Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಹತ್ರ ಇರೋ ಐಷಾರಾಮಿ ಕಾರುಗಳು ಒಂದೆರಡಲ್ಲ, ಆಸ್ತಿಯೂ ಕಮ್ಮಿ ಇಲ್ಲ!

ನಾಷ್ಯನಲ್ ಕ್ರಶನ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್ ಸೇರಿ ಭಾರತದ ಚಿತ್ರರಂಗದ ಬಹುಬೇಡಿಕೆಯ ನಟಿ. ಒಂದು ಚಿತ್ರಕ್ಕೆ ರಶ್ಮಿಕಾ 6 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ರಶ್ಮಿಕಾ ಬೆಂಗಳೂರು, ಮುಂಬೈ ಸೇರಿದಂತೆ ಕೆಲೆವೆಡೆ ಐಷಾರಾಮಿ ಮನೆ, ದುಬಾರಿ ಕಾರುಗಳ ಒಡತಿಯಾಗಿದ್ದಾರೆ. ರಶ್ಮಿಕಾ ಒಟ್ಟು ಆಸ್ತಿ, ಕಾರು, ಮನೆ ಮಾಹಿತಿ ಇಲ್ಲಿದೆ.

National Crush Rashmika Mandanna owns Luxury homes swanky cars actress lifestyle and net worth ckm
Author
First Published Jun 14, 2024, 5:08 PM IST

ಬೆಂಗಳೂರು(ಜೂ.14) ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್, ಟಾಲಿವುಡ್ ಸೇರಿ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಬಾಲಿವುಡ್‌ನ ಆ್ಯನಿಮಲ್ ಸೂಪರ್ ಹಿಟ್ ಚಿತ್ರದ ಬಳಿಕ ಇದೀಗ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಮಂದಣ್ಣ ಐಷಾರಾಮಿ ಮನೆ, ದುಬಾರಿ ಕಾರು ಸೇರಿದಂತೆ ಹಲವು ದುಬಾರಿ ವಸ್ತುಗಳನ್ನು ಹೊಂದಿದ್ದಾರೆ. ಒಂದು ಚಿತ್ರಕ್ಕೆ ಸುಮಾರು 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ರಶ್ಮಿಕಾ ಮಂದಣ್ಣ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ವಿಲ್ಲಾ ಹೊಂದಿದ್ದಾರೆ. ಇನ್ನು ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಬೆಲೆ ಬಹಿರಂಗವಾಗಿಲ್ಲ. ಇತ್ತ ಹೈದರಾಬಾದ್ ಹಾಗೂ ಗೋವಾದಲ್ಲೂ ಮನೆ ಖರೀದಿಸಿದ್ದಾರೆ ಅನ್ನೋ ಮಾಹಿತಿಗಳು ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ತಮ್ಮ ಹುಟ್ಟೂರಾದ ಕೊಡಗಿನಲ್ಲಿ ಭವ್ಯ ಮನೆ ಹೊಂದಿದ್ದಾರೆ.

 ಅಭಿಮಾನಿ ಪೋಸ್ಟಿಗೆ ಗೆ ರಶ್ಮಿಕಾ ಮಂದಣ್ಣ ಹಾರ್ಟ್ ಟಚಿಂಗ್ ಕಮೆಂಟ್

ರಶ್ಮಿಕಾ ಮಂದಣ್ಣ ಬಳಿ ದುಬಾರಿ ಕಾರುಗಳಿವೆ. ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಕಾರಿನ ಮಾಲಕಿಯಾಗಿದ್ದಾರೆ. ಸಿ ಕ್ಲಾಸ್ ಜೊತೆಗೆ ಜರ್ಮನ್ ಆಡಿ ಬ್ರ್ಯಾಂಡ್ ಕಾರು ಕೂಡ ಖರೀದಿಸಿದ್ದಾರೆ. ಆಡಿ ಕ್ಯೂ3 ಎಸ್‌ಯವಿ ಕಾರು ಇದಾಗಿದ್ದು, ಹಲವು ಬಾರಿ ಈ ಕಾರಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇನ್ನು ಟಾಟಾ ಮಾಲೀಕತ್ವದ ಬ್ರಿಟಿಷ್ ರೇಂಜ್ ರೋವರ್ ಸೋರ್ಟ್ ಕಾರಿನ ಒಡತಿಯಾಗಿದ್ದಾರೆ. ಇದರ ಜೊತೆಗೆ ಟೋಯೋಟಾ ಇನ್ನೋವಾ ಹಾಗೂ ಹ್ಯುಂಡೈ ಕ್ರೆಟಾ ಕಾರನ್ನೂ ಹೊಂದಿದ್ದಾರೆ.

ರಶ್ಮಿಕಾ ಮಂದಣ್ಣ ಪ್ರಯಾಣದ ವೇಳೆ, ಕಾರ್ಯಕ್ರಮ, ಸಮಾರಂಭದಲ್ಲಿ ಪಾಲ್ಗೊಳ್ಳುವಾಗ ತಮ್ಮ ಡ್ರೆಸ್, ಆಭರಣಕ್ಕೆ ತಕ್ಕ ಪರ್ಸ್, ಬ್ಯಾಗ್ ಬಳಸುತ್ತಾರೆ. ಈ ಪೈಕಿ ಮೀಡಿಯಂ ಸೈಜ್ ಬ್ಲಾಕ್ ಹಾಗೂ ವೈಟ್ ಲೂಯಿಸ್ ವಿಟಾನ್ ಬ್ಯಾಗ್ ಹೆಚ್ಚಾಗಿ ಬಳಸುತ್ತಾರೆ. ಇದರ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿ. ಇನ್ನು ಬ್ಯಾಲೆನ್ಸಿಯಾಗ್ ಬ್ಯಾಗ್ ಬೆಲೆ 82,189 ರೂಪಾಯಿ. ಇನ್ನು ದುಬಾರಿ ಬೆಲೆಯ ಬ್ರಾಂಡೆಡ್ ಡ್ರೆಸ್‌ಗಳನ್ನು ರಶ್ಮಿಕಾ ಧರಿಸುತ್ತಾರೆ.  ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ 67 ಕೋಟಿ ರೂಪಾಯಿಗೂ ಅಧಿಕ ಅನ್ನೋ ಮಾಹಿತಿ ಇದೆ. 

ಬೀಚಲ್ಲಿ ಬಿಕಿನಿ ಬಿಟ್ಟು, ಸೀರೆ ಉಟ್ಟು ಫೋಸ್ ಕೊಟ್ಟ ರಶ್ಮಿಕಾ ಮಂದಣ್ಣ! ಫ್ರೆಂಡ್‌ಗೆ ಕಾಯ್ತಿದ್ದೀರಾ ಕೇಳಿದ ಫ್ಯಾನ್ಸ್

ರಶ್ಮಿಕಾ ಮಂದಣ್ಣ ಶೂಟಿಂಗ್ ಬಳಿಕ, ಚಿತ್ರದ ಯಶಸ್ಸಿನ ಬಳಿಕ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಹಲವು ಬಾರಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿದೇಶಿ ಪ್ರವಾಸ ಕುರಿತು ಹಂಚಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios