ಏನಿದು ಶ್ರೀಲೀಲಾ ಮದುವೆ ಮ್ಯಾಟರ್? ಟಾಲಿವುಡ್ ಸೀನಿಯರ್ ಸ್ಟಾರ್ ನಟ ಹಾಗಂದ್ರಾ?

ಕನ್ನಡದಲ್ಲಿ 'ಕಿಸ್' ಚಿತ್ರದಲ್ಲಿ ನಟ ವಿರಾಟ್ ಎದುರು ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಅವರು ಬಳಿಕ ತೆಲುಗಿನಲ್ಲಿ ನಟಿಸುತ್ತ ವೃತ್ತಿಜೀವನ ಮುಂದುವರೆಸಿದರು. ಆದರೆ ನಾಯಕಿಯಾಗಿ ಸಿಗದ ಜನಪ್ರಿಯತೆ 'ಪುಷ್ಪ 2' ಐಟಂ ಸಾಂಗ್ ಮೂಲಕ ಸಿಕ್ಕಿದೆ. ಆದರೆ, ನಾಯಕಿಯಾಗಿಯೇ ಟಾಲಿವುಡ್..

Tollywood star actor Nandamuri Balakrishna talks about Sreeleela srb

ಕನ್ನಡ ಮೂಲದ ನಟಿ, 'ಕಿಸ್' ಚೆಲುವೆ ಶ್ರೀಲೀಲಾ (Sreeleela) ಅವರೀಗ ತೆಲುಗು ಸಿನಿಮಾ ಇಂಡಸ್ಟ್ರಿ ಮೂಲಕ ನ್ಯಾಷನಲ್‌ ಲೆವಲ್‌ಗೆ ಫೇಮಸ್‌ ಆಗಿರೋದು ಗೊತ್ತೇ ಇದೆ. ಪುಷ್ಪ 2 ಚಿತ್ರದ 'ಕಿಸಕ್' ಹಾಡಿನ ಮೂಲಕ ಶ್ರೀಲೀಲಾ ಅವರು ಅಪಾರ ಮೆಚ್ಚುಗೆ ಗಳಿಸಿ ಇದೀಗ ಹಲವರ ಪಾಲಿನ ಕನಸಿನ ಕನ್ಯೆ ಪಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಅಚ್ಚರಿ ಎಂಬಂತೆ ಇದೀಗ ಶ್ರೀಲೀಲಾ ಮದುವೆ ಬಗ್ಗೆ ಮಾತುಕತೆ ಶುರುವಾಗಿದೆ. ಅಂದರೆ, ನಟಿ ಶ್ರೀಲೀಲಾ ಮದುವೆ ಆಗ್ತಿದಾರೆ ಅಂತೇನಲ್ಲ. ಆದರೆ, ಅವರ ಮದುವೆ ಬಗೆಗಿನ ಸುದ್ದಿ ಹಬ್ಬುತ್ತಿದೆ. ಹಾಗಿದ್ದರೆ ಅದೇನು ನೋಡಿ.. 

ಕನ್ನಡದ ನಟಿ ಶ್ರೀಲೀಲಾ ಮದುವೆ ಜವಾಬ್ದಾರಿಯನ್ನು ತೆಲುಗಿನ ಸೂಪರ್ ಸ್ಟಾರ್ ನಟರೊಬ್ಬರು ವಹಿಸಿಕೊಂಡಿದ್ದಾರೆ. 'ನನಗೆ ಶ್ರೀಲೀಲಾ ಅವರನ್ನು ನೋಡಿದಾಗ ನನ್ನ ಮಗಳ ನೆನಪಾಗುತ್ತೆ. ಹೀಗಾಗಿ ನಟಿ ಶ್ರೀಲೀಲಾ ಕೂಡ ನನಗೆ ಮಗಳಿದ್ದಂತೆ. ತಂದೆಯ ಸ್ಥಾನದಲ್ಲಿ ನಿಂತು ಶ್ರೀಲೀಲಾ ಮದುವೆ ಮಾಡುವ ಜವಾಬ್ದಾರಿ ನನ್ನದು' ಎಂದು ಟಾಲಿವುಡ್ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ಹೇಳಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಹರಡುತ್ತಿದೆ. 

'ಪುಷ್ಪಾ 2' ಡಾನ್ಸ್‌ ಕುಣಿತದ ನಂತ್ರ ಶ್ರೀಲೀಲಾ ಕಥೆ ನೋಡಿ; ಹೀಗಾಗುತ್ತೆ ಅಂದ್ಕೊಂಡಿದ್ರಾ?

ಈ ಸುದ್ದಿ ಕೇಳಿದ ಹಲವು ಹುಡುಗರು ನಟ ನಂದಮೂರಿ ಬಾಲಕೃಷ್ಣ ಅವರ ಸೋಷಿಯಲ್ ಅಕೌಂಟ್ ಮೂಲಕ ಅವರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸಂಗತಿಯೀಗ ಸೀಕ್ರೆಟ್ ಆಗಿ ಉಳಿದಿಲ್ಲ. ಇನ್ನೂ ಕೆಲವರು ಮುಂದಕ್ಕೆ ಹೋಗಿ ತಮ್ಮ ಬಯೋಡಾಟವನ್ನೂ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಪೋಸ್ಟ್ ಮಾಡಿದ್ದಾರಂತೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಒಂದು ಮಾತಂತೂ ಸತ್ಯ, ನಟಿ ಶ್ರೀಲೀಲಾ ಅವರು ತೆಲುಗು ಜನರ ಮನಸ್ಸು ಗೆದ್ದಿದ್ದಾರೆ, ತೆಲುಗು ನೆಲದ ಹುಡುಗರ ಹಾರ್ಟ್ ಕದ್ದಿದ್ದಾರೆ. 

ಒಟ್ಟಿನಲ್ಲಿ, ಕನ್ನಡದಲ್ಲಿ 'ಕಿಸ್' ಚಿತ್ರದಲ್ಲಿ ನಟ ವಿರಾಟ್ ಎದುರು ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಅವರು ಬಳಿಕ ತೆಲುಗಿನಲ್ಲಿ ನಟಿಸುತ್ತ ವೃತ್ತಿಜೀವನ ಮುಂದುವರೆಸಿದರು. ಆದರೆ ನಾಯಕಿಯಾಗಿ ಸಿಗದ ಜನಪ್ರಿಯತೆ 'ಪುಷ್ಪ 2' ಐಟಂ ಸಾಂಗ್ ಮೂಲಕ ಸಿಕ್ಕಿದೆ. ಆದರೆ, ನಾಯಕಿಯಾಗಿಯೇ ಟಾಲಿವುಡ್ ಹಾಗು ಭಾರತೀಯ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಶ್ರೀಲೀಲಾ ಪ್ರಯತ್ನ ನಿರಂತರವಾಗಿ ಸಾಗಿದೆ. ಟಾಲಿವುಡ್‌ನ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದ್ದರೂ ಅದ್ಯಾಕೋ ನಟಿ ಶ್ರೀಲೀಲಾ ನಾಯಕಿಯಾಗಿ ಇನ್ನೂ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿಯೇ ಇದ್ದಾರೆ. ಎಲ್ಲಕ್ಕೂ ಕಾಲ ಕೂಡಿಬರಬೇಕು ಅಷ್ಟೇ!

ಒಂದೇ ಸಿನಿಮಾದಲ್ಲಿ ದರ್ಶನ್-ಸುದೀಪ್, ಡೈರೆಕ್ಟರ್‌ & ಪ್ರೊಡ್ಯೂಸರ್ ಫಿಕ್ಸ್ ಆಯ್ತು...!?

Latest Videos
Follow Us:
Download App:
  • android
  • ios