ಟಾಲಿವುಡ್‌ ಬ್ಲಾಕ್‌ ಬಸ್ಟರ್‌ ನಟ ಪ್ರಭಾಸ್ ಸದ್ಯಕ್ಕೆ #Prabhas20 ಚಿತ್ರೀಕರಣದಲ್ಲಿ ಬ್ಯುಸಿ. ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಲಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಬಗ್ಗೆ ಗೊತ್ತಿಲ್ಲದಿರುವ ಇಂಟರೆಸ್ಟಿಂಗ್ ವಿಚಾರಗಳಿವು!

ಚಿತ್ರಕ್ಕೆ ಡಿಫರೆಂಟ್‌ ಲುಕ್‌ ನೀಡಬೇಕೆಂದು ಒಟ್ಟು 20 ಸೆಟ್‌ಗಳನ್ನು ಹಾಕಲಾಗಿದೆ. ಅದರಲ್ಲಿ ನಾಲ್ಕು ಸೆಟ್‌ಗಳನ್ನು ಹೈದರಾಬಾದ್‌ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಹಾಕಲಾಗಿದೆ. ರಾಜ್ಯ ವಿವಿಧೆಡೆ ಹಾಕಿರುವ ಇತರೆ 18 ಸೆಟ್‌ಗಳಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರದ ಮುಖ್ಯ ಹಾಡನ್ನು Europeನಲ್ಲಿ ಚಿತ್ರೀಕರಿಸುವ ಸಾಧ್ಯತೆ ಇದೆ.  

ಮೋದಿ ಮೇನಿಯಾ! ಯಾರ್ ಆಗ್ತಾರೆ ಮೋದಿ ಚಿತ್ರಕ್ಕೆ ಲೀಡ್?

ಚಿತ್ರದ ಟೈಟಲ್‌ ಇನ್ನೂ ಫಿಕ್ಸ್ ಆಗದ ಕಾರಣ ಅದನ್ನು #Prabhas20 (ಪ್ರಭಾಸ್ 20ನೇ ಚಿತ್ರ)  ಎಂದೇ ಮುಹೂರ್ತ ಮಾಡಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರಕ್ಕೆ 'ಜಾನ್‌' ಎಂಬ ಟೈಟಲ್‌ ಎನ್ನಲಾಗುತ್ತಿದೆ. ಚಿತ್ರ 2021ರಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ. ಜನರಲ್ಲಿ ಕುತೂಹಲ ಹೆಚ್ಚಿಸಲು ಚಿತ್ರ ತಂಡ ಯಾವುದೇ ತುಣುಕುಗಳನ್ನೂ ಇದುವರೆಗೂ ರಿವೀಲ್ ಮಾಡಿಲ್ಲ. ಶೂಟಿಂಗ್‌ ಸೆಟ್‌ಗೆ ಭಿಗಿ ಭದ್ರತೆಯನ್ನೂ ನೀಡಲಾಗಿದೆ. ಜನರಲ್ಲಿ ಕುತೂಹಲ ಹೆಚ್ಚಿಸುವ ಸಲುವಾಗಿ ಯಾವ ತಂತ್ರಜ್ಞರಿಗೂ ಫೋನ್‌ ಬಳಸಲು ನಿರ್ದೇಶಕರು ಅನುಮತಿ ನೀಡಿಲ್ಲ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಕುತೂಹಲ ತಣಿಯಬಾರದೆಂದು ಪ್ರಭಾಸ್ ಚಿತ್ರಕ್ಕೆ ಸಿಕ್ಕಾಪಟ್ಟೆ ಭದ್ರತೆ ಒದಗಿಸಲಾಗಿದೆ. ನೋಡಬೇಕು, ಚಿತ್ರ ಹೇಗಿರುತ್ತೆ ಅಂತ?

ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!