Asianet Suvarna News Asianet Suvarna News

ಸಿಂಡ್ರೆಲಾ ಹೀಲ್ಸ್‌ ಕಳೆದ ಕಥೆ; ಸಮಂತಾ ಚಪ್ಪಲಿ ಕದ್ದಿದ್ದು ಯಾರು?

ಬರೀಗಾಲಿನಲ್ಲಿ ಓಡುತ್ತಿರುವ ಸಮಂತಾ ಫೋಟೋ ಸಿಕ್ಕಾಪಟ್ಟೆ ವೈರಲ್. ಸಿಂಡ್ರೆಲಾ ಹೀಲ್ಸ್ ಕಳೆದುಕೊಂಡ ಸಮಂತಾ. ಕದ್ದಿದ್ದು ಯಾರು? ಯಾರೀ ಪ್ರಿನ್ಸ್ ಚಾರ್ಮಿಂಗ್?

Tollywood Samantha Akkineni share her missing slipper story vcs
Author
Bangalore, First Published Aug 26, 2021, 11:51 AM IST | Last Updated Aug 26, 2021, 11:51 AM IST

ಟಾಲಿವುಡ್ ಸ್ಟಾರ್ ನಟಿ ಸಮಂತಾ ತಮ್ಮ ಸಿನಿ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಲೈಫ್‌ಸ್ಟೈಲ್, ಫ್ಯಾಷನ್ ಹಾಗೂ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ತಮ್ಮ ಲೈಫ್‌ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. 

ಏನಮ್ಮ ಮದುವೆ ಆಗಿ ನಾಲ್ಕು ವರ್ಷ ಆಗ್ತಿದೆ. ಮಕ್ಳು ಮಾಡ್ಕೊಳ್ಳವಾ ಎಂದು ಪದೆ ಪದೇ ಪ್ರಶ್ನೆ ಮಾಡುವ ನೆಟ್ಟಿಗರಿಗೆ ಉತ್ತರಿಸಲು ತಮ್ಮ ಸಾಕು ನಾಯಿ Hash ಫೋಟೋ ಹಂಚಿಕೊಳ್ಳುತ್ತಾರೆ. ಅಂದಿನಿಂದ ಸಮಂತಾಳಷ್ಟೇ ಈ ಹ್ಯಾಷ್‌ ಕೂಡ ಫೇಮಸ್ ಆಗಿದೆ. 

ಹೆಸರಿನ ಜೊತೆಗಿದ್ದ ಗಂಡನ ಹೆಸರು ತೆಗೆದ ಸಮಂತಾ: ಕ್ಯೂಟ್ ಜೋಡಿ ಮಧ್ಯೆ ಏನಾಯ್ತು ?

ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ಒಂದು ಕಾಲಿಗೆ ಮಾತ್ರ ಚಪ್ಪಲಿ ಧರಿಸಿ ಓಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಿತ್ರೀಕರಣಕ್ಕೆಂದು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಸಮಂತಾ ತಮ್ಮ ಜೊತೆ ಹ್ಯಾಷ್‌ನೂ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಟವಾಡುತ್ತಿದ್ದ ತುಂಟ ಹ್ಯಾಷ್ ಶಮಂತಾಳ ಒಂದು ಚಪ್ಪಲಿಯನ್ನು ಕಚ್ಚಿಕೊಂಡು ಓಡಿ ಹೋಗಿದೆ. ಅದರ ಹಿಂದೆ ಸಮಂತಾ ಒಂದು ಚಪ್ಪಲಿ ಧರಿಸಿ ಓಡಿ ಹೋಗುತ್ತಿದ್ದಾರೆ.

ಸ್ವತಃ ಸಮಂತಾ ಈ ಫೋಟೋ ಹಂಚಿಕೊಂಡಿದ್ದಾರೆ. ಬ್ಲಾಕ್ ಕ್ರಾಪ್‌ ಟಾಪ್‌ನಲ್ಲಿ ಮಿಂಚುತ್ತಿರುವ ಈ ಚೆಲುವೆ, 'ಇದು ನನ್ನ ಲೈಫ್ ಸ್ಟೋರಿ. ಸಿಂಡ್ರೆಲಾ ಮತ್ತು ಅವಳು ಕಳೆದು ಕೊಂಡ ಚಪ್ಪಲ್‌ನಿಂದ ಫೇಮಸ್. ಆದರೆ ನನ್ನ ಕೇಸ್‌ನಲ್ಲಿ ಪ್ರಿನ್ಸ್ ಚಾರ್ಮಿಂಗ್ ಬೇರೆಯಾರೂ ಅಲ್ಲ...ಹ್ಯಾಷ್' ಎಂದು ಬರೆದು ಕೊಂಡಿದ್ದಾರೆ. ಅಲ್ಲದೇ ಇದೆ #Everydayathomethings ಎಂದು ಬರೆದುಕೊಂಡಿದ್ದಾರೆ. ಅಂದರೆ ಇದು ದಿನ ನಿತ್ಯ ಮನೆಯಲ್ಲಿ ನಡೆಯುವ ರಂಪಾಟ ಎಂದಿದ್ದಾರೆ.  'ಏನೂ ವ್ಯತ್ಯಾಸವಿಲ್ಲ ಬಿಡಿ, ಎಲ್ಲರ ಮನೆ ನಾಯಿಗಳ ಕಥೆಯೂ ಇದೇ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by S (@samantharuthprabhuoffl)

Latest Videos
Follow Us:
Download App:
  • android
  • ios