ಈಕೆ ನನ್ನ ತಾಯಿಯಲ್ಲ, ಮಾನವೀಯತೆ ಮೆರೆಯುತ್ತಿರುವ ಈ ಮಹಾತಾಯಿಗೆ ಧನ್ಯವಾದ: ಚಿರಂಜೀವಿ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಚಿರಂಜೀವಿ ತಾಯಿ ಮಾಸ್ಕ್ ತಯಾರಿಸುತ್ತಿರುವ ಪೋಟೋ, ಇವರು ನನ್ನ ತಾಯಿ ಅಲ್ಲ ಮಹಾತಾಯಿ ಅಂದಿದೇಕೆ?
ಮಹಾಮಾರಿ ಕೊರೋನಾ ವೈರಸ್ ದೇಶಾದ್ಯಂತ ದಿನೇ ದಿನೇ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದರ ಹಿನ್ನೆಲೆಯಲ್ಲಿ ವೈದ್ಯಕಿಯೇ ತಜ್ಞರ ನಿಯಮಗಳ ಪ್ರಕಾರ ಕೊರೋನಾದಿಂದ ಪಾರಾಗಲು ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ಇದರ ಪರಿಣಾಮ ಮಾಸ್ಕ್‌ಗಳ ಬಳಕೆ ಹೆಚ್ಚಾಗಿ ಈಗ ಕೊರತೆಯೊಂಟಾಗಿದೆ.
ತಾಯಿ ಜೊತೆ ಮೆಗಾ ಸ್ಟಾರ್ ಸೆಲ್ಫೀ: #StayHomeಗೆ ಮನವಿ!
ಈ ಸಮಯದಲ್ಲಿ ಅನೇಕರು ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ಚಿರಂಜೀವಿ ತಾಯಿ ಮನೆಯಲ್ಲಿಯೇ ಇನ್ನಿತ್ತರ ಹೆಣ್ಣುಮಕ್ಕಳ ಜೊತೆ ಸೇರಿ ದಿನಕ್ಕೆ ಸುಮಾರು 700ಕ್ಕೂ ಹೆಚ್ಚು ಮಾಸ್ಕ್ ತಯಾರಿಸುತ್ತಿದ್ದಾರೆ ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು . ಅಷ್ಟೇ ಅಲ್ಲದೆ ಇದನ್ನು ಖಾಸಗಿ ವಾಹಿನಿಯಲ್ಲೂ ಪ್ರಸಾರ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಚಿರಂಜೀವಿ ಟ್ಟೀಟರ್ ಖಾತೆಯ ಮೂಲಕ ಸ್ಪಷ್ಟನೇ ನೀಡಿದ್ದಾರೆ.
Covid19 ಯುದ್ಧಕ್ಕೆ ದೇಣಿಗೆ ನೀಡದ ನಟಿಯರ ಬಗ್ಗೆ ಚಿರಂಜೀವಿ ಅಸಮಾಧಾನ
'ಕೆಲ ಮಾದ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನನ್ನ ತಾಯಿ ಮಾಸ್ಕ್ ತಯಾರಿಸುತ್ತಿದ್ದಾರೆ ಎಂದು ಹರಿದಾಡುತ್ತಿದೆ. ಇವರು ನನ್ನ ತಾಯಿ ಅಲ್ಲಾ ಅದರೆ ಮಾನವೀಯತೆ ಮೆರೆಯುತ್ತಿರುವ ಈ ಮಹಾತಾಯಿಗೆ ನನ್ನ ನಮಸ್ಕಾರಗಳು' ಎಂದು ಬರೆದುಕೊಂಡಿದ್ದಾರೆ.