ಟಾಲಿವುಡ್‌ ಹ್ಯಾಂಡ್ಸಮ್ ಹೀರೋ ಪ್ರಭಾಸ್ ನಟನೆಯ ಬಹು ನಿರೀಕ್ಷಿತ 'ರಾಧೆ ಶ್ಯಾಮ್' ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. ಮೋಷನ್ ಪೋಸ್ಟರ್ ಹಾಗೂ ಟೀಸರ್‌ ಈಗಾಗಲೇ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. 

ತೆಲಂಗಾಣ ನೆರೆ ನಿಧಿಗೆ ಬಾಹುಬಲಿ ಪ್ರಭಾಸ್‌ ದೇಣಿಗೆ

ಪ್ರತಿ ವರ್ಷವೂ ಪ್ರಭಾಸ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ಕೊರೋನಾ ಕಾಟದಿಂದ ಕುಟುಂಬಸ್ಥರ ಜೊತೆ ಸಮಯ ಕಳೆದಿದ್ದಾರೆ.  ತಮ್ಮ ನೆಚ್ಚಿನ ಸ್ಟಾರ್ ನಟನನ್ನು ಭೇಟಿಯಾಗಿದ್ದಿದ್ದರೇನು, ಅವರ ಸಿನಿಮಾ ಹಾಗೂ ಪೋಸ್ಟರ್‌ಗಳನ್ನು ವೈರಲ್ ಮಾಡಿ ಅವರ ಸಂತೋಷ ಹೆಚ್ಚಿಸೋಣ ಎಂದು ಪ್ಲಾನ್ ಮಾಡಿದ್ದಾರೆ.

 

'ಎಲ್ಲರಿಗೂ ವೆಲ್ಕಂ. ರಾಧೆ ಶ್ಯಾಮ್ ರೋಮ್ಯಾಂಟಿಕ್ ಜರ್ನಿ ಪ್ರಾರಂಭವಾಗಿದೆ. ಎಲ್ಲರೂ ಈ ಮ್ಯಾಜಿಕಲ್ ಯಾನ ಹೇಗಿದೆ ನೋಡಿ,' ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ. ರೆಟ್ರೋ ಶೈಲಿಯ ರೈಲಿನಲ್ಲಿ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡು, ಅನಂತರ ಕೊನೆಯಲ್ಲಿ ಹೀರೋ, ಹೀರೋಯಿನ್ ಇಬ್ಬರೂ ರೋಮ್ಯಾಂಟಿಕ್ ಆಗಿ ಪೋಸ್ ನೀಡುತ್ತಾರೆ.  ಪ್ರಭಾಸ್‌ಗೆ ಪೂಜಾ ಹೆಗ್ಡೆ ಪರ್ಫೆಕ್ಟ್ ಜೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೊಸ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಜೊತೆ ಸೇರಲಿದ್ದಾರೆ ಅಮಿತಾಭ್..! 

ಪ್ರಭಾಸ್ ಸಿನಿ ಜರ್ನಿಯಲ್ಲಿ ರಿಲೀಸ್ ಆಗಿರುವ ಸಿನಿಮಾಗಳಲ್ಲಿ ಅತಿ ವಿಭಿನ್ನವಾದ ಟ್ರೈಲರ್ ಅಂದ್ರ ಇದೇ ಎಂದಿದ್ದಾರೆ ಅಭಿಮಾನಿಗಳು. ಅಲ್ಲದೇ ಪ್ರಭಾಸ್‌ ಚಿತ್ರದಲ್ಲಿ ಸಿಕ್ಕಾಪಟ್ಟೆ ಫಿಟ್ ಆಗಿರುವುದನ್ನು ನೋಡಿ ಬೆಚ್ಚಿಬೆರಗಾಗಿದ್ದಾರೆ.

ಪ್ರಭಾಸ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ಜಪಾನ್‌ನಲ್ಲಿ ಬಾಹುಬಲಿ ಮತ್ತೆ ರಿಲೀಸ್ ಆಗಿದೆ. ವಿಶ್ವ ಸಿನಿಮಾದಲ್ಲಿಯೇ ತನ್ನದೇ ಮೈಲಿಗಲ್ಲು ಸ್ಥಾಪಿಸಿದ ಬಾಹುಬಲಿಗೆ ಪ್ರಭಾಸ್ ತಮ್ಮ ಸಿನಿ ಜರ್ನಿಯ ಹಲವು ವರ್ಷಗಳನ್ನು ಮೀಸಲಿಟ್ಟಿದ್ದು ಪ್ರಭಾಸ್ ಬದ್ಧತೆಯನ್ನು ತೋರಿಸುತ್ತದೆ.

"