Asianet Suvarna News Asianet Suvarna News

ಸಮಂತಾ ಟೈಮ್‌ ಪಾಸ್‌ ಹವ್ಯಾಸ ಯಾವುದು ಗೊತ್ತಾ? ಇದಕ್ಕೆ ಕೆಲವರು ಈಕೆ ಬಗ್ಗೆ ಹುಷಾರಾಗಿರ್ತಾರೆ!

ಸಮಂತಾ ರುತ್ ಪ್ರಭು (Samantha Ruth Prabhu) ಒಂದು ವಿಚಿತ್ರ ಹವ್ಯಾಸದಲ್ಲಿ ಬಿದ್ದಿದ್ದಾರೆ. ಈ ಕಾರಣಕ್ಕೆ ಇವರ ಕೆಲವು ಆಪ್ತರಿಗೆ ಇವರನ್ನು ಕಂಡರೆ ಭಯವಂತೆ.

 

unfollowing friendsh who have negative thoughts Samantha Ruth Prabhu south indian actress lifestyle bni
Author
First Published Jul 5, 2024, 1:18 PM IST

ಸಮಂತಾ ರುತ್‌ ಪ್ರಭು (Samantha Ruth Prabhu) ಸಿನಿಮಾಗಳಿಗಿಂತ ಖಾಸಗಿ ವಿಚಾರಗಳಿಗೇ (Personal Reasons) ಇತ್ತೀಚೆಗೆ ಸುದ್ದಿ ಆಗ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ನಟಿ ಇತ್ತೀಚೆಗೆ ಅದರಿಂದ ಚೇತರಿಸಿಕೊಂಡಿದ್ದಾರೆ. ಆದರೆ ಲೈಫ್‌ಸ್ಟೈಲಲ್ಲಿ ಏನೇನೆಲ್ಲ ಮಾರ್ಪಾಡು ಮಾಡಿಕೊಂಡಿದ್ದಾರೆ. ಹಾಗೆ ನೋಡಿದ್ರೆ ಸಮಂತಾ ಆಗಾಗ ತಮ್ಮ ಫಿಟ್ನೆಸ್‌ ಜರ್ನಿ (Samantha Ruth Prabhu Fitness Jouney) ಬಗ್ಗೆ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ನಟಿ ತಮ್ಮ ತೂಕದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅವರ ದೇಹದ ತೂಕ ಈಗ 50.1 ಕೆಜಿಯಂತೆ. 37

 ವರ್ಷದ ಅವರ ಮೆಟಾಬಾಲಿಕ್ ಏಜ್ 23 ಎಂಬುದನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ದೇಹದಲ್ಲಿ 12 ಕೆಜಿ ಫ್ಯಾಟ್ ಮಾಸ್ ಇದೆಯಂತೆ. ಮಸಲ್ ಮಾಸ್ 35.9 ಕೆಜಿ, ಬೋನ್ ಮಾಸ್ 2.2 ಕೆಜಿ ಎಂಬುದನ್ನು ಸಮಂತಾ ವಿವರಿಸಿದ್ದರು. ಇಷ್ಟೆಲ್ಲ ಫಿಟ್‌ನೆಸ್‌ ಬಗ್ಗೆ ಸ್ಪೆಸಿಫಿಕ್‌ ಆಗಿರೋ ನಟಿ ಇತ್ತೀಚೆಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿಯಿಂದ ಮಾತನಾಡುತ್ತಾರೆ. ನಮ್ಮ ಆಹಾರ ಪದ್ಧತಿ (Food Habit) ಬಗೆಗೂ ಉದ್ದಾನುದ್ದ ಸ್ಪೀಚ್‌ ಕೊಡುತ್ತಾರೆ. 

ಸದ್ಯ ಈಕೆ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಹೊಸ ಸೀಸನ್‌ನಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆ.

 ಈಗಿರುವ ವಿಷಯ ಅದಲ್ಲ, ಸಮಂತಾ (Samantha Ruth Prabhu) ವಿಚಿತ್ರ ಹವ್ಯಾಸದ ಬಗ್ಗೆ. ಸಮಂತಾಗೆ ಪ್ರವಾಸ ಹೋಗೋ ಕ್ರೇಜ್ ಇದೆ. ಹಾಗೆ ಹೋದಾಗ ಅಲ್ಲಿ ಏನಾದರೂ ಹೊಸ ವಿದ್ಯೆ ಕಲಿತು ಬರೋ ಅಭ್ಯಾಸ ಇದೆ. ಹೊಸ ಹೊಸ ಪ್ರೆಂಡ್ಸ್‌ ಮಾಡ್ತಾ ಇರುತ್ತಾರೆ. ಅವರಿಂದ ಸಾಂತ್ವನ ಪಡೀತಾ ಇರ್ತಾರೆ. 

ಆದರೆ ಇಲ್ಲಿ ಹೇಳ ಹೊರಟಿರೋದು ಅದಲ್ಲ. ಸಮಂತಾಗಿರೋ ಇನ್ನೊಂದು ಕ್ರೇಜೀ ಹವ್ಯಾಸದ ಬಗ್ಗೆ. ಅದು ಮತ್ತೇನಲ್ಲ, ತಮಗೆ ಸಮಯ ಕೊಲ್ಲಬೇಕು ಅನಿಸಿದಾಗ ಮೊಬೈಲ್‌ ಈಕೆಯ ಕೈಗೆ ಬರುತ್ತೆ. ಅಲ್ಲಿ ಏನನ್ನೋ ಸರ್ಚ್‌ ಮಾಡುತ್ತಾರೆ. ಆಮೇಲೆ ಮತ್ತೇನೋ ಮಾಡ್ತಾರೆ. ಆ ಮತ್ತೇನೋ ಏನಂದ್ರೆ ಬ್ಲಾಕ್‌ ಮಾಡೋದು. ಹೌದು, ಯಾರ್ಯಾರಿಗೂ ಟೈಮ್‌ ಪಾಸ್‌ಗೆ ಏನೇನೋ ಅಭ್ಯಾಸ ಇರುತ್ತೆ. ಆದರೆ ಸಮಂತಾಗಿರುವ ಅಭ್ಯಾಸ ಅಂದ್ರೆ ಟೈಮ್‌ ಕೊಲ್ಲಬೇಕು ಅನಿಸಿದಾಗ ತಮಗಾಗದವರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹುಡುಕಿ ತೆಗೆದು ಬ್ಲಾಕ್ ಮಾಡುತ್ತಾ ಹೋಗುವುದು. 

ಮದುವೆಯಾದ ಹೀರೋಗಳ ಜೊತೆ ಅಫೇರ್ ಹೊಂದಿದ್ದ ಸ್ಟಾರ್ ಹೀರೋಯಿನ್‌ಗಳು

'ನಂಗೆ ಈ ನೆಗೆಟಿವ್‌ ಥಾಟ್‌ ಇರುವವರನ್ನು ಕಂಡರೆ ಅಷ್ಟಕ್ಕಷ್ಟೇ. ಅವರನ್ನು ಬ್ಲಾಕ್ ಮಾಡ್ತಾ ಹೋಗೋದು ಸೋಷಿಯಲ್‌ ಮೀಡಿಯಾದಲ್ಲಿ ನನಗಿಷ್ಟವಾದ ಹವ್ಯಾಸ' ಅಂತಾರೆ ನಟಿ. ಈ ಕಾರಣಕ್ಕೆ ಸಮಂತಾ ಆತ್ಮೀಯರು ಆಕೆಯ ಪೋಸ್ಟ್ ನ ತಂಟೆಗೇ ಹೋಗಲ್ವಂತೆ. ಸುಮ್ಮನೆ ಏನೋ ಕಾಮೆಂಟ್ ಮಾಡಿ ಅದು ಆಕೆಗೆ ಇಷ್ಟವಾಗದೇ ಸುಮ್‌ ಸುಮ್‌ನೇ ಆಕೆಯಿಂದ ಬ್ಲಾಕ್‌ ಮಾಡಿಸಿಕೊಳ್ಳೋದು ಯಾಕೆ ಅನ್ನೋದು ಅವರ ಮಾತು. 

ಇನ್ನೊಂದು ವಿಚಾರ ಅಂದ್ರೆ ತನ್ನ ಮುರಿದುಬಿದ್ದ ದಾಂಪತ್ಯದ ವಿಚಾರವಾಗಿ ಕಾಮೆಂಟ್ ಮಾಡೋರನ್ನು ಸಮಂತಾ ಫಸ್ಟಿಗೇ ಬ್ಲಾಕ್‌ ಮಾಡಿ ಬಿಡ್ತಾರಂತೆ. ಹೀಗೆ ಬ್ಲಾಕ್ ಮಾಡಿದಾಗ ಒಂಥರಾ ಶತ್ರು ಸಂಹಾರ ಮಾಡಿದ ಫೀಲ್ ಬರುತ್ತಂತೆ ಅವರಿಗೆ. 

ಸಮಂತಾ ಆಕ್ಟಿಂಗ್‌ನಲ್ಲೂ ಕ್ರಿಯೇಟಿವ್‌, ಥಾಟ್‌ನಲ್ಲೂ ಕ್ರಿಯೇಟಿವ್‌ ಅಂತ ಹಾಡಿ ಹೊಗಳ್ತಿದ್ದಾರೆ ಅವರ ಫ್ಯಾನ್ಸ್‌. ಏನೇ ಆದ್ರೂ ಸಮಂತಾ ಹತ್ರ ಶಹಭಾಸ್ ಅನಿಸಿಕೊಳ್ಳಬೇಕೇ ಹೊರತು ಬ್ಲಾಕ್ ಆಗಿಸಿಕೊಳ್ಳಬಾರದು ಎಂಬುದು ಅವರ ಮನದಾಳದ ಆಸೆ. ಸಮಂತಾ ಈ ಹವ್ಯಾಸ ಸದ್ಯಕ್ಕಂತೂ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್ ಮಾಡಿದೆ. 

ಬಳುಕುವ ಸ್ಟಂಟ್ ಮೂಲಕ ಹಿಂಟ್ ನೀಡಿದ ನಟಿ ಸಮಂತಾ, ವಿಡಿಯೋಗೆ ಶಾಕ್ ಆದ ಫ್ಯಾನ್ಸ್!
 

Latest Videos
Follow Us:
Download App:
  • android
  • ios