ಜಸ್ಟ್ ಬಾತ್ ಟವಲ್‌ನಲ್ಲಿ ಕೆಜಿಎಫ್ ಸಿಂಗರ್: ನೇಹಾ ಗಂಡನ ರಿಯಾಕ್ಷನ್ ಹೀಗಿತ್ತು
- ಬಾತ್‌ರೂಂ ಫೋಟೋ ಶೇರ್ ಮಾಡಿದ ಟಾಪ್ ಸಿಂಗರ್
- ಬಾತ್ ಟವೆಲ್‌ನಲ್ಲಿ ಫೋಟೋ ಶೇರ್ ಮಾಡಿದ ನೇಹಾ, ಗಂಡ ಹೇಳಿದ್ದೇನು ?
ಖ್ಯಾತ ಗಾಯಕಿ ನೇಹಾ ಕಕ್ಕರ್ ಬಾತ್‌ರೂಂನಿಂದ ಬಾತ್ ಟೆವಲ್ ಸುತ್ತಿಕೊಂಡು ಫೋಟೋ ಒಂದನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಸ್ನಾನದ ನಂತರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಫ್ಯಾನ್ಸ್ ಖುಷಿಯಾಗಿದ್ದಾರೆ.
ಬಿಳಿ ಬಣ್ಣದ ಬಾತ್‌ರೋಬ್‌ನಲ್ಲಿ ಫೋಟೋ ಶೇರ್ ಮಾಡಿದ್ದು, ಬಾತ್ ಟಬ್ ಬದಿಯಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ. ಗುಡ್ ಮಾರ್ನಿಂಗ್, ಶವರ್ ಆಯ್ತು. ಟೀ ಮತ್ತು ಪಾಸಿಟಿವಿ ಜೊತೆ ದಿನ ಶುರು ಮಾಡೋಣ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನೇಹಾ.
ಪತ್ನಿಯ ಬಾತ್‌ರೂಂ ಫೋಟೋ ನೋಡಿ ಎಷ್ಟು ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ ರೋಹನ್ ಪ್ರೀತ್ ಸಿಂಗ್. ಸಹೋದರ ಟೋನಿ ಕಕ್ಕರ್ ಬ್ಲಾಕ್ ಹಾರ್ಟ್ ಕಮೆಂಟ್ ಮಾಡಿ ಹೌ ಬ್ಯೂಟಿಫುಲ್ ಎಂದಿದ್ದಾರೆ.
ಕೆಲವು ವಾರ ಕಾಲ ಡೇಟಿಂಗ್ ಮಾಡಿದ ನಂತರ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ ಕಳೆದ ವರ್ಷ ಮದುವೆಯಾದರು. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ಆರು ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಅವರು ಆಗಸ್ಟ್ 2020 ರಲ್ಲಿ ತಮ್ಮ ಸಾಂಗ್ ನೆಹು ದಾ ವ್ಯಾಹ್ ಚಿತ್ರೀಕರಣದ ಸಮಯದಲ್ಲಿ ಮೊದಲು ಭೇಟಿಯಾದರು.