ನಟನೆ ಹಾಗೂ ಅದ್ಭುತ ಚಿತ್ರಗಳ ಮೂಲಕ ಅಭಿಮಾನಿಗಳ ರಂಜಿಸುತ್ತಿರುವ ಅಮಿತಾಬ್ ಬಚ್ಚನ್ ಇದೀಗ ನಿವೃತ್ತಿಯಾಗುತ್ತಿದ್ದಾರ? ನಟನೆ ಮಾತ್ರವಲ್ಲ ಕೆಬಿಸಿಯಿಂದಲೂ ದೂರ ಸರಿಯುತ್ತಿದ್ದಾರ? ಈ ಕುರಿತು ಅಮಿತಾಬ್ ಬಚ್ಚನ್ ಮಾಡಿದ ಟ್ವೀಟ್ ಇದೀಗ ಭಾರಿ ಅನುಮಾನಕ್ಕೆ ಕಾರಣವಾಗಿದೆ. ಬಿಗ್ ಬಿ ಹೇಳುತ್ತಿರುವುದೇನು?
ಮುಂಬೈ(ಫೆ.28) ಅಮಿತಾಬ್ ಬಚ್ಚನ್ ವಯಸ್ಸು 82. ಆದರೆ ಬಿಗ್ ಬಿ ನಟನೆಗೆ ಸರಿಸಾಟಿ ಇಲ್ಲ. ಅದ್ಭುತ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದರ ಜೊತೆಗೆ ಕೌನ್ ಬನೇಗಾ ಕರೋಡ್‌ಪತಿ ಮೂಲಕ ಮನೆ ಮಾತಾಗಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಅಮಿತಾಬ್ ಬಚ್ಚನ್ ಇದೀಗ ಮಾಡಿದ ಪೋಸ್ಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ನಿವೃತ್ತಿ ಸೂಚನೆ ನೀಡಿದ ಅಮಿತಾಬ್ ಬಚ್ಚನ್ ಕೊನೆಗೆ ತಮ್ಮ ಪೋಸ್ಟ್ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಅಮಿತಾಬ್ ಬಚ್ಚನ್ ಹೇಳಿದ್ದೇನು?
ಅಮಿತಾಬ್ ಬಚ್ಚನ್ ಆರೋಗ್ಯ, ವಯಸ್ಸಿನ ಕಾರಣದಿಂದ ಸಿನಿಮಾ ಹಾಗೂ ಕೆಬಿಸಿಯಿಂದ ನಿವೃತ್ತಿಯಾಗಲು ಬಯಸಿದ್ದಾರೆ ಎಂದು ಅಮಿತಾಬ್ ಬಚ್ಚನ್ ಪೋಸ್ಟ್ ವಿಶ್ಲೇಷಿಸಲಾಗಿತ್ತು. ತಡ ರಾತ್ರಿ ಅಮಿತಾಬ್ ಬಚ್ಚನ್ ಕೆಲವೇ ಪದಗಳ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದಾರೆ. ಇಲ್ಲಿಂದ ತೆರಳಲು ಸಮಯ ಬಂದಿದೆ ಎಂದು ಪೋಸ್ಟ್ ಮಾಡಿದ್ದರು. ಕೆಲವೇ ಪದಗಳ ಈ ಪೋಸ್ಟ್ ಅಭಿಮಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಅಮಿತಾಬ್ ಬಚ್ಚನ್ ನಟನೆ ಹಾಗೂ ಕೆಬಿಸಿ ಎರಡರಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.
ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್ನೈಟ್ ಗುಟ್ಟು ಹೇಳಿಯೇ ಬಿಟ್ರು!
ಆದರೆ ತಡ ರಾತ್ರಿ ಮಾಡಿದ ಪೋಸ್ಟ್ ಕುರಿತು ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳಿಂದ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಜನರು ಊಹಿಸಿದ್ದರು. ಆದರೆ ಈಗ ಬಿಗ್ ಬಿ ಅವರೇ ಈ ಗೊಂದಲವನ್ನು ನಿವಾರಿಸಿ, ತಮ್ಮ ಪೋಸ್ಟ್‌ನ ನಿಜವಾದ ಅರ್ಥವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಅಮಿತಾಬ್ ಬಚ್ಚನ್ "ಹೋಗುವ ಸಮಯ ಬಂದಿದೆ" ಎಂದು ಬರೆದಿದ್ದರು. ಬಿಗ್ ಬಿ ಅವರ ಈ ಪೋಸ್ಟ್ ಬಂದ ನಂತರ, ಅವರು ತಮ್ಮ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ' ಮತ್ತು ಸಿನಿಮಾಗಳಿಂದ ದೂರ ಸರಿಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಜನರು ಭಾವಿಸಲು ಪ್ರಾರಂಭಿಸಿದರು. 'ಕೌನ್ ಬನೇಗಾ ಕರೋಡ್‌ಪತಿ'ಯ ಹೊಸ ಸಂಚಿಕೆಯ ಪ್ರೋಮೋ ಜೊತೆಗೆ, ಬಿಗ್ ಬಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
KBCಯಲ್ಲಿ ಅಮಿತಾಭ್ ಬಚ್ಚನ್ ಅವರ ಟ್ವೀಟ್ ಕುರಿತು ಚರ್ಚೆ
KBCಯ ಹೊಸ ಪ್ರೋಮೋದಲ್ಲಿ, ಅಲ್ಲಿರುವ ಅಭಿಮಾನಿಗಳು ಅಮಿತಾಭ್ ಬಚ್ಚನ್ ಅವರನ್ನು ನೃತ್ಯ ಮಾಡಲು ಕೇಳುತ್ತಾರೆ. ಅದಕ್ಕೆ ಅವರು ತಕ್ಷಣವೇ, "ಯಾರು ಡ್ಯಾನ್ಸ್ ಮಾಡ್ತಾರೆ? ಅರೆ ಭಾಯಿ ಸಾಹೇಬ್ರೇ, ಡ್ಯಾನ್ಸ್ ಮಾಡೋಕೆ ಇಲ್ಲಿ ನಮ್ಗೆ ಸಮಯವಿಿಲ್ಲ ಎಂದಿದ್ದಾರೆ. ಈ ಮಧ್ಯೆ, ಅಭಿಮಾನಿಯೊಬ್ಬರು ಅಮಿತಾಭ್ ಬಚ್ಚನ್ ಅವರ ಟ್ವೀಟ್ ಬಗ್ಗೆ ಉಲ್ಲೇಖಿಸಿದ್ದಾರೆ. ಅದಕ್ಕೆ ಅಮಿತಾಭ್, "ಅದರಲ್ಲಿ ಒಂದು ಲೈನ್ ಇತ್ತು... ಹೋಗುವ ಸಮಯವಾಗಿದೆ.... ಇದರಲ್ಲಿ ಏನಾದ್ರೂ ತೊಂದರೆ ಇದೆಯಾ? ಮರುಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೊಬ್ಬ ಅಭಿಮಾನಿ, "ಸರ್ ನೀವು ಎಲ್ಲಿಗೆ ಹೋಗ್ಬೇಕು? ಎಂದು ಅಮಿತಾಬ್ ಬಚ್ಚನ್‌ಗೆ ಮರು ಪ್ರಶ್ನಿಸಿದ್ದಾರೆ.
ಅಮಿತಾಭ್ ಬಚ್ಚನ್ ಉತ್ತರ
ಇದಕ್ಕೆ ಉತ್ತರಿಸಿದ ಬಿಗ್ ಬಿ, "ಹೋಗುವ ಸಮಯ ಬಂದಿದೆ ಅಂದ್ರೆ...." ಅಭಿಮಾನಿ ಮಾತು ಕಡಿತಗೊಳಿಸಿ, "ನೀವು ಇಲ್ಲಿಂದ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಸರ್" ಎನ್ನುತ್ತಾರೆ. ಅದಕ್ಕೆ ಅಮಿತಾಭ್, "ಅರೆ ಭಾಯಿ ಸಾಹೇಬ್, ನಮಗೆ ಕೆಲಸಕ್ಕೆ ಹೋಗುವ ಸಮಯವಾಗಿದೆ. ಶೂಟ್ ಮುಗಿಸಿ ರಾತ್ರಿ 2 ಗಂಟೆಗೆ ಮನೆಗೆ ತೆರಳುತ್ತೇವೆ. ಮನೆ ತಲುಪುವಷ್ಟರಲ್ಲಿ ಮತ್ತಷ್ಟು ತಡ ಆಗುತ್ತದೆ. ಟ್ವೀಟ್ ಬರೆಯುವಾಗ ನಿದ್ದೆ ಬಂದಿತ್ತು. ಹೋಗು ಸಮಯ ಬಂದಿದೆ ಎಂದು ಬರೆದೆ. ಅಲ್ಲಿಗೆ ನಿದ್ದೆ ಬಂದು ಮಲಗಿದ್ದೆ. ಆದರೆ ಇಷ್ಟೇ ಪದಗಳು ಪೋಸ್ಟ್ ಆಗಿ ಗೊಂದಲ ಸೃಷ್ಟಿಸಿದೆ. ನಮಗೆ ಕೆಲಸಕ್ಕೆ ಹೋಗುವ ಸಮಯವಾಗಿದೆ ಎಂದಷ್ಟೇ ಹೇಳಿದ್ದೇನೆ ಎಂದು ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಮುಂಬರುವ ಸಿನಿಮಾಗಳು
ಅಮಿತಾಭ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 16 ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಅವರು ಕೊನೆಯ ಬಾರಿಗೆ ರಜನಿಕಾಂತ್ ಅವರೊಂದಿಗೆ ತಮಿಳು ಸಿನಿಮಾ ವೆಟ್ಟೈಯನ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಸಿನಿಮಾಗಳಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸೇರಿದೆ, ಇದರಲ್ಲಿ ಅವರು ಜಟಾಯು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮೊದಲ ಭಾಗವು 2026 ರಲ್ಲಿ ದೀಪಾವಳಿಯಂದು ಬಿಡುಗಡೆಯಾಗಲಿದೆ.
ಅಮಿತಾಭ್ ಬೇಡಿಕೊಂಡ್ರೂ ಡಾ ರಾಜ್ ನಟಿಸಲಿಲ್ಲ; ಆದ್ರೂ 'ಕೂಲಿ' ಚಿತ್ರದಲ್ಲಿ ಅಣ್ಣಾವ್ರು ಇದ್ದಾರೆ..!
