ಕಾಂಟ್ರೋವರ್ಸಿ ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ  ಇದೇ ಮೊದಲ ಬಾರಿಗೆ ಸಿನಿಮಾ ಮಾಡಲಾಗುತ್ತಿದೆ.  ಮೂರು ಭಾಗದಲ್ಲಿ ರಿಲೀಸ್‌ ಆಗಲಿರುವ ಈ ಕಥೆಗೆ ನಿರ್ದೇಶಕ  ದೋರೆ ಸಾಯಿ ತೇಜ ಅವರೇ ನಾಯಕ ನಟ ಹಾಗೂ ಈ ಮೂರು ಭಾಗಕ್ಕೂ ಬೊಮ್ಮಕ್ಕು ಮುರಳಿ ನಿರ್ಮಾಣ ಮಾಡುತ್ತಿದ್ದಾರೆ.

'ಡೇಂಜರಸ್' ಲೆಸ್ಬಿಯನ್ ಸೆಕ್ಸ್, ಹಾಟ್ ನಟಿಯ ಮುಚ್ಚಿದ ಅಂಗದ RGV ಬಗ್ಗೆಯೂ ಕಮೆಂಟ್!

ದೋರೆ ಸಾಯಿ ಅವರ ತಾಯಿ ಕ್ಯಾಮೆರಾ ಆನ್  ಮಾಡಿದ್ದಾರೆ. ವಿಶೇಷ ಏನೆಂದರೆ ಆರ್‌ಜಿವಿ ತಂಗಿ ಮೊದಲ ಕ್ಲಾಪ್ ಮಾಡಿದ್ದಾರೆ. ಈ ಸಂತಸವನ್ನು ಸಾಯಿ ತೇಜ ಫೋಟೋ ಅಪ್ಲೋಡ್‌ ಮಾಡುವ ಮೂಲಕ ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

'ಅರ್ನಾಬ್‌- ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌'; ಆರ್‌ಜಿವಿ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ! 

'ನನ್ನ ಸಹೋದರಿ ವಿಜಯ್ ಚಿತ್ರೀಕರಣ ಮೊದಲ ಶಾಟ್‌ಗೆ ಕ್ಲಾಪ್ ಮಾಡಿದ್ದಾರೆ. ಆರ್‌ಜಿವಿ ಬಯೋಪಿಕ್‌ ಮೊದಲ ಭಾಗ,' ಎಂದು ರಾಮ್‌ ಗೋಪಾಲ್‌ ಕೂಡ ಟ್ಟೀಟ್ ಮಾಡಿದ್ದಾರೆ.

ಸದಾ ಮತ್ತೊಬ್ಬರ ಜೀವನದ ಬಗ್ಗೆ ಮಾತನಾಡುತ್ತಾ, ಕಾಲು ಎಳೆಯುತ್ತಾ ಸಿನಿಮಾ ಮಾಡುತ್ತಿದ್ದ ಆರ್‌ಜಿವಿ ಅವರ ಬಗ್ಗೆ ಸಿನಿಮಾ ಆಗುತ್ತಿರುವ ವಿಚಾರ ಕೇಳಿ ನೆಟ್ಟಿಗರು ಟೀಕೆ ಮಾಡಿದ್ದಾರೆ.  ಈ ಸಿನಿಮಾ ನೀವು ಎಲ್ಲರನ್ನು ಗೇಲಿ ಮಾಡಿರುವುದನ್ನು ತೋರಿಸಿದ್ದೀರಾ? ಎಂದು ಕೆಲವರು ಪ್ರಶ್ನಿಸಿದ್ದಾರೆ.