ಸೌತ್ ಇಂಡಿಯನ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಹೋದರಿ ಪ್ರಿಯದರ್ಶಿನಿ ಬುಧವಾರ ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಡೀ ಕುಟುಂಬವನ್ನು ಒಟ್ಟಾಗಿ ನೋಡಿದ ನೆಟ್ಟಿಗರು ಫ್ಯಾಮಿಲಿ ಫೋಟೋವನ್ನು ವೈರಲ್ ಮಾಡಿದ್ದಾರೆ.

ಪತಿಯ ಸಿನಿಮಾಗಳನ್ನು ನೋಡೋದೇ ಇಲ್ಲ ಮಹೇಶ್ ಬಾಬು ಪತ್ನಿ 

ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಫ್ಯಾಮಿಲಿ ಮೌಲ್ಯ ಹೆಚ್ಚಾಗಿದೆ. ಸಣ್ಣ ಪುಟ್ಟ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸಬೇಕು ಎಂದೆನಿಸುತ್ತದೆ. ಈ ಕಾರಣ ನಮ್ರತಾ ಶಿರೋಡ್ಕರ್ ಪ್ರಿಯದರ್ಶಿನಿಗಾಗಿ ಸರ್ಪ್ರೈಸ್ ಪಾರ್ಟಿ ಆಯೋಜಿಸಿದ್ದರಂತೆ. ಈ ಎಲ್ಲಾ ಫೋಟೋಗಳನ್ನೂ ಪ್ರಿಯದರ್ಶಿನಿ ಪತಿ ನಟ ಸುಧೀರ್ ಬಾಬು ಶೇರ್ ಮಾಡಿಕೊಂಡಿದ್ದಾರೆ.

ಸುಧೀರ್ ಫೋಸ್ಟ್:
'ಲವ್ ಆಫ್‌ ಮೈ ಲೈಫ್‌ ಹುಟ್ಟಿದ ದಿನವಿದು. ಹ್ಯಾಪಿ ಬರ್ತಡೇ ಪ್ರಿಯಾ,' ಎಂದು ಸುಧೀರ್ ಬರೆದಿದ್ದಾರೆ. ಅದನ್ನು ನಮ್ರತಾ ರೀ-ಶೇರ್ ಮಾಡಿಕೊಂಡು 'ನಮ್ಮ ಕುಟುಂಬದ ಯಂಗೆಸ್ಟ್ ರಾಕ್‌ಸ್ಟಾರ್‌ಗೆ ಹ್ಯಾಪಿ ಬರ್ತಡೇ. 40ರ ಪ್ರಾಯಕ್ಕೆ ಸ್ವಾಗತ. ನಾವೆಲ್ಲರೂ ನಿನ್ನನ್ನು ತುಂಬಾ ಪ್ರೀತಿಸುತ್ತೇವೆ' ಎಂದು ಶುಭ ಹಾರೈಸಿದ್ದಾರೆ.

 

ಟ್ರೆಂಡ್ ಆಗುತ್ತಿರುವ ಫೋಟೋದಲ್ಲಿ ನಟ ಕೃಷ್ಣ, ಮಹೇಶ್ ಬಾಬು, ಸುಧೀರ್ ಬಾಬು, ನಮ್ರತಾ ಹಾಗೂ ಮಕ್ಕಳು ಒಟ್ಟಾಗಿ ಸೇರಿದ್ದಾರೆ.

ಡ್ರಗ್ಸ್ ದಂಧೆ: ಹೆಸರು ಕೇಳಿ ಬರುತ್ತಿದ್ದಂತೆ ಕಾಮೆಂಟ್‌ ಲಿಮಿಟ್‌ ಮಾಡಿದ ಸ್ಟಾರ್ ನಟನ ಪತ್ನಿ 

ಮಹೇಶ್ ಸಿನಿಮಾ:
ಸದ್ಯಕ್ಕೆ ಎಸ್‌ ಎಸ್‌ ರಾಜಮೌಳಿ ನಿರ್ದೇಶನ ಚಿತ್ರ ಒಪ್ಪಿಕೊಂಡಿರುವ ಮಹೇಶ್ ಬಾಬು ಕೊನೆಯ ಬಾರಿ ಸರಿಲ್ಲೇರು ನಿಕ್ಕೆವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಪ್ರಿಯದರ್ಶಿನಿ ಪತಿ ಸುಧೀರ್ ನಟ ನಾನಿ ಜೊತೆ 'v' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹತ್ತು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಟಾಲಿವುಡ್‌ ಚಿತ್ರರಂಗದಲ್ಲಿ ಸುಧೀರ್ ಗುರುತಿಸಿಕೊಂಡಿದ್ದಾರೆ.