ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಶ್ರೀರಾಮ ಜನ್ಮಭೂಮಿಯಾದ ಆಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದಾರೆ. ಈ ಭೂಮಿ  ಜಯ ಬಚ್ಚನ್, ಅಭಿಷೇಕ್, ಐಶ್ವರ್ಯ ಸೇರಿದಂತೆ ಯಾರಿಗೂ ಅಲ್ಲ, ಹಾಗಾದರೆ ಈ ಭೂಮಿ ಯಾರಿಗೆ?

ಮುಂಬೈ(ಮಾ.08) ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹೊಸ ಜಮೀನು ಖರೀದಿಸಿದ್ದಾರೆ. ವಿಶೇಷ ಅಂದರೆ ಮುಂಬೈ ಅಥವಾ ಮುಂಬೈ ಹೊರವಲಯದಲ್ಲಿ ಅಲ್ಲ. ಇದೀಗ ಅಮಿತಾಬ್ ಬಚ್ಚನ್ ಶ್ರೀರಾಮ ಜನ್ಮ ಭೂಮಿಯಾಗಿರುವ ಆಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಖರೀದಿಸಿದ ಜಮೀನು ಶ್ರೀರಾಮ ಮಂದಿರದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದೆ. ಉತ್ತರ ಪ್ರದೇಶದ ತಿರುವ ಮಂಜ್ಹಾದಲ್ಲಿ ಈ ಭೂಮಿ ಇದೆ. ಮತ್ತೊಂದು ವಿಶೇಷ ಅಂದರೆ ಅಮಿತಾಬ್ ಬಚ್ಚನ್ ಈ ಜಮೀನನ್ನು, ಪತ್ನಿ ಜಯ ಬಚ್ಚನ್, ಅಭಿಷೇಕ್, ಐಶ್ವರ್ಯ, ಮೊಮ್ಮಗಳು ಆರಾಧ್ಯ, ಪುತ್ರಿ ಶ್ವೇತಾ ಬಚ್ಚನ್ ಅವರ್ಯಾರಿಗೂ ಖರೀದಿಸಿಲ್ಲ. ಹಾಗಾದರೆ ಈ ಜಮೀನು ಅಮಿತಾಬ್ ಬಚ್ಚನ್ ಯಾರಿಗಾಗಿ ಖರೀದಿಸಿದ್ದಾರೆ. ಇದರ ಬೆಲೆ ಎಷ್ಟು?

ಮುಂಬೈ ಮೂಲದ ಡೆವಲಪ್ಪರ್ ಅಭಿನಂದನ್ ಲೋಧಾ ಅವರಿಂದ ಅಮಿತಾಬ್ ಬಚ್ಚನ್ ಈ ಭೂಮಿ ಖರೀದಿಸಿದ್ದಾರೆ. ಬರೋಬ್ಬರಿ 86 ಲಕ್ಷ ರೂಪಾಯಿ ನೀಡಿ ಅಮಿತಾಬ್ ಬಚ್ಚನ್ ಈ ಭೂಮಿ ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್‌ಗೆ ಮುಂಬೈನಲ್ಲಿ ಕೆಲ ಮನೆಗಳಿವೆ. ಇತ್ತೀಚೆಗೆ ಒಂದು ಮನೆಯನ್ನು ಮಾರಾಟ ಮಾಡಿದ್ದರು. ಇದೀಗ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ಇದರ ನೋಂದಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಅಂತ್ಯಗೊಂಡಿದೆ.

ಬಾಲಿವುಡ್‌ನಿಂದ ನಿವೃತ್ತಿಯಾಗುತ್ತಿದ್ದಾರಾ ಅಮಿತಾಬ್ ಬಚ್ಚನ್? ತಡ ರಾತ್ರಿ ಪೋಸ್ಟ್ ತಂದ ಆತಂಕ

ವರದಿಗಳ ಪ್ರಕಾರ ಅಮಿತಾಬ್ ಬಚ್ಚನ್ ಈ ಜಮೀನನ್ನು ಹರಿವಂಶ ರೈ ಬಚ್ಚನ್ ಮೆಮೋರಿಯಲ್ ಟ್ರಸ್ಟ್ ಹೆಸರಿನಡಿಯಲ್ಲಿ ಈ ಜಮೀನು ನೋಂದಣಿ ಆಗಿದೆ. ಈ ಮೂಲಕ ಅಮಿತಾಬ್ ಬಚ್ಚನ್ ಈ ಭೂಮಿಯನ್ನು ಟ್ರಸ್ಟ್ ರೂಪದಲ್ಲಿ ಬಳಸಿಕೊಳ್ಳಲು ಉದ್ದೇಶಿಸಿರುವ ಸಾಧ್ಯತೆ ಹೆಚ್ಚಿದೆ. ಇದೀಗ ಅಮಿತಾಬ್ ಬಚ್ಚನ್ ಈ ಭೂಮಿ ಖರೀದಿ ಕುತೂಹಲ ಹೆಚ್ಚಾಗಿದೆಯ

ಪ್ರಯಾಗರಾಜ್‌ಗೂ ಅಮಿತಾಬ್ ಬಚ್ಚನ್‌ಗೂ ಇದೆ ನಂಟು
ಅಮಿತಾಬ್ ಬಚ್ಚನ್ ಇದೀಗ ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ಆಯೋಧ್ಯೆಯಿಂದ ಪ್ರಯಾಗರಾಜ್ ನಾಲ್ಕು ಗಂಟೆಯ ಪ್ರಯಾಣ. ವಿಶೇಷ ಅಂದರೆ ಅಮಿತಾಬ್ ಬಚ್ಚನ್ ಹುಟ್ಟೂರು ಪ್ರಯಾಗ್‌ರಾಜ್. ಇದರ ಪಕ್ಕದಲ್ಲೇ ಅಮಿತಾಬ್ ಬಚ್ಚನ್ ಭೂಮಿ ಖರೀದಿಸಿದ್ದಾರೆ. ಕಳೆದ ವರ್ಷ ಅಮಿತಾಬ್ ಬಚ್ಚನ್ ಆಯೋಧ್ಯೆಗೆ ಬೇಟಿ ನೀಡಿದ್ದರು. ಇದೇ ವೇಳೆ ಆಯೋಧ್ಯೆಯಲ್ಲಿ ಭೂಮಿ ಖರೀದಿಸುವ ಕುರಿತು ನಿರ್ಧರಿಸಿದ್ದರು. ಬಳಿಕ ಈ ಕುರಿತು ಪ್ರಕ್ರಿಯೆ ಆರಂಭಗೊಂಡಿತ್ತು.

ಆಯೋಧ್ಯೆಯಲ್ಲಿ ಒಟ್ಟು 10,000 ಚದರ ಅಡಿ ವಿಸ್ತೀರ್ಣ ಜಮೀನು ಇದು. ಇದರಲ್ಲಿ ಒಂದು ಭಾಗವನ್ನು ಅಮಿತಾಬ್ ಬಚ್ಚನ್ ಖರೀದಿಸಿದ್ದಾರೆ. ಈ ಭೂಮಿಯ ಒಟ್ಟು ಬೆಲೆ 14.5 ಕೋಟಿ ರೂಪಾಯಿ.

ಕೆಬಿಸಿ ಶೋದಲ್ಲಿ ಸೊಸೆ ಐಶ್ವರ್ಯಾ ರೈಯನ್ನು ಹೊಗಳಿದ ಸ್ಪರ್ಧಿಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು?