ಟಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಈ ಹಿಂದೆಯೇ ಪವರ್‌ ಸ್ಟಾರ್ ಪವನ್‌ ಕಲ್ಯಾಣ್ ಸಿನಿಮಾ ತೆಗೆಯುವುದಾಗಿ ಹೇಳಿ ಅಪಹಾಸ್ಯ ಮಾಡಿದ್ದರು. ಆದರೀಗ ಟ್ರೇಲರ್‌ ರಿಲೀಸ್ ಮಾಡುವುದಾಗಿ ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ. ಅದೆಲ್ಲಾ ಓಕೆ ಆದರೆ ಈ ಹಣದ ವಿಚಾರ ಮಾತನಾಡುತ್ತಿರುವುದು ಏಕೆ?

ಟಿಕೆಟ್‌ ಪಡೆಯಿರಿ:
ವರ್ಮಾ ಕ್ರಿಯೇಟ್ ಮಾಡಿರುವ 'ಆರ್‌ಜಿವಿ ವರ್ಲ್ಡ್‌ ಥಿಯೇಟರ್‌' ಎಂಬ ವೆಬ್‌ ಸೈಟ್‌ನಲ್ಲಿ ಜುಲೈ 22ರಂದು 'ಪವರ್ ಸ್ಟಾರ್‌' ಚಿತ್ರದ ಟ್ರೈಲರ್‌ ರಿಲೀಸ್‌ ಆಗಲಿದ್ದು, ಇದನ್ನು ವೀಕ್ಷಿಸಲು ಪ್ರೇಕ್ಷಕರು 25ರೂ. ಕಟ್ಟಬೇಕಂತೆ. ಅಷ್ಟೇ ಅಲ್ಲದೆ  ಜುಲೈ 25ರ ಬೆಳಗ್ಗೆ ರಿಲೀಸ್‌ ಆಗಲಿರುವ ಸಿನಿಮಾ ನೋಡಲು ಟಿಕೆಟ್‌ ಆಫರ್‌ ನೀಡಿದ್ದಾರೆ.  ಸಿನಿಮಾ ನೋಡಲು ಮೊದಲೇ ಬುಕ್ ಮಾಡಿಕೊಂಡರೆ,  ಟಿಕೆಟ್ 150 ಮಾತ್ರ. ಇಲ್ಲವೇ ತಡವಾಗಿ ನೋಡಲು ಬುಕ್‌ ಮಾಡಿದರೆ 250 ರೂ ಆಗುತ್ತಂತೆ. ಹೀಗಾಗಿ ಬೇಗ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂದು ಸಿನಿ ಪ್ರೇಮಿಗಳಿಗೆ ಆಫರ್‌ ನೀಡಿದ್ದಾರೆ ವರ್ಮಾ!

 

ವರ್ಮಾ ಗ್ರಹಚಾರ:
ನಿರ್ದೇಶನ ಮಾಡುವ ಸಿನಿಮಾಗಿಂತ ಹೆಚ್ಚಾಗಿ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಸಿನಿಮಾ ಮಾಡುವೆ, ವೆಬ್‌ ಸೀರಿಸ್‌ ಮಾಡುವೆ ಎಂದು ಹೇಳಿ ವಿವಾದದಲ್ಲಿ ಸಿಲುಸಿಕೊಳ್ಳುವ ವರ್ಮಾ ವಿರುದ್ಧ ನೆಟ್ಟಿಗರು ಎಂದಿನಂದತೆ ಇದೀಗ ಮತ್ತೆ ಗರಂ ಅಗಿದ್ದಾರೆ.

ನಟ ಪವನ್ ಕಲ್ಯಾಣ್ ವೈಯಕ್ತಿಕ ಜೀವನ ಹೇಗೇ ಇರಬಹುದು. ಆದರೆ ಈ ನಟನಿಗೆ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಪವನ್‌ ವಿರುದ್ಧ ಹಾಸ್ಯ ನಟ ಆಲಿ ಮಾತನಾಡಿದ್ದಾರೆ ಎಂದು ಗಾಳಿ ಸುದ್ದಿ ಕೇಳಿಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಲಿಗೆ ಜೀವ ಬೇದರಿಕೆ ಹಾಕಿದ್ದಾರೆ. ಇನ್ನು ಪವನ್‌‌ ಅವರಂತೆ ಕಾಣುವ ಜೂನಿಯರ್ ಆರ್ಟಿಸ್ಟ್‌ ಜೊತೆ ಸಿನಿಮಾ ಮಾಡಿ ರಿಲೀಸ್ ಮಾಡಿದರೆ ಸುಮ್ಮನೆ ಇರುತ್ತಾರಾ? ಅದೂ ಪವರ್ ಅಭಿಮಾನಿಗಳು. ವರ್ಮಾ ವಿರುದ್ಧ ತಿರುಗಿ ಬೀಳುವುದರಲ್ಲಿ ಅನುಮಾನವೇ ಇಲ್ಲ.

 

ಪವನ್ ಜೊತೆ ಸಿನಿಮಾ ಮಾಡುತ್ತಿರುವೆ ಎಂದು ಹೇಳಿ, ಜೂನಿಯರ್‌ ಆರ್ಟಿಸ್ಟ್‌ ವಿಡಿಯೋ ಶೇರ್ ಮಾಡಿದ್ದಕ್ಕೆ ಅಭಿಮಾನಿಗಳು ವರ್ಮಾ ಖಾತೆಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು.  ಒಟ್ಟಿನಲ್ಲಿ ಲಾಕ್‌ಡೌನ್‌ ಸಮಯದಲ್ಲಿ ನಿರ್ದೇಶಕರು ಹೇಗೆಲ್ಲ ಹಣ ಮಾಡಬಹುದು ಎಂದು ವರ್ಮಾ ತೋರಿಸಿಕೊಡುತ್ತಿದ್ದಾರೆ, ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  

ವಿವಾದಕ್ಕೆ ಇನ್ನೊಂದು ಹೆಸರೇ ಬಹುಶಃ ಆರ್‌ಜಿವಿ. ಸದಾ ಒಂದಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿ ಇರುವಂತೆ ಮಾಡಿಕೊಳ್ಳುತ್ತಾರೆ ಈ ನಿರ್ದೇಶಕ. ವರ್ಮಾ ಅವರ ನಡೆ , ಅವರ ಚಿತ್ರಗಳೋ, ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳೋ. ಒಟ್ಟಿನಲ್ಲಿ ಎಲ್ಲವೂ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ ಈ ನಿರ್ದೇಶಕ.