ತೆಲುಗು ಸೂಪರ್ ಸ್ಟಾರ್, ಬಾಹುಬಲಿ ನಟ ಪ್ರಭಾಸ್ ಗೆ ಇಂದು 40 ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ.  ಸಾಹೋ, ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ನಟನೆಯನ್ನು ನೋಡಿ ಮೆಚ್ಚಿಸಿಕೊಂಡಿರುತ್ತೀರಿ. ಅವರ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳಿವು. 

- ಪ್ರಭಾಸ್  ಮೂಲ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಾಳಪತಿ 

- ಅವರ ತಂದೆ ನಿರ್ಮಾಪಕ ಸೂರ್ಯನಾರಾಯಣ ರಾಜು. 

- ಪ್ರಭಾಸ್ ಗೆ ಬಟರ್ ಚಿಕನ್ ಮತ್ತು ಬಿರಿಯಾನಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಹಾಗಾಗಿ ಹೊಟೇಲ್ ಉದ್ಯಮಿ ಆಗಲು ಇಷ್ಟಪಟ್ಟಿದ್ದರಂತೆ. 

- ಪ್ರಭಾಸ್ ಗೆ ಸಿಕ್ಕಾಪಟ್ಟೆ ನಾಚಿಕೆಯಂತೆ. ಹಾಗಾಗಿ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಾರೆ. 

- ಪ್ರಕೃತಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಅದರಲ್ಲೂ  ಪಕ್ಷಿಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ. 

- ಸಂಜಯ್ ದತ್ ಅವರ ಮುನ್ನಾಭಾಯಿ ಎಂಬಿಬಿಸ್, ಅಮೀರ್ ಖಾನ್ ಅವರ 3 ಈಡಿಯಟ್ ಸಿನಿಮಾವನ್ನು 20 ಕ್ಕೂ ಹೆಚ್ಚು ಬಾರಿ ನೋಡಿದ್ದಾರಂತೆ!  ನಿರ್ದೇಶಕ ರಾಜು ಹಿರಾನಿ ಅವರ ದೊಡ್ಡ ಫ್ಯಾನ್ ಇವರು. 

- ಮೋಸ್ಟ್ ವಾಂಟೆಡ್ ಬ್ಯಾಚುಲರ್ ಇವರಾಗಿದ್ದು 600 ಕ್ಕೂ ಹೆಚ್ಚು ಪ್ರಪೋಸಲ್ ಗಳು ಬಂದಿವೆಯಂತೆ. ಆದರೆ ಎಲ್ಲವನ್ನೂ ರಿಜೆಕ್ಟ್ ಮಾಡಿದ್ದಾರೆ. 

- ಇವರಿಗೆ ಓದುವ ಹವ್ಯಾಸವಿದೆ. ಮನೆಯಲ್ಲಿಯೇ ಒಂದು ಲೆಬ್ರರಿ ಇದೆಯಂತೆ! 

- ಹಾಲಿವುಟ್ ನಟ ರಾಬರ್ಟ್ ಡಿ ನಿರೋ ಅವರ ದೊಡ್ಡ ಅಭಿಮಾನಿ. 

- ಇವರ ಫೇವರೇಟ್ ಸ್ಪಾಟ್ ಲಂಡನ್ 

- ಬ್ಯಾಂಕಾಕ್ ನಲ್ಲಿ ಇವರ ಮೇಣದ ಪ್ರತಿಮೆಯಿದೆ.