ಟಾಲಿವುಡ್‌ ಚಿತ್ರರಂಗದ ಬುದ್ಧೀವಂತ, ಚಾಕೋಲೇಟ್ ಬಾಯ್ ನಾಗ ಚೈತನ್ಯ ಸಮಂತಾಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಫ್ಯಾನ್ಸ್‌ ಸಂಖ್ಯೆ ಕಡಿಮೆ ಆಗಿದೆ ಅಂತ ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಗೋದಾವರಿ ನದಿ ಬಳಿ ಈ ಅಭಿಮಾನಿ ಮಾಡಿರುವ ಹುಚ್ಚು ಸಾಹಸ ನೋಡಿದ್ರೆ ಕ್ರೇಜ್‌ ಎಲ್ಲಿ ಕಡಿಮೆ ಆಗಿದೆ ಎಂಬ ಪ್ರಶ್ನೆ ಹುಟ್ಟುತ್ತದೆ.

ಸೌತ್‌ ಸ್ಟಾರ್‌ ಕಪಲ್‌ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ! 

ಕೆಲವು ದಿನಗಳಿಂದ ನಟ ನಾಗ ಚೈತನ್ಯ ಗೋದಾವರಿ ಜಿಲ್ಲಿಯ ಬಳಿ ಇರುವ ಗೋದಾವರಿ ನದಿಯಲ್ಲಿ 'ಥ್ಯಾಂಕ್ಯು' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಬೋಟ್‌ನಲ್ಲಿ ನಾಗ ಚೈತನ್ಯ ಒಬ್ಬರೆ ಕೂತು ನಟಿಸುತ್ತಿರುವ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ಈ ಅಭಿಮಾನಿ ಹಲವು ಬಾರಿ ನಟನ ಹೆಸರು ಕರೆದಿದ್ದಾನೆ, ಕೈ ಬೀಸಿದ್ದಾನೆ. ಆದರೆ, ಯಾವಾಗ ಪ್ರತಿಕ್ರಿಯೆ ಬಂದಿಲ್ಲವೋ ಆಗ ಆತ ನದಿಗೆ ಧುಮುಕಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀರಿಗೆ ಬಿದ್ದಿದ್ದನ್ನು ನಾಗ ಚೈತನ್ಯ ಸಿಬ್ಬಂದಿ ನೋಡಿದ್ದಾರೆ, ಆತನ ಕೈ ಎಳೆದು ಬೋಟ್‌ ಒಳಕೆ ಹಾಕಿಕೊಂಡಿದ್ದಾರೆ. ನಾಗ ಚೈತನ್ಯನನ್ನು ಭೇಟಿ ಮಾಡಲು ಹೀಗೆ ಮಾಡಿರುವುದು ಎಂದು ತಿಳಿದ ತಕ್ಷಣವೇ ಕ್ಯಾರಾವ್ಯಾನ್‌ಗೆ ಕರೆದುಕೊಂಡು ಹೋಗಿ ಆತನೊಂದಿಗೆ ಮಾತನಾಡಿಸಿದ್ದಾರೆ. ನಟನೊಂದಿಗೆ ಸಮಯ ಕಳೆದಿದ್ದಾರೆ. ಆತನ ಆಸೆಯಂತೆ ಫೋಟೋ ತೆಗೆದು, ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!? 

ನಾಗ ಚೈತನ್ಯ ಅಭಿನಯದ ಲವ್‌ ಸ್ಟೋರಿ ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆ ಆಗಲು ಸಿದ್ಧವಾಗುತ್ತಿದೆ. 'ಥ್ಯಾಂಕ್ಯು' ಚಿತ್ರದಲ್ಲಿ ನಾಗ ಚೈತನ್ಯ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.