ಕ ಹುಡುಗರೂ ಕಿರುಕುಳ ಕೊಡ್ತಿದ್ದಾರೆ ಅಂತಿದ್ದಾಳೆ ಉರ್ಫಿ; ಆ 10 ಹುಡುಗರು ಏನ್ ಕಾಟ ಕೊಟ್ರು?

ಉರ್ಫಿ ಜಾವೇದ್ ಅಂದಾಕ್ಷಣ ಅವಳ ಅರೆಬರೆ ಬಟ್ಟೆಯೇ ಮೊದಲು ನೆನಪಾಗುತ್ತೆ. ಉರ್ಫಿಗೆ ಹುಡುಗರ ಕಾಟ ಭಾಳಾ ಜೋರಾಗಿದೆಯಂತೆ. ಅದರಲ್ಲೂ ಚಿಕ್ಕ ಹುಡುಗರು ತನಗೆ ಕಿರುಕುಳ ಕೊಡ್ತಿದ್ದಾರೆ ಅಂತ ಈ ನಟಿ ದೂರಿಕೊಂಡಿದ್ದಾರೆ. ಅಷ್ಟಕ್ಕೂ ಆ ಹತ್ತು ಚಿಕ್ಕ ಹುಡುಗರು ಈ ಹಾಟ್ ನಟಿಗೆ ಏನ್ ಕಾಟ ಕೊಟ್ಟರು?

 

Teen kids abused Urfi Javed
Author
First Published Dec 5, 2022, 3:22 PM IST

ಉರ್ಫಿ ಜಾವೇದ್ ಅಂತ ಗೂಗಲ್‌ನಲ್ಲಿ ಸರ್ಚ್ ಕೊಟ್ಟರೆ ಮೊದಲು ಸಿಗೋದು ಆಕೆಯ ಅರೆಬರೆ ಬಟ್ಟೆಯ ಫೋಟೋಗಳು, ಆ ಕುರಿತ ಸುದ್ದಿಗಳು. ಇದರ ಜೊತೆಗೆ ಕಿರಿಕ್‌ಗೂ ಈ ನಟಿ ಫೇಮಸ್. ಒಂದಿಲ್ಲೊಂದು ಕಿರಿಕ್ ಮಾಡ್ತಲೇ ಸುದ್ದಿ ಆಗ್ತಾರೆ. ಓಟಿಟಿಯಲ್ಲಿ ನೆಟಿಜನ್ಸ್ ತನ್ನ ಶೋನಿಂದ ಕೊಂಚವೂ ಅತ್ತಿತ್ತ ಅಲುಗಾಡದಂತೆ ಹಿಡಿದಿಡೋದು ಇವಳಿಗೆ ಕರತಲಾಮಲಕ. ಅಷ್ಟೇ ಅಲ್ಲ, ಜಗಳ ಕಾಯೋದ್ರಲ್ಲೂ ಈಕೆ ಸಖತ್ ಫೇಮಸ್‌. ಚಾಹತ್ ಖನ್ನಾನಿಂದ ಜನಪ್ರಿಯ ಲೇಖಕ ಚೇತನ್ ಭಗತ್‌ ಮೇಲೆ ಮಾತಿನ ದಾಳಿ ಮಾಡಿ ಈ ನಾಟಿ ಹುಡುಗಿ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಲೆಕ್ಕವಿಲ್ಲ. ಈಕೆಯ ಬಟ್ಟೆ, ಆಟಿಟ್ಯೂಟ್, ಮಾದಕ ನಡೆಗೆ ಕರಗದವರಿಲ್ಲ. ಈ ನಟಿಗೆ ಅಡಿಗಡಿಗೆ ಹುಡುಗರು ಕಾಟ ಕೊಡೋದು, ಈಕೆಯ ಹಿಂದೆ ಬೀಳೋದು ಕಾಮನ್ ಆಗಿ ಬಿಟ್ಟಿದೆ. ಆದರೆ ಇಷ್ಟೇ ಆದ್ರೆ ಏನೋ ಹೂವಿನಂಥಾ ಹುಡುಗಿಗೆ ಚಿಟ್ಟೆಯಂಥಾ ಹುಡುಗ್ರು ಹಾವಳಿ ಇಡ್ತಿದ್ದಾರೆ ಅನ್ನಬಹುದಿತ್ತೋ, ಆದರೆ ಈಗ ಬಾಲಕರೂ ಈಕೆಯ ಹಿಂದೆ ಬಿದ್ದಿದ್ದಾರಂತೆ . ಹತ್ತು ಜನ ಹೈಸ್ಕೂಲ್ ಮಕ್ಕಳು ತನಗೆ ಕಿರುಕುಳ ನೀಡ್ತಿರೋದಾಗಿ ಉರ್ಫಿ ಕಂಗಾಲಾಗಿ ಹೇಳಿದ್ದಾರೆ.

ಹತ್ತು ಜನ ಹದಿ ಹರೆಯದ ಹುಡುಗರು ತನಗೆ ಪದೇ ಪದೇ ಕಾಲ್ ಮಾಡ್ತಿದ್ದಾರೆ, ನನ್ನ ಮೇಲೆ ಕೆಟ್ಟದಾಗಿ ಕಾಮೆಂಟ್ಸ್ ಪಾಸ್ ಮಾಡ್ತಿದ್ದಾರೆ ಅಂತ ನಟಿ ಕಂಗಾಲಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳ್ಕೊಂಡಿದ್ದಾಳೆ. ಇವರ ಕಾಟ ಎಷ್ಟು ಜೋರಾಗಿದೆ ಅಂದರೆ ತಡೀಲಿಕ್ಕಾಗದೇ ಉರ್ಫಿ ಪೊಲೀಸ್ ಕಂಪ್ಲೇಂಟ್ ಕೊಡೋದಕ್ಕೂ ಹೊರಟಿದ್ದಾಳೆ. 'ಹತ್ತು ಜನ ಟೀನೇಜ್ ಹುಡುಗರು ನನಗೆ ವಿಪರೀತ ಕಿರುಕುಳ ಕೊಡ್ತಿದ್ದಾರೆ' ಅಂತ ಉರ್ಫಿ ಕಂಪ್ಲೇಟ್ ಮಾಡ್ತಿದ್ದಾರೆ.

'ಈ ಹುಡುಗರಿಗೆ ನನ್ನ ನಂಬರ್ ಅದೆಲ್ಲಿಂದ ಸಿಕ್ಕಿತೋ ಗೊತ್ತಿಲ್ಲ. ಈ ಮಕ್ಕಳಿಗೆಲ್ಲ ಏನಾಗಿದೆ? ಯಾಕೆ ಹೀಗೆ ವಿನಾ ಕಾರಣ ನನಗೆ ಕಾಟ ಕೊಡ್ತಿದ್ದಾರೆ? ನಾನು ಈ ಪುಂಡು ಹುಡುಗರ ವಿರುದ್ಧ ಪೊಲೀಸರಿಗೆ ದೂರು ನೀಡ್ತೇನೆ. ಈ ಹುಡುಗರ ಪಾಲಕರು ಯಾರು ಅಂತ ಗೊತ್ತಿದ್ದರೆ ತಿಳಿಸಿ, ನಿಮಗೆ ಬಹುಮಾನ ಕೊಡುತ್ತೇನೆ' ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಶ್ಮಿಕಾಗೆ ಬುದ್ದಿ ಹೇಳಿದ ತೆಲುಗು ಮಂದಿ... ಅಲ್ಲೇನು ಮಾಡಿದ್ರು ಕಿರಿಕ್ ಬೆಡಗಿ

ಉರ್ಫಿ ಇಲ್ಲಿ ಈ ಹುಡುಗರ ಗುಂಪಿನಲ್ಲಿರುವ ಹುಡುಗನೊಬ್ಬ ಪ್ರೊಫೈಲ್‌ ಅನ್ನೂ ತನ್ನ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ. ಆತನನ್ನು ಟ್ಯಾಗ್(Tag) ಮಾಡಿಯೇ ಈ ಹುಡುಗರ ವಿರುದ್ಧ ಬರೆದುಕೊಂಡಿದ್ದಾಳೆ. ಈ ಹತ್ತು ಹುಡುಗರು ಬೇರೆ ಬೇರೆ ನಂಬರ್‌ನಿಂದ ಕಾಲ್ ಮಾಡುತ್ತಲೇ ಇರ್ತಾರೆ. ಪ್ರಾಂಕ್ ಕಾಲ್ ಮಾಡ್ತಾ ನನಗೆ ಕಿರುಕುಳ ನೀಡ್ತಿದ್ದಾರೆ. ಈ ಕಾಲದ ಮಕ್ಕಳ ಮನಸ್ಸಲ್ಲಿ ನಿಜಕ್ಕೂ ಏನಿದೆ ಅಂತಲೇ ಗೊತ್ತಾಗ್ತಿಲ್ಲ. ನಾನು ಈ ಮಕ್ಕಳ ಬಗ್ಗೆ ಪೊಲೀಸರಿಗೆ ದೂರು(Complaint) ನೀಡ್ತೇನೆ' ಅಂತ ಗರಂ ಆಗಿ ನಟಿ ಸ್ಟೇಟಸ್ ಹಾಕಿದ್ದಾರೆ. ಈ ಹುಡುಗರ ಪೋಷಕರ ಬಗ್ಗೆ ಗೊತ್ತಿದ್ದಲ್ಲಿ ತಿಳಿಸಿದರೆ ಹಾಗೆ ತಿಳಿಸಿದವರಿಗೆ ಉರ್ಫಿ ಗಿಫ್ಟ್‌(Gift) ಅನ್ನೂ ಕೊಡ್ತಾರಂತೆ.

ಅಯ್ಯೋ ರಾಮ.. ಟ್ರೆಡ್ಮಿಲ್‌ನಲ್ಲಿ ಹಯೇ ರಾಮ ಹಾಡಿಗೆ ಡಾನ್ಸ್ ಮಾಡಿದ ತರುಣ

ಇದಕ್ಕಿಂತ ಮಜಾ ಆಗಿರೋ ಸಂಗತಿ ಅಂದರೆ ಈಕೆ ಬೈದಿರೋ ಮಕ್ಕಳು ಈ ಪೋಸ್ಟನ್ನು(Post) ಖುಷಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಕಂಡು ಉರ್ಫಿಗೆ ಮೈ ಎಲ್ಲ ಉರಿದುಹೋಗಿದೆ. ಈ ಕಾಲದ ಮಕ್ಕಳು(Kids) ಸಂಪೂರ್ಣ ಕೆಟ್ಟು ಹೋಗಿದ್ದಾರೆ ಅನ್ನುತ್ತಲೇ ಹುಡುಗರನ್ನು ಜೈಲಿಗೆ ಕಳಿಸಲು ಹೊರಟಿದ್ದಾರೆ ಉರ್ಫಿ. ಈ ಹುಡುಗರು ಎಷ್ಟು ಕೆಟ್ಟುಹೋಗಿದ್ದಾರೆ ಅಂದರೆ ಅವರಿಗೆ ಕಂಬಿ ಎಣಿಸೋ ಹಾಗೆ ಮಾಡಿದ್ರಷ್ಟೇ ಸರಿಹೋಗುತ್ತೆ ಅಂತ ನಟಿ ಸಿಟ್ಟಿನಲ್ಲಿ ಹೇಳಿದ್ದಾರೆ. ಉರ್ಫಿಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ಸಾಕಷ್ಟು ಜನ ನೆಟಿಜನ್ಸ್ ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios