ಕಾಲಿವುಡ್‌ ಚಿತ್ರರಂಗದ ಖ್ಯಾತ ಹಾಸ್ಯ ನಟ ಯೋಗಿ ಬಾಬು ಹಾಗೂ ಮಂಜುಳಾ ತಮಿಳುನಾಡಿನ ತಿತುಟ್ಟನಿಯ ಮುರುಗನ್‌ ದೇವಾಲಯದಲ್ಲಿ ಫೆಬ್ರವರಿ 5ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಂಗ್!

ಕುಟುಂಬದವರು ಹಾಗೂ ಆಪ್ತ ಸ್ನೇಹಿತರೊಂದಿಗೆ ಮದುವೆ ಕಾರ್ಯಕ್ರಮ ನಡೆಯಿತು. ಚಿತ್ರರಂಗದ ಗಣ್ಯರಿಗೆ ಚೆನ್ನೈನಲ್ಲಿ ಮಾರ್ಚ್‌ನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಯೋಗಿ ಬಾಬು ಮದುವೆ ಸಂಭ್ರಮವನ್ನು 'ಕಾರ್ಣನ್' ಚಿತ್ರತಂಡ ಆಚರಿಸಿದೆ. 

ಖ್ಯಾತ ನಟನೊಂದಿಗೆ ಸಪ್ತಪದಿ ತುಳಿದ ಕಿರುತೆರೆ 'ಮಂಗಳ ಗೌರಿ'!

ಧನುಶ್‌ ನಟನೆಯ ಕರ್ಣನ್‌ ಚಿತ್ರದಲ್ಲಿ ಯೋಗಿಬಾಬು ಕಾಮಿಡಿ ಕಮಾಲ್‌ ಇದ್ದೇ ಇರುತ್ತದೆ. ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಿದ್ದ ಯೋಗಿ ಅವರಿಗೆ ಧನುಶ್ ಚಿನ್ನದ ಚೈನ್‌ ಉಡುಗೊರೆಯಾಗಿ ನೀಡಿದ್ದಾರೆ. ಧನುಶ್‌ ಅವರ ಈ ಗುಣ ಚಿತ್ರಂಗದ ಮೆಚ್ಚುಗೆಗೆ ಪಾತ್ರವಾಗಿದೆ.