ಟಾಲಿವುಡ್ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಸಿನಿಮಾ ಮಾಡಿದರೂ ಕಾಂಟ್ರವರ್ಸಿ ಮಾಡದಿದ್ದರೂ ಸದಾ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿರುತ್ತಾರೆ.  ಇದಕ್ಕೆ ಕಾರಣವೇ ಅವರು ಆಯ್ಕೆ ಮಾಡುವ ಚಿತ್ರಕಥೆ ಮತ್ತು ಅದರ ಟೈಟಲ್.

'ಪವರ್' ಟ್ರೈಲರ್ ನೋಡಲು 25 ರೂ. ಕಟ್ಟಿ; ಹೇಗೆಲ್ಲಾ ದುಡ್ಡು ಮಾಡಬಹುದು ನೋಡಿ?

ಇತ್ತೀಚಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ ಜೀವನದ ಬಗ್ಗೆ ಚಿತ್ರಕಥೆ ಮಾಡುವೆ ಎಂದು ಹೇಳಿ ಜೂನಿಯರ್‌ ಆರ್ಟಿಸ್ಟ್‌ನನ್ನು ಕರೆಸಿ ಸಿನಿಮಾ ರೀತಿಯಲ್ಲಿಯೇ ಚಿತ್ರೀಕರಣ ಮಾಡಿ ಯುಟ್ಯೂಬ್‌ನಲ್ಲಿ ಶೇರ್ ಮಾಡಲಾಗಿತ್ತು.  ಕೇವಲ 30 ನಿಮಿಷಗಳಿದ್ದ  ವಿಡಿಯೋವನ್ನು ಬಹಳಷ್ಟು ಮಂದಿ ವೀಕ್ಷಿಸಿದ್ದು ಲಕ್ಷಾಂತರ ರೂ ಹಣ ಗಳಿಕೆ ಮಾಡಿದೆ ಎಂಬ ಮಾಹಿತಿಯೂ ಇದೆ. ಇದೇ ಖುಷಿಯಲ್ಲಿ ಆರ್‌ಜಿವಿ ಗಮನ ಅಲ್ಲು ಫ್ಯಾಮಿಲಿ ಕಡೆ ಮುಖ ಮಾಡಿದೆ.

ಹೌದು! ಕೆಲ ದಿನಗಳ ಹಿಂದೆ ಆರ್‌ಜಿವಿ ಮಾಡಿದ ಟ್ಟೀಟ್‌ ಫುಲ್ ವೈರಲ್‌ ಆಗುತ್ತಿದೆ. ತಾವು 'ಅಲ್ಲು' ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.  ' ಆರ್‌ಜಿವಿ ವರ್ಲ್ಡ್‌ ಥಿಯೇಟರ್‌ನಲ್ಲಿ ಮತ್ತೊಂದು ಫಿಕ್ಷನ್‌ ರಿಯಾಲಿಟಿ ಸಿನಿಮಾ ಬರಲಿದೆ. 'ಅಲ್ಲು' ಎಂದು. ಈ ಕಾಲ್ಪನಿಕ ಕತೆಯಲ್ಲಿ ಸ್ಟಾರ್‌ ನಟನ ಬಾಮೈದ  ಏನೆಲ್ಲಾ ಮಾಡುತ್ತಾನೆ ಎನ್ನುವುದು ನಿಮಗೆ ತಿಳಿಯಲಿದೆ.  ಈ ನಟ 'ಜನ ರಾಜ್ಯಂ' ಎಂಬ ರಾಜಕೀಯ ಪಕ್ಷ ಘೋಷಣೆ ಮಾಡಿದ ಕ್ಷಣದಿಂದ ಕಥೆ ಆರಂಭಗೊಳ್ಳುತ್ತದೆ' ಎಂದು ಬರೆದುಕೊಂಡಿದ್ದಾರೆ.

 

ಚಿತ್ರಕ್ಕೆ 'ಅಲ್ಲು' ಎಂದು ಶೀರ್ಷಿಕೆ ಇಟ್ಟಿರುವ ಕಾರಣ ನೆಟ್ಟಿಗರು ವರ್ಮಾ ವಿರುದ್ಧ ಗರಂ ಆಗಿದ್ದಾರೆ. ಹೀಗೆ ಸುಮ್ಮನೆ ಇದ್ದರೆ ವರ್ಮಾ ಸ್ಟಾರ್ ನಟರ ಬಗ್ಗೆ ಒಂದಲ್ಲಾ ಒಂದು ಘಟನೆ ಎಳೆದು ಸಿನಿಮಾ ಮಾಡಿ ಅವಮಾನಿಸುತ್ತಾರೆ ಎಂದು ಚರ್ಚೆ ಶುರು ಮಾಡಿಕೊಂಡಿದ್ದಾರೆ. ವರ್ಮಾ ಗುಣದ ಬಗ್ಗೆ ತಿಳಿದುಕೊಂಡಿರುವ ನಟ-ನಟಿಯರು ಯಾವುದೇ ರೀತ್ರಿಯ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.