Asianet Suvarna News Asianet Suvarna News

ತೆಲಂಗಾಣ ನೆರೆ ನಿಧಿಗೆ ಬಾಹುಬಲಿ ಪ್ರಭಾಸ್‌ ದೇಣಿಗೆ

ವರುಣನ ಆರ್ಭಟದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ 1.5 ಕೋಟಿ ರು. ಹಣವನ್ನು ಕೊಡುಗೆ ನೀಡಿದ್ದಾರೆ

Bahubali  Prabhas  Donates Crore Of Money To Flood Hit areas snr
Author
Bengaluru, First Published Oct 22, 2020, 10:31 AM IST

ಹೈದರಾಬಾದ್‌ (ಅ.22): ತೆಲಂಗಾಣದಲ್ಲಿ ವರುಣನ ಆರ್ಭಟದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

 ಈ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ 1.5 ಕೋಟಿ ರು. ಹಣವನ್ನು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಅಷ್ಟೆಅಲ್ಲದೆ ಅಗತ್ಯವಿದ್ದವರಿಗೆ ನೆರವು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

 ಈ ಹಿಂದೆಯೂ ಕೊರೋನಾ ಲಾಕ್‌ಡೌನ್‌ ಬಿಕ್ಕಟ್ಟಿನ ಸಮಯದಲ್ಲಿ ಪ್ರಭಾಸ್‌ 4 ಕೋಟಿ ರು. ದೇಣಿಗೆ ನೀಡಿದ್ದರು. ಸದ್ಯ ಪ್ರಭಾಸ್‌ ‘ರಾಧೆ ಶ್ಯಾಂ’ ಸಿನಿಮಾ ಚಿತ್ರೀಕರಣ ನಿಮಿತ್ತ ಇಟಲಿಯಲ್ಲಿದ್ದಾರೆ.

ಪ್ರವಾಹದಿಂದ ಮನೆಗೆ ಹಾನಿಯಾಗಿದ್ದರೆ 5 ಲಕ್ಷ ರು. ..

ದೇಶದಲ್ಲಿ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಜನರು ಮನೆಗಳನ್ನು ಕಳೆದುಕೊಂಡು ನೆಲೆ ಇಲ್ಲದೇ ಪರದಾಡುತ್ತಿದ್ದಾರೆ.

Follow Us:
Download App:
  • android
  • ios