ದಿನೇ ದಿನೇ ಕೊರೋನಾ ವೈರಸ್‌ ಹೆಚ್ಚಾಗುತ್ತಿರುವ ಕಾರಣ 21 ದಿನಗಳ ಕಾಲ ಭಾರತ್‌ ಲಾಕ್‌ಡೌನ್‌ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಸೆಲೆಬ್ರಿಟಿಗಳು ಹಾಗೂ ಶ್ರೀ ಸಾಮಾನ್ಯರು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಭಾರತ ಲಾಕ್‌ಡೌನ್‌ನಿಂದ ಕೊರೋನಾ ತಡೆಗಟ್ಟಬಹುದು ಆದರೆ ದಿನಗೂಲಿ ಮಾಡುವ ಕಾರ್ಮಿಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಇಟ್ಟಂತ ಪರಿಸ್ಥತಿಯೂ ಎದುರಾಗಿದೆ. ಆದರೆ, ಇಂಥದ್ದೊಂದು ಪರಿಸ್ಥಿತಿಯನ್ನು ಇದೇ ರೀತಿ ನಿಭಾಯಿಸುವ ಅನಿವಾರ್ಯತೆಯೂ ಇದೆ. 

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಲಾಕ್‌ಡೌನ್‌ನಿಂದ ಆಗುತ್ತಿರುವ ಅನಾನುಕೂಲವನ್ನು ಪರಿಗಣಿಸಿ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಆಂಧ್ರ ಪ್ರದೇಶ, ತೆಲಾಂಗಣ ರಿಲೀಫ್‌ ಫಂಡ್‌ಗೆ 1.25 ಕೋಟಿಯನ್ನು ನೀಡಿ ಸಹಾಯ ಮಾಡಿದ್ದಾರೆ. 

ಚಿತ್ರೀಕರಣ ರದ್ದಾದ ಕಾರಣ ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಅಲ್ಲು ಅರ್ಜುನ್‌, ಕೆಲ ದಿನಗಳ ಹಿಂದೆ ಹೈದರಾಬಾದ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ರೇಷನ್‌ ಕೊಳ್ಳಲು ಬಂದಿದ್ದ ಫೋಟೋ ವೈರಲ್‌ ಆಗುತ್ತಿದೆ.  ಸಾಮಾನ್ಯರಂತೆ ಮಾಸ್ಕ್‌ ಧಿರಿಸಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಂತೂ ತಮ್ಮ ಗಂಡಂದಿರಿಗೆ ಈ ಫೋಟೋ ನೋಡುವಂತೆ ಕಾಮೆಂಟ್‌ ಮಾಡುತ್ತಿದ್ದಾರೆ. 

 
 
 
 
 
 
 
 
 
 
 
 
 

She’s my Bae ( Bey ) #fatherdaughterlove #justforfunn #alluarha

A post shared by Allu Arjun (@alluarjunonline) on Mar 1, 2020 at 8:46am PST

ತ್ರಿವಿಕ್ರಮ್‌ ನಿರ್ದೇಶನದಲ್ಲಿ ಪೂಜಾ ಹೆಗ್ಡೆಗೆ ಜೋಡಿಯಾಗಿ ಬ್ಲಾಕ್‌ ಬಸ್ಟರ್‌ ಹಿಟ್‌ ' ಅಲ್ಲ ವೈಕುಂಟಪುರಮುಲೋ' ನೀಡಿದ ಅಲ್ಲು ಅರ್ಜುನ್‌ ಯಶಸ್ಸಿನ ಗುಂಗಿನಲ್ಲಿ ತೇಲುತ್ತಿದ್ದಾರೆ.

ಜ್ಞಾನ, ತಂತ್ರತ್ಜ್ಞಾನದಲ್ಲಿ ವಿಪರೀತ ಮುಂದುವರಿದಿದ್ದಾನೆ ಮನುಷ್ಯ. ಇದೇ ಗುಂಗಿನಲ್ಲಿದ್ದ ಅವನು ತನ್ನ ಮೂಲ ಗುಣವನ್ನೇ ಮರೆತಿದ್ದ. ತಮ್ಮವರ ಕೈ ಬಿಟ್ಟು, ನಿಸರ್ಗವನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳುತ್ತಾ ಬದುಕುತ್ತಿದ್ದ. ಈ ಕೊರೋನಾ ಈ ಮನುಷ್ಯನನ್ನು ಅದ್ಯಾವ ರೀತಿ ಬದಲಾಯಿಸಿದೆ ಎಂದರೆ ಸಿಂಪ್ಲಿಸಿಟ ಕಲಿಸುವುದರೊಂದಿಗೆ, ತಾವು, ನಮ್ಮವರು, ಪ್ರಕೃತಿಮಾತೆಗೆ ಮೌಲ್ಯವನ್ನು ತಿಳಿಸಿಕೊಡುವಲ್ಲಿಯೂ ಯಶಸ್ವಿಯಾಗಿದೆ. ಆದರೆ, ಈಗ ಕಲಿತಿರುವ ಪಾಠವನ್ನು ಇನ್ನು ಮುಂದೆಯೂ ಜೀವನದಲ್ಲಿ ಪಾಲಿಸುವುದು ಅತೀ ಮುಖ್ಯ. 

 

 
 
 
 
 
 
 
 
 
 
 
 
 

GRATITUDE !

A post shared by Allu Arjun (@alluarjunonline) on Mar 22, 2020 at 5:03am PDT