ಅಮಿತಾಬ್ ಬಚ್ಚನ್ ಮನೆಯಲ್ಲಿ ಹುಟ್ಟು ಹಬ್ಬ ಆಚರಣೆ ಹೇಗಿದೆ ಗೊತ್ತಾ? ಇಲ್ಲಿ ಕೇಕ್ ಕತ್ತರಿಸಿ ಹ್ಯಾಪಿ ಬರ್ತ್ ಡೇ ಟು ಯು ಅಂತಾ ಹಾಡುವ ಸಂಪ್ರದದಾಯವಿಲ್ಲ. ಹಾಗಾದರೆ ಬಚ್ಚನ್ ಮನೆಯಲ್ಲಿ ಬರ್ತ್ ಡೇ ಸೆಲೆಬ್ರೆಷನ್ ಹೇಗಿರುತ್ತೆ?
ಮುಂಬೈ(ಮಾ.10) ಹುಟ್ಟು ಹಬ್ಬ ಆಚರಣೆ ಕೇಕ್ ಇಲ್ಲದೆ ಅಂತ್ಯಗೊಳ್ಳುವುದಿಲ್ಲ. ಕೇಕ್ ಕತ್ತರಿಸಿ ಹಂಚಿದರೆ ಮಾತ್ರ ಹುಟ್ಟು ಹಬ್ಬ ಆಚರಣೆ ಸಂಪೂರ್ಣಗೊಳ್ಳಲಿದೆ. ಇನ್ನು ಕೇಕ್ ಕತ್ತರಿಸುವಾಗ ಹ್ಯಾಪಿ ಬರ್ತ್ ಡೇ ಟು ಯು ಅಂತಾ ಹಾಡು ಹಾಡಿ ಶುಭ ಕೋರಲಾಗುತ್ತದೆ. ಬಹುತೇಕರ ಹುಟ್ಟು ಹಬ್ಬ ಆಚರಣೆಯಲ್ಲಿ ಕೇಕ್ ಇದ್ದೆ ಇರುತ್ತೆ. ಆದರೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಹುಟ್ಟು ಹಬ್ಬ ಆಚರಣೆಯಲ್ಲಿ ಹಲವು ವಿಶೇಷತೆ ಇದೆ. ಬರ್ತ್ ಡೇ ಯಾರದ್ದೇ ಆಗಿರಲಿ, ಮನೆಯಲ್ಲಿ ಹುಟ್ಟು ಹಬ್ಬ ಆಚರಿಸುವಾಗ ಕೇಕ್ ಕತ್ತರಿಸಿ, ಹ ಬರ್ತ್ ಡೇ ಹಾಡಿನ ಮೂಲಕ ಶುಭ ಕೋರುವ ಸಂಪ್ರದಾಯ ಇಲ್ಲ. ಹಾಗಾದರೆ ಬಚ್ಚನ್ ಮನೆಯಲ್ಲಿನ ಹುಟ್ಟು ಹಬ್ಬ ಆಚರಣೆ ಹೇಗೆ?
ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ ಪತ್ನಿ ಜಯಾ ಬಚ್ಚನ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮನೆಯಲ್ಲಿ ಹುಟ್ಟು ಹಬ್ಬ ಆಚರಣೆ ವಿಶೇಷತೆ ಕುರಿತು ಹೇಳಿದ್ದಾರೆ. ಮನೆಯಲ್ಲಿ ಈ ರೀತಿಯ ಹುಟ್ಟು ಹಬ್ಬ ಆಚರಣೆಗಳು ಇರುವುದಿಲ್ಲ. ಹೆಚ್ಚು ಸಂಪ್ರದಾಯಬದ್ಧವಾಗಿ ಹುಟ್ಟು ಹಬ್ಬ ಆಚರಿಸುತ್ತೇವೆ. ಈ ಪೈಕಿ ಕೇಕ್ ಕತ್ತರಿಸಿ, ಕ್ಯಾಂಡಲ್ ಹಚ್ಚುವ ಸಂಪ್ರದಾಯವಿಲ್ಲ. ಇದಕ್ಕೆ ಬದಲಾಗಿ ಮನೆಯಲ್ಲಿ ಅನುಸರಿಸಿಕೊಂಡು ಬಂದಿರುವ ವಿಶೇಷ ಸಂಪ್ರದಾಯ ಪ್ರಕಾರ ಆಚರಿಸಲಾಗುತ್ತದೆ ಎಂದಿದ್ದಾರೆ.
ಆಯೋಧ್ಯೆಯಲ್ಲಿ ದುಬಾರಿ ಬೆಲೆಯ ಭೂಮಿ ಖರೀದಿಸಿದ ಅಮಿತಾಬ್, ಈ ಜಮೀನು ಕುಟುಂಬಕ್ಕಲ್ಲ
ಭಾರತದಲ್ಲಿ ಮಿಠಾಯಿ ಅಂದರೆ ಅದೂ ಕೂಡ ಮುಂಬೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಅದು ಹಾಲಿನ ಸಿಹಿ ತಿಂಡಿ. ಹೆಚ್ಚಿನವರು ಇದನ್ನು ಈಗ ಮಿಲ್ಕ್ ಕೇಕ್ ಎಂದು ಕರೆಯುತ್ತಾರೆ. ಆದರೆ ಇದು ಹಾಲಿನ ಸಿಹಿ ತಿಂಡಿ. ಇದನ್ನು ಕತ್ತರಿಸಿ ಹಂಚುತ್ತೇವೆ. ಕತ್ತರಿಸುವಾಗ ಹ್ಯಾಪಿ ಬರ್ತ್ ಡೇ ಹಾಡುವ ಸಂಪ್ರದಾಯವೂ ಇಲ್ಲ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ನಮ್ಮ ಅತ್ತೆ ನಮಗೆ ಹೇಳಿಕೊಟ್ಟಿದ್ದು, ಹರ್ಷ ನವ್, ವರ್ಷ ನವ್, ಜೀವನ ಉತ್ಕರ್ಷ ನವ್ ಎಂದು. ಇದನ್ನು ಹೇಳುತ್ತೇವೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಮನೆಯಲ್ಲಿನ ಹುಟ್ಟು ಹಬ್ಬ ಆಚರಣೆ ಸರಳ ನಿಜ. ಆದರೆ ಮನೆಯಲ್ಲಿ ಸರಳವಾಗಿ ಆಚರಿಸಿ ಬಳಿಕ ದೊಡ್ಡ ಪಾರ್ಟಿ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಸಂಪ್ರದಾಯ ಎಲ್ಲಾ ಕಡೆ ಇರುವುದಿಲ್ಲ. ಹೀಗಾಗಿ ನಾವು ಕೇಕ್ ಕತ್ತರಿಸಿ ಆಚರಿಸುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಸರಳವಾಗಿ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಮೊದಲು ಹುಟ್ಟು ಹಬ್ಬಕ್ಕೆ ಈ ಹಾಲಿನ ಸಿಹಿ ತಿಂಡಿಯನ್ನು ಮನೆಯಲ್ಲಿ ತಯಾರಿಸಲಾಗುತ್ತಿತ್ತು. ಇದು ಬಚ್ಚನ್ ಕುಟುಂಬದಲ್ಲಿ ಮಾತ್ರವಲ್ಲ, ಬಹುತೇಕ ಮನೆಯಲ್ಲಿ ಹುಟ್ಟು ಹಬ್ಬಕ್ಕೆ ಅವರವರ ಸಮುದಾಯ, ಪ್ರದೇಶದಲ್ಲಿನ ಜನಪ್ರಿಯ ತಿಂಡಿಗಳನ್ನು ಮನೆಯಲ್ಲೇ ಮಾಡಿ ಹುಟ್ಟು ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಬೇಕರಿ ಅಥವಾ ಶಾಪ್‌ಗಳಿಂದ ತರಿಸಲಾಗುತ್ತಿದೆ.
ಬಾಲಿವುಡ್‌ನಿಂದ ನಿವೃತ್ತಿಯಾಗುತ್ತಿದ್ದಾರಾ ಅಮಿತಾಬ್ ಬಚ್ಚನ್? ತಡ ರಾತ್ರಿ ಪೋಸ್ಟ್ ತಂದ ಆತಂಕ
