ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ವೈಯಕ್ತಿಕ ಜೀವನ ಎಷ್ಟೇ ಗೌಪ್ಯವಾಗಿಡಲು ಪ್ರಯತ್ನಿಸಿದ್ದರೂ ಅದು ಅಸಾಧ್ಯ. ಇದಕ್ಕೆ ಕಾರಣವೇ ತಮ್ಮ ಪುತ್ರಿಯರು ಮಾಡುವ ಮಾನವೀಯತೆಯ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು....

ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

ಪುತ್ರಿ ಆದ್ಯಾ:
ಪವನ್ ಕಲ್ಯಾಣ್ ಈಗಾಗಲ್ ಮೂರು ಬಾರಿ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ತಮ್ಮ ಎರಡನೇ ಪತ್ನಿ ರೇಣು ದೇಸಾಯಿ ಅವರಿಗೆ ಒಂದು ಗಂಡು ಒಂದು ಹೆಣ್ಣು. ಮೂರನೇ ಪತ್ನಿಅನ್ನಾ ಅವರಿಗೆ ಎರಡು ಮಕ್ಕಳಿದ್ದಾರೆ. ಅನ್ನಾ ಮೂಲತಃ ರಷ್ಯಾದವರು.

8 ವರ್ಷದ ಆದ್ಯಾ ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡ ಬೆಕ್ಕುಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರೇಣು ದೇಸಾಯಿ ಪೋಟೋ ಶೇರ್ ಮಾಡಿದ್ದು, ಮಗಳ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಎರಡು ವಾರಗಳ ಹಿಂದೆ ತಮಿಳು ನಾಡು ಸಂಸದ ಸಂತೋಷ್ ಕುಮಾರ್‌ ಆರಂಭಿಸಿದ ಗಿಡ ನೆಡುವ ಅಭಿಯಾನದಲ್ಲಿ ಆದ್ಯಾ ಪಾಲ್ಗೊಂಡಿದ್ದಳು.  ತಾಯಿ ರೇಣು ಜೊತೆ ಮನೆಯ ಹಿಂಭಾಗದಲ್ಲಿ ಗಿಡ ನೆಟ್ಟಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ತಂದೆಯ ಹಾದಿಯಲ್ಲಿ ಮಗಳು ಬೆಳೆಯುತ್ತಿದ್ದಾಳೆ', ' ತಂದೆಯ ಗುಣಗಳನ್ನು ಹೊಂದಿರುವ ಆದ್ಯಾ ಮುಂದೆ ದೊಡ್ಡ ವ್ಯಕ್ತಿ ಆಗುತ್ತಾಳೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.