ಟಾಲಿವುಡ್‌ ಚಿತ್ರರಂಗದಲ್ಲಿ 122ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಮಾಡುತ್ತಾ, ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಅಮೀರ್‌ ಅಲಿಯಾಸ್‌ ಯೋಗಿ ಇಂದು (ಫೆಬ್ರವರಿ 5) ಸರಳ ವಿವಾಹವಾಗಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!

ಯೋಗಿ ಹಾಗೂ ಮಂಜುಳಾ ತಮಿಳುನಾಡಿನ ತಿತುಟ್ಟನಿಯಲ್ಲಿರುವ ಮುರುಗನ್‌ ದೇವಾಲಯದಲ್ಲಿ, ಹಿರಿಯರ ಉಪಸ್ಥಿತಿಯಲ್ಲಿ ಸಪ್ತಪದಿ ತುಳಿದರು. ಮುರುಗನ್‌ ದೇವಾಲಯವೂ ಯೋಗಿ ಅವರ  ಮನೆ ದೇವರು. ಆಪ್ತರು, ಕುಟುಂಬದವರು ಹಾಗೂ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಮುಂದಿನ ತಿಂಗಳು ಚಿತ್ರರಂಗದ ಗಣ್ಯರು ಹಾಗೂ ಇನ್ನಿತರೆ ಆಪ್ತರಿಗೂ ಈ ಜೋಡಿ ಚೆನ್ನೈನಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ. 

ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್‌- ಮೇಘ ಮದುವೆ!

ಇತ್ತೀಚಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ 'ದರ್ಬಾರ್‌' ಚಿತ್ರದಲ್ಲಿ ಯೋಗಿ ಅವರ ಸೂಪರ್‌ ಕಾಮಿಡಿ ಹೈಲೈಟ್‌ ಆಗಿದೆ. ಅಷ್ಟೇ ಅಲ್ಲದೇ ಯೋಗಿ ಅವರ ಕೈಯಲ್ಲಿ ಸುಮಾರು 5ಕ್ಕೂ ಹೆಚ್ಚು ಚಿತ್ರಗಳಿದ್ದು, ಚಿತ್ರೀಕರಣ ನಡೆಯುತ್ತಿವೆ.