Asianet Suvarna News Asianet Suvarna News

ಹೊಸ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಜೊತೆ ಸೇರಲಿದ್ದಾರೆ ಅಮಿತಾಭ್..!

ಬಾಹುಬಲಿ-ಮಸ್ತಾನಿ ಜೊತೆ ಬಿಗ್‌ ಬಿ | ದೀಪಿಕಾ-ಪ್ರಭಾಸ್‌ಗೆ ಜೊತೆಯಾಗಲಿದ್ದಾರೆ ಅಮಿತಾಭ್ | ಕುತೂಹಲ ಹೆಚ್ಚಿಸಿದ ಸ್ಟಾರ್ ಕಾಂಬಿನೇಷನ್

Amitabh Bachchan roped in for Prabhas and Deepika Padukones film dpl
Author
Bangalore, First Published Oct 9, 2020, 5:52 PM IST
  • Facebook
  • Twitter
  • Whatsapp

ನಾಗ್ ಅಶ್ವಿನ್‌ ಅವರ ಮುಂದಿನ ಸಿನಿಮಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಜೊತೆ ಜಾಯಿನ್ ಆಗ್ತಿರೋದ್ಯಾರು ಗೊತ್ತಾ..? ಬಿಗ್ ಬಿ..! ಅಚ್ಚರಿ ಆಗ್ತಿದ್ಯಲ್ಲಾ..? ಹೌದು ಈ ಕಾಂಬಿನೇಷನ್ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ

ಬಾಹುಬಲಿ ಖ್ಯಾತಿಯ ಪ್ರಭಾಸ್, ಪದ್ಮಾವತ್ ಖ್ಯಾತಿಯ ದೀಪಿಕಾ ಜೊತೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸೇರಿಕೊಳ್ತಿದ್ದಾರೆ. ಈ ಪ್ರಾಜೆಕ್ಟ್‌ ಬಗ್ಗೆ ಬಿಗ್‌ಬಿ ಕೂಡಾ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ಮಧ್ಯೆ ಮಧ್ಯೆ ಕಾಮೆಡಿ, ಸಿಕ್ಕಾಪಟ್ಟೆ ಹಾರರ್: ಲಕ್ಷ್ಮೀಬಾಂಬ್ ಟ್ರೈಲರ್ ನೋಡಿ

ಈ ಸಂಬಂಧ ಪ್ರಭಾಸ್ ದೊಡ್ಡ ಸುದ್ದಿ ಟ್ವಿಟರ್ ಮೂಲಕ ಶೇರ್ ಮಾಡಿಕೊಂಡಿದ್ದು, ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಈ ಮಹತ್ವದ ಮತ್ತು ಮಹತ್ವಾಕಾಂಕ್ಷೆಯ ಸಾಹಸ ಪ್ರಯಾಣದ ಭಾಗವಾಗಲು ಹೆಮ್ಮೆ ಇದೆ ಎಂದಿದ್ದಾರೆ. ಪ್ರಭಾಸ್ ಬಿಗ್‌ಬಿಯನ್ನು ಸ್ವಾಗತಿಸಿ, ಕನಸು ನನಸಾಗುತಿದೆ. ಲೆಜೆಂಡ್ ನಟ ಅಮಿತಾಭ್ ಅವರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಎಂದು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

ವೈಜಯಂತಿ ಮೂವೀಸ್ ಇ ಸಿನಿಮಾ ನಿರ್ಮಿಸುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿರುವ ವೈಜಯಂತಿ ಮೂವೀಸ್‌ಗೆ ಬಿಗ್‌ಬಿ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ದೀಪಿಕಾ ಹಾಗೂ ಅಮಿತಾಭ್ ಪಿಕು ಸಿನಿಮಾದಲ್ಲಿ ಜೊತೆಯಾಗಿದ್ದರು.

ಸಮಾಜ ಸೇವೆ ಮಾಡ್ಬೇಕು: ಸಿನಿಮಾಗೆ ಬಾಯ್‌ ಬಾಯ್ ಹೇಳಿದ ಬಿಗ್‌ಬಾಸ್ ಖ್ಯಾತಿಯ ಯುವ ನಟಿ

ಎನೌನ್ಸ್‌ಮೆಂಟ್ ವಿಡಿಯೋ ಮಾಡಿದ ವೈಜಯಂತಿ ಮೂವೀಸ್, 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಲೆಜೆಂಡರಿ ಸಿನಿಮಾ ಮಾಡಲಿದ್ದೇವೆ. ಲೆಜೆಂಡರಿ ಅಮಿತಾಭ್ ಇಲ್ಲದೆ ಈ ಸಿನಿಮಾ ಅಪೂರ್ಣ. ನೀವು ಜೊತೆಯಾಗುತ್ತಿರುವುದು ನಮಗೆ ಗೌರವ. ನಿಮ್ಮ ಹುಟ್ಟುಹಬ್ಬದ ಸಂಭ್ರಮ ಶುರು ಎಂದು ಬರೆದಿದ್ದಾರೆ. ಭಾನುವಾರ ಅಮಿತಾಭ್‌ಗೆ 78 ವರ್ಷ ವಯಸ್ಸಾಗಲಿದೆ.

Follow Us:
Download App:
  • android
  • ios