Asianet Suvarna News Asianet Suvarna News

Singer KK Death ಖ್ಯಾತ ಪ್ಲೇ ಬ್ಯಾಕ್ ಸಿಂಗರ್ ಕೆಕೆ ನಿಧನ, ಪ್ರಧಾನಿ ಮೋದಿ ಸಂತಾಪ!

  • ಬಾಲಿವುಡ್ ಸಿಂಗ್ ಕೆಕೆ ನಿಧನಕ್ಕೆ ಮೋದಿ ಸಂತಾಪ
  • ಕೆಕೆ ಸಾವಿಗೆ ಆಘಾತ ವ್ಯಕ್ತಪಡಿಸಿದ ನರೇಂದ್ರ ಮೋದಿ
  • ಸಂಗೀತ ಕಾರ್ಯಕ್ರಮ ಬಳಿಕ ಕುಸಿದು ಬಿದ್ದ ಕೆಕೆ
Play back Singer KK Demise PM Modi pays tribute says always remember him through his songs ckm
Author
Bengaluru, First Published Jun 1, 2022, 1:49 AM IST

ಕೋಲ್ಕತಾ(ಜೂ.01): ಖ್ಯಾತ ಹಿನ್ನೆಲೆ ಗಾಯಕ ಕೆಕೆ ಎಂದೇ ಪಾಪ್ಯುಲರ್ ಆಗಿರುವ ಕೃಷ್ಣಕುಮಾರ್‌ ಕುನ್ನತ್‌  ಮಂಗಳವಾರ(ಮೇ.31) ರಾತ್ರಿ ನಿಧನರಾಗಿದ್ದಾರೆ. ಕೋಲ್ಕತಾದಲ್ಲಿ ಆಯೋಜಿಸಿದ ಕಾರ್ಯಕ್ರಮ ಮುಗಿಸಿ ಹೊಟೆಲ್ ತೆರಳಿದ ವೇಳೆ ಕುಸಿದು ಬಿದ್ದ ಕೆಕೆ ಹೃದಯಾಘಾತದಿಂದ ನಿಧರಾಗಿದ್ದಾರೆ. ಕೆಕೆ ನಿಧನ ವಾರ್ತೆಯಿಂದ ತೀವ್ರ ದುಖವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೆಕೆ ಎಂದೇ ಖ್ಯಾತರಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರು ಕನ್ನತ್ ಅಕಾಲಿಕ ನಿಧನ ಆಘಾತ ಹಾಗೂ ತೀವ್ರ ನೋವು ತಂದಿದೆ. ಕೆಕೆ ಅವರ ಹಾಡುಗಳು ಎಲ್ಲರಲ್ಲಿ ಮನಸ್ಸಿನಲ್ಲಿ ಬೇರೂರಿದೆ. ಭಾವನೆಗಳನ್ನು ಪ್ರತಿಬಂಬಿಸುವ ಕೆಕೆ ಹಾಡುಗಳು ಎಲ್ಲಾ ವಯೋಮಾನದವರಲ್ಲಿ ಹಾಸು ಹೊಕ್ಕಿದೆ. ಕೆಕೆ ಹಾಡುಗಳ ಮೂಲಕ ಸದಾ ಅವರನ್ನು ಸ್ಮರಿಸುತ್ತೇವೆ. ಅವರ ಕಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಸಂತಾಪ.  ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. 

ಗಾಯಕ ಕೆಕೆ ಸಾವಿನ ಕೆಲವೇ ಕ್ಷಣಗಳ ಮುನ್ನ ನೀಡಿದ್ದ ಸಂಗೀತ ಕಾರ್ಯಕ್ರಮದ ವಿಡಿಯೋ!

53 ವರ್ಷದ ಕೆಕೆ ಕೋಲ್ಕತಾದ ನಜ್ರುಲ್ ಮಂಚ್‌ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆಸಿಕೊಟ್ಟ ಕೆಕೆ, ಬಳಿಕ ತಮ್ಮ ತಂಡದೊಂದಿದೆ ಹೊಟೆಲ್‌ಗೆ ತೆರಳಿದ್ದಾರೆ. ಹೊಟೆಲ್‌ಗೆ ಆಗಮಿಸಿದ ಬೆನ್ನಲ್ಲೇ ಕೆಕೆ ತೀವ್ರವಾಗಿ ಆಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೆಕೆ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆಯೇ ಸಾವನ್ನಪ್ಪಿದ್ದಾರೆ.  ಕೆಕೆ ಅವರು ಅನೇಕ ಖ್ಯಾತ ಹಿಂದಿ ಚಿತ್ರಗೀತೆ ಹಾಡಿದ್ದಾರೆ. ಕನ್ನಡದಲ್ಲೂ ಅವರು ಹಾಡು ಹಾಡಿದ್ದು, ಫಿಲಂಫೇರ್‌ ಪ್ರಶಸ್ತಿ ಪಡೆದಿದ್ದರು.

 

 

ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಕೆಕೆ ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಪ್ರವೇಶ ಪಡೆದೆ ಕೆಕೆ, ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಗುಜರಾತಿ ಸೇರಿದಂತೆ ಹಲವು ಭಾಷೆಗಳಲ್ಲಿ ಕೆಕೆ ಹಾಡಿನ ಮೂಲಕ ಜನರನ್ನು ರಂಜಿಸಿದ್ದಾರೆ.

14ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿರುವ ಕೆಕೆ, 2010ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಯಾಂಡಲ್‌ವುಡ್, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ 14ಕ್ಕೂ ಹೆಚ್ಚು ಬಾರಿ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಅವಾರ್ಡ್ ಪಡೆದಿದ್ದಾರೆ. ಟ

ಟಿವಿ ಧಾರವಾಹಿ, ರಿಯಾಲಿಟಿ ಶೋ, ಟಿವಿ ಕಾರ್ಯಕ್ರಮಗಳಿಗೆ ಹಲವು ಹಾಡುಗಳನ್ನು ಹಾಡಿದ್ದಾರೆ. ಕೆಕೆ 2008ರಲ್ಲಿ ಪಾಕಿಸ್ತಾನದ ಟಿವಿ ಶೋಗೆ ತನ್ಹ ಚಲಾ ಎಂಬ ಹಾಡು ಹಾಡಿದ್ದಾರೆ. ದುಬೈ, ಹಾಂಕ್ ಕಾಂಗ್ ಸೇರಿದಂತೆ ಹಲವು ದೇಶಗಳಲ್ಲಿ ಕಾನ್ಸರ್ಟ್ ನಡೆಸಿಕೊಟ್ಟಿದ್ದಾರೆ. 

 

Follow Us:
Download App:
  • android
  • ios