Covid19 ಯುದ್ಧಕ್ಕೆ ದೇಣಿಗೆ ನೀಡದ ನಟಿಯರ ಬಗ್ಗೆ ಚಿರಂಜೀವಿ ಅಸಮಾಧಾನ
COVID19ನಿಂದ ಉಂಟಾಗಿರುವ ಸಮಸ್ಯೆಗೆ ಸಹಾಯ ಮಾಡಲು ಎಲ್ಲಾ ಭಾರತೀಯ ಚಿತ್ರರಂಗದ ನಟ-ನಟಿಯರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ದೇಣಿಗೆ ನೀಡುವಲ್ಲಿ ತೆಲಗು ಚಿತ್ರರಂಗದ ಸೆಲೆಬ್ರೆಟಿಗಳು ಒಂದು ಹೆಜ್ಜೆ ಮುಂದಿದ್ದಾರೆ. ಇಂಡಸ್ಟ್ರೀಯ ಪ್ರತಿಯೊಬ್ಬ ಕಲಾವಿದನಿಗೂ ಸಹಾಯ ಮಾಡಲು ವಿನಂತಿ ಮಾಡಿಕೊಂಡ ತೆಲುಗು ಮೆಗ ಸ್ಟಾರ್ ಚಿರಂಜೀವಿ ಕಲೀಗ್‌ಗಳ ಜೊತೆ ಸೇರಿ, ಕೊರೋನಾ ಕ್ರೈಸಿಸ್ ಚಾರಟಿಯನ್ನು ರಚಿಸಿದ್ದಾರೆ. ಹೆಚ್ಚಿನವರೂ ಸ್ವಂದಿಸಿ ದೇಣಿಗೆ ನೀಡಿದ್ದಾರೆ. ಆದರೆ ಕೆಲವು ಸ್ಟಾರ್ ನಟಿಯರು ಯಾವುದೇ ರೀತಿ ಸಹಾಯ ಮಾಡದೆ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಚಿರಂಜೀವಿ ಅಸಮಾಧಾನಗೊಂಡಿದ್ದಾರೆ.
ಚಿತ್ರರಂಗದ ದಿನಗೂಲಿ ಕಾರ್ಮಿಕರಿಗಾಗಿ ಕೊರೋನಾ ಕ್ರೈಸಿಸ್ ಚಾರಿ ಟಿಯನ್ನು ಸ್ಥಾಪಿಸಿರುವ ಮೆಗಾ ಫ್ಯಾಮಿಲಿ
ದಿನಸಿ, ಸ್ಯಾನಿಟೈಜರ್ ಮತ್ತು ಮಾಸ್ಕ್ ಸೇರಿದಂತೆ ಸುಮಾರು 2220 ರೂಗಳ ಮೌಲ್ಯದ ವಸ್ತಗಳನ್ನು ನೀಡಲು ಕೊರೋನಾ ಕ್ರೈಸಿಸ್ ಚಾರಿಟಿ ಸಿದ್ಧವಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ ಅಗತ್ಯ ವಸ್ತುಗಳ ವಿತರಣೆ.
ಲಾಕ್‌ಡೌನ್ ಮುಗಿಯುವವರೆಗೆ ಅಥವಾ ಏಪ್ರಿಲ್ ಅಂತ್ಯದ ತನಕ ಅವರು ಈ ಕೆಲಸ ಮಾಡಲಿದ್ದಾರೆ.
ಚಿರಂಜೀವಿ ಮನವಿಗೆ ಸ್ಪಂದಿಸಿದ ಕೃಷ್ಣ ರಾಜು, ಮಹೇಶ್ ಬಾಬು, ಗೋಪಿಚಂದ್, ನಾನಿ, ಪ್ರಭಾಸ್, ಅಲ್ಲು ಅರ್ಜುನ್ ಮುಂತಾದವರು.
ನಟಿಯರಲ್ಲಿ ಕೇವಲ ಲಾವಣ್ಯ ತ್ರಿಪಾಠಿ ಮತ್ತು ಪ್ರಣಿತಾ ಸುಭಾಷ್ ಮಾತ್ರ ದೇಣಿಗೆ ನೀಡಿದವರು.
ಸಹಾಯ ಮಾಡುವ ಬಗ್ಗೆ ಮೌನ ವಹಿಸಿರುವ ಸಮಂತಾ, ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಮುಂತಾದವರ ಮೇಲೆ ಅಸಮಾಧಾನ ತೋರಿದ್ದಾರೆ ಚಿರಂಜೀವಿ.
ವರದಿಗಳ ಪ್ರಕಾರ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಚಿರಂಜೀವಿಗೆ ಕರೆ ಮಾಡಿ ಶೀಘ್ರದಲ್ಲೇ ದೇಣಿಗೆ ನೀಡುವುದಾಗಿ ಹೇಳಿದ್ದಾರಂತೆ.
ಕೋಟಿ ರಚಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಕೇಳಿಕೊಳ್ಳುವ ಹಾಡನ್ನು ಸಹ ಸ್ವತಃ ಮೆಗಾಸ್ಟಾರ್ ಹಾಡಿದ್ದಾರೆ ಈ ಸಮಯದಲ್ಲಿ.