ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅದ್ಭುತ ನಟ ಮಾತ್ರವಲ್ಲದೇ, ಒಳ್ಳೆಯ ಹೃದಯವಂತನೂ ಹೌದು. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾ, ಜೊತೆಗಿದ್ದವರು ಸದಾ ಸಂತೋಷವಾಗಿರಬೇಕೆಂದು ಬಯಸುವ ನಟ ಅಲ್ಲುಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹರಿದು ಬರುತ್ತಿದೆ. ಯಾಕೆ ಅಂದ್ರಾ? ಇಲ್ಲಿದೆ ನೋಡಿ...

ಅಲ್ಲು ಅರ್ಜುನ್‌ ವಿರುದ್ಧ ದೂರು ದಾಖಲು; ಕಾಡಿಗೆ ಭೇಟಿ ಕೊಟ್ಟಿದೇ ತಪ್ಪಾಯ್ತಾ? 

ತಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯನ್ನೂ ತಮ್ಮ ಕುಟುಂಬದವರಂತೆ ಅಲ್ಲು ಅರ್ಜುನ್ ನೋಡಿಕೊಳ್ಳುತ್ತಾರೆ. ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯತೆ ಅರ್ಜುನ್ ಅವರಿಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ಹಲವು ವರ್ಷಗಳಿಂದೆ ನಟನೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು ಶೀಘ್ರವೇ ಮದುವೆ ಆಗಲಿದ್ದು, ನಟ ಸರ್ಪ್ರೈಸ್‌ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.

 

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿಬ್ಬಂದಿ ಜೊತೆ ಅಲ್ಲು ಫೋಟೋ ವೈರಲ್ ಆಗುತ್ತಿದೆ. ಇದ್ಯಾವ ಸಂದರ್ಭ ಎಂದು ಜನರು ಕಾಮೆಂಟ್ ಮಾಡಲು ಪ್ರಾರಂಭಿಸಿದಕ್ಕೆ, ಸಿಬ್ಬಂದಿಯೊಬ್ಬರು ಉತ್ತರಿಸಿದ್ದಾರೆ. ಅರ್ಜುನ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮದುವೆ ನಿಶ್ಚಯವಾಗಿದೆ. ಈ ಕಾರಣ ಅವರಿಗೆ ಸರ್ಪ್ರೈಸ್‌ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದರು. ರುಚಿಯಾದ ಕೇಕ್ ಹಾಗೂ ಬೊಂಬಾಟ್ ಭೋಜನ ಪಾರ್ಟಿ ಹೈಲೈಟ್ ಎನ್ನಲಾಗಿದೆ.

ಅಲ್ಲೂ ಅರ್ಜುನ್ ಮುದ್ದು ಮಗಳ ಕತೆ ಗೊತ್ತಾ? 

ಅರ್ಜುನ್ ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ಮಳೆಯಿಂದ ತೊಂದರೆಗೆ ಸಿಲುಕಿಕೊಂಡ ಜನರಿಗೆ ಅರ್ಥಿಕ ಸಹಾಯ ಮಾಡಿದ್ದರು. ಹಾಗೂ ಫ್ಲೆಕ್ಸ್ ಕಟ್ಟುವಾಗ ಮೃತಪಟ್ಟ ಪವನ್ ಕಲ್ಯಾಣ್ ಅಭಿಮಾನಿ ಕುಟುಂಬಕ್ಕೂ ಸಹಾಯ ಹಸ್ತ ಚಾಚಿದ್ದರು.