ಭಾರೀ ಟೀಕೆ ಎದುರಿಸಿದ ನೇಹಾ ಕಕ್ಕರ್ ಸಹೋದರ ಟೋನಿ ನಿನ್ ಸಾಂಗ್ ಕೇಳೊದಕ್ಕಿಂತ ಸಾಯ್ಬೋದು ಎಂದವನಿಗೆ ಸಿಂಗರ್ ಹೇಳಿದ್ದಿಷ್ಟು

ನಿಮ್ಮ ಇನ್ನೊಂದು ಹಾಡನ್ನು ಕೇಳುವುದಕ್ಕಿಂತ ವಿಷ ಸೇವಿಸಿ ಸಾಯುತ್ತೇನೆ ಎಂದು ಹೇಳಿದ ಟ್ರೋಲ್‌ಗೆ ಗಾಯಕ ಟೋನಿ ಕಕ್ಕರ್ ಪ್ರತಿಕ್ರಿಯಿಸಿದ್ದಾರೆ. ಟೋನಿ ಇತ್ತೀಚೆಗೆ ಕಾಂತ ಲಗಾ ಹಾಡನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಅವರ ಸಹೋದರಿ ನೇಹಾ ಕಕ್ಕರ್ ಮತ್ತು ರಾಪರ್ ಯೋ ಯೋ ಹನಿ ಸಿಂಗ್ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ಅವರು ಟ್ವಿಟರ್ ಬಳಕೆದಾರನಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ನಿಮ್ಮ ಹಾಡುಗಳನ್ನು ಕೇಳುವುದಕ್ಕಿಂತ ವಿಷ ತೆಗೆದುಕೊಂಡು ಸಾಯುತ್ತೇನೆ ಎಂದು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ಟೋನಿ ದಯವಿಟ್ಟು ಸಾಯಬೇಡಿ. ನೀವು ನನ್ನ ಹಾಡುಗಳನ್ನು ಕೇಳಬೇಕಾಗಿಲ್ಲ. ನಿಮ್ಮ ಜೀವನ ಅಮೂಲ್ಯವಾದುದು. ನನ್ನಂತಹ 100 ಜನ ಟೋನಿ ಬಂದು ಹೋಗುತ್ತಾರೆ. ನಿಮಗೆ ದೀರ್ಘಾಯುಷ್ಯವಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಜಸ್ಟ್ ಬಾತ್ ಟವಲ್‌ನಲ್ಲಿ ಕೆಜಿಎಫ್ ಸಿಂಗರ್: ನೇಹಾ ಗಂಡನ ರಿಯಾಕ್ಷನ್ ಹೀಗಿತ್ತು

ಗಾಯಕನನ್ನು ಟ್ರೋಲ್ ಮಾಡಲಾಗಿದ್ದು ಟೋನಿ ತಮ್ಮ ಟೀಕೆಗಳಿಗೆ ಆಗಾಗ್ಗೆ ಪ್ರತಿಕ್ರಿಯಿಸುತ್ತಾರೆ. ಈ ಹಿಂದೆ, ಟ್ವಿಟರ್ ಬಳಕೆದಾರರಿಗೆ ಉತ್ತರಿಸುತ್ತಾ, ಅವರು ಜನರು ಯಾವಾಗಲೂ ಏನನ್ನಾದರೂ ಹೇಳುತ್ತಾರೆ. ನನ್ನ ಸಂಗೀತ ನನಗೆ ಏನು ನೀಡಿದೆ ಎಂದು ನನಗೆ ತಿಳಿದಿದೆ. ನನ್ನ ಮನೆ, ನನ್ನ ಕಾರುಗಳು, ನನ್ನ ದೈನಂದಿನ ಸ್ಟಾರ್‌ಬಕ್ಸ್ ..ಎಲ್ಲವೂ !! ಬಾಲ್ಯದಲ್ಲಿ ಆಟವಾಡಲು ಆಟಿಕೆಗಳೂ ಇರಲಿಲ್ಲ ಎಂದಿದ್ದಾರೆ.

Scroll to load tweet…
View post on Instagram

YouTube video player