ಕಾಂಟ್ರವರ್ಸಿ ಮ್ಯಾನ್ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶಕನಾಗಿ ಸಿನಿಮಾಗಳ  ಮೂಲಕ ಜನರಿಗೆ ಜನಪ್ರಿಯ ವ್ಯಕ್ತಿಗಳ ಬಯೋಗ್ರಾಫಿ ಪರಿಚಯಿಸುವುದು ಅವರ ವೃತ್ತಿ ಹಾಗೂ ಈ ರೀತಿ ಅನೇಕ ಸಿನಿಮಾಗಳನ್ನು ಮಾಡಿರುವುದು ಅವರ ಹಿಸ್ಟರಿಯಲ್ಲಿದೆ ಆದರೀಗ ತೆಗೆದುಕೊಂಡಿರುವ ಪ್ರಾಜೆಕ್ಟ್‌ ಅವರಿಗೇ ತಿರುಗುಬಾಣವಾಗುತ್ತಿದ್ಯಾ?

ದೀದಿ ರೀತಿ ದೊಡ್ಡ ಮನಸ್ಸು ಮಾಡಿ ಮನೆ ಮನೆಗೆ ಎಣ್ಣೆ ಸಪ್ಲೈ ಮಾಡಿ: ಆರ್‌ಜಿವಿ

ಹೌದು! ನಾಥೂರಾಮ್‌ ಗೋಡ್ಸೆ ಕುರಿತು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರ ಸಂಪೂರ್ಣವಾಗಿ ಗೋಡ್ಸೆ ದೃಷ್ಟಿಕೋನದಿಂದಲಿರುತ್ತದೆ ಮುಖ್ಯವಾಗಿ ಗಾಂಧಿ ಹತ್ಯೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎನ್ನಲಾಗಿದೆ. ಚಿತ್ರೀಕರಣ ಶುರು ಮಾಡುವ ಮೊದಲು ವರ್ಮಾ ಸಾಕಷ್ಟು ವರದಿಗಳನ್ನು ಹಾಗೂ ಗೋಡ್ಸೆ ಬಗ್ಗೆ ಪ್ರಕಟವಾಗಿರುವ ಅಧ್ಯಾಯನಗಳನ್ನು ಕಲೆ ಹಾಕುತ್ತಿದ್ದಾರೆ. ಅನೇಕ ಸಂಶೋಧಕರ  ಸಂಪರ್ಕದಲ್ಲಿದ್ದು ಚಿತ್ರಕಥೆ ತಯಾರಿ ಮಾಡಲಾಗುತ್ತಿದೆ. 

ಚಿತ್ರದ ಶೀರ್ಷಿಕೆ ಫಿಕ್ಸ್ :

ಈಗಾಗಲೇ  ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವ ವರ್ಮಾ ಚಿತ್ರದ ಶೀರ್ಷಿಕೆಯನ್ನು ನಿರ್ಧರಿಸಿದ್ದಾರೆ. 'ದಿ ಮ್ಯಾನ್‌ ಹೂ ಕಿಲ್ಡ್‌ ಗಾಂಧಿ' ಎಂಬುದಾಗಿ ಇರಲಿದೆ ಎಂದು ಹೇಳಿಕೊಂಡಿದ್ದಾರೆ.

ಗೋಡ್ಸೆ ಬಗ್ಗೆ ಅನೇಕ ನಿರ್ದೇಶಕರು ಸಿನಿಮಾ ಮಾಡಲು  ನಿರ್ಧರಿಸಿದ್ದರು ಆದರೆ ಅದರಿಂದ ಆಗುತ್ತಿದ್ದ ವಿವಾದಗಳನ್ನು ಸಹಿಸಿಕೊಳ್ಳಲಾಗದೆ ಕೈ ಬಿಡುತ್ತಿದ್ದರು. ಆದರೆ ಗೋಡ್ಸೆ ಒಬ್ಬ ಅಪರಿಚಿತ ಖಳನಾಯಕ ಹೊರತು ಬೇರೇನೂ ಅಲ್ಲ ಎಂದು ಚಿತ್ರದಲ್ಲಿ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. 

ಗೋಡ್ಸೆ ವಿಚಾರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಯಾವ ಹೇಳಿಕೆ ನೀಡಿದರೂ ಅದಕ್ಕೆ ಅನೇಕರು ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾರೆ. ಈ ಪರಿಸ್ಥಿತಿ  ವರ್ಮಾಗೂ ಎದುರಾಗಿದ್ದು ಚಿತ್ರಕ್ಕಾಗಿ ಏನೇ ಬಂದರು ಎದುರಿಸಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

ಮೋದಿಯ ಕರೆಗೆ ದೀಪ ಹಚ್ಚೋ ಬದಲು ಸಿಗರೇಟ್‌ ಹಚ್ಚಿದ RGV!

ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಗೋಡ್ಸೆ ಹುಟ್ಟು ಹಬ್ಬಕ್ಕೆ ತೆಲುಗು ನಟ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಸಹೋದರ ನಾಗಬಾಬು ಶುಭಾಶಯ ಕೋರಿದ್ದು  ವೈರಲ್‌ ಆಗುತ್ತಿದ್ದಂತೆ ರಾಮ್‌ ಗೋಪಾಲ್‌ ವರ್ಮಾ ಬಾಬುಗೆ ಬೆಂಬಲ ನೀಡಿದ್ದಾರೆ.