ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್‌ ಅವರ ಪ್ರತಿಯೊಂದು ಸಿನಿಮಾದಲ್ಲೂ ಹಾಸ್ಯ ನಟ ಆಲಿ ಒಬ್ಬ ಖಾಯಂ ನಟನಾಗಿ ಇದ್ದೇ ಇರುತ್ತಾರೆ. ಚಿತ್ರದಲ್ಲಿ ದೊಡ್ಡ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಗದಿದ್ದರೂ ಸಣ್ಣ ಪಾತ್ರದಲ್ಲಾದರೂ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸುತ್ತಾರೆ.

ಕಾಲುಗಳಿಲ್ಲದ ಬೆಕ್ಕನ್ನು ದತ್ತು ಪಡೆದ ನಟ ಪವನ್ ಕಲ್ಯಾಣ್ ಪುತ್ರಿ!

ಪವನ್ ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿದ ನಂತರ ಆಲಿ ಮತ್ತು ಪವನ್ ನಡುವೆ ಮನಸ್ತಾಪ ಉಂಟಾಗಿ ಸ್ನೇಹದಲ್ಲಿ ಬಿರುಕು ಬಿಟ್ಟಿತ್ತು. ಈ ಸಮಯದಲ್ಲಿ ಪವನ್ ಅಭಿಮಾನಿಗಳು ಆಲಿ ವಿರುದ್ಧ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.

ಈ ಹಿಂದೆಯೂ ಪವನ್ ಪೋಸ್ಟ್‌ ವೈರಲ್ ಆಗಿತ್ತು. ' ನಾನು ಕಷ್ಟದಲ್ಲಿದ್ದಾಗ ಗೆಳಯ ನನ್ನ ಜೊತೆ ನಿಲ್ಲಲಿಲ್ಲ. ಅವರಿಗೆ ಜೀವನ ನೀಡಿದೆ ಆದರೆ ಅತ ನನಗೆ ಮೋಸ ಮಾಡಿದ' ಎಂದು ಬರೆದುಕೊಂಡಿದ್ದರು. ಆ ಗೆಳೆಯ ಆಲಿ ಎಂಬುದು ಎಲ್ಲರಿಗೂ ತಿಳಿದಿತ್ತು ಆದರೆ ಹೆಸರು ಬಹಿರಂಗ ಪಡಿಸಿರಲಿಲ್ಲ.

ನಾನು 3 ಮದುವೆಯಾದ್ರೆ ನಿಮ್ಗೇನು ಪ್ರಾಬ್ಲಂ? ಸಿಎಂ ಮೇಲೆ ಪವನ್ ಕಲ್ಯಾಣ್ ಗರಂ!

ಆಲಿ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಪವನ್ ವಿರುದ್ಧ ಪೋಸ್ಟ್‌ ಮಾಡುತ್ತಿದ್ದಾರೆ. ಇದೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ಅಧಿಕಾರಿಗಳ ಕೈಗೆ  ತಲುಪಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ತನ್ನನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ನಟ ಆಲಿ ಸೈಬರ್‌ ಕ್ರೈಮ್‌ನಲ್ಲಿ ದೂರು ನೀಡಿದ್ದರಿಂದ ಜಾಲತಾಣದಲ್ಲಿ ಕೆಟ್ಟ ಪೋಸ್ಟ್ ಹಾಕುತ್ತಿರುವವ ಯಾರೆಂದು ಪತ್ತೆ ಹಚ್ಚಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ.