Asianet Suvarna News Asianet Suvarna News

ಪವನ್​ ಕಲ್ಯಾಣ್​, ಸಮಂತಾ, ಜಿರಂಜೀವಿ ಪುತ್ರಿಗೆ ಇನ್ನೆಷ್ಟು ಮದ್ವೆ? ಜ್ಯೋತಿಷಿ ವೇಣು ಸ್ವಾಮಿ ರಿವೀಲ್​

ಟಾಲಿವುಡ್​ ನಟರ ಭವಿಷ್ಯ ನುಡಿಯುವ ವೇಣುಸ್ವಾಮಿ ಅವರು ಸಮಂತಾ, ಪವನ್​ ಕಲ್ಯಾಣ್​ ಸೇರಿದಂತೆ ಕೆಲವರ ಮದ್ವೆ ಭವಿಷ್ಯ ನುಡಿದಿದ್ದಾರೆ. ಅವರು ಹೇಳಿದ್ದೇನು? 
 

Astrologer Venuswamys prediction about Samantha Pawan Kalyan suc
Author
First Published Aug 27, 2023, 6:10 PM IST

ಜ್ಯೋತಿಷವನ್ನು ನಂಬುವುದಿಲ್ಲ ಎಂದು ಎಷ್ಟೇ ಹೊರಗಿನಿಂದ ಹೇಳುತ್ತಿದ್ದರೂ ಒಂದಲ್ಲ ಒಂದು ಟೈಮ್​ನಲ್ಲಿ ಹೆಚ್ಚಿನವರು ಜ್ಯೋತಿಷಿಗಳ ಮೊರೆ ಹೋಗುವುದು ಇದೆ. ಅದಕ್ಕೆ ಸಿನಿ ಲೋಕವೂ ಹೊರತಾಗಿಲ್ಲ. ಇಲ್ಲಿ ಜ್ಯೋತಿಷವನ್ನು ನಂಬುವುದು ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಚಿತ್ರ ಸೆಟ್ಟೇರುವ ಮುಹೂರ್ತದಿಂದ ಹಿಡಿದು ಅದರ ಬಿಡುಗಡೆಯವರೆಗೂ ಎಷ್ಟೋ ನಿರ್ಮಾಪಕ-ನಿರ್ದೇಶಕರು, ನಟ-ನಟಿಯರು ಭವಿಷ್ಯ ಕೇಳುವುದು ಇದ್ದೇ ಇದೆ. ಸಿನಿಮಾ ಲೋಕಕ್ಕೆ ಬಂದರೆ ನಟ-ನಟಿಯರ ಯಥಾವತ್​ ಭವಿಷ್ಯ ನುಡಿಯುವವರು ಎಂದೇ ಖ್ಯಾತರಾಗಿರುವವರು ಕೆಲ ಜ್ಯೋತಿಷಿಗಳು ಇದ್ದಾರೆ. ಬಾಲಿವುಡ್​ನಲ್ಲಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಈ ಸಾಲಿಗೆ ಸೇರಿದ್ದರೆ ಟಾಲಿವುಡ್​ ನಟ-ನಟಿಯರ ಜೀವನದ ಭವಿಷ್ಯ ನುಡಿಯುವಲ್ಲಿ ಫೇಮಸ್​ ಆಗಿರುವವರು ಜ್ಯೋತಿಷಿ ವೇಣುಸ್ವಾಮಿ ಅವರು. ಇದಾಗಲೇ ಹಲವಾರು ಮಂದಿಗೆ ಇರುವ ಭವಿಷ್ಯ ನುಡಿದಿದ್ದು, ಬಹುತೇಕ ಭವಿಷ್ಯ ಸರಿಯಾಗಿಯೇ ಆಗಿದೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ, ವೇಣುಸ್ವಾಮಿ ಬಳಿ ಪೂಜೆ ಮಾಡಿಸಿಕೊಂಡ ಬಳಿಕವೇ ಸ್ಟಾರ್ ನಟಿಯಾಗಿದ್ದು ಎನ್ನಲಾಗಿದೆ. ರಶ್ಮಿಕಾ ಸ್ಟಾರ್ ಆಗುವ ಬಗ್ಗೆಯೂ ಹೇಳಿದ್ದರಲ್ಲದೆ ಅವರಿಗಾಗಿ ವಿಶೇಷ ಪೂಜೆ ಮಾಡಿದ್ದರು. ಪ್ರಭಾಸ್​ರ ಕೆಲ ಸಿನಿಮಾಗಳು ಫ್ಲಾಪ್ ಆಗುತ್ತವೆಂದು ಹೇಳಿದ್ದರು. ಇನ್ನೂ ಕೆಲವು ನಟ-ನಟಿಯರ ಬಗ್ಗೆ ಭವಿಷ್ಯವನ್ನು ವೇಣು ಸ್ವಾಮಿ ಈ ಹಿಂದೆ ಹೇಳಿದ್ದರು.

ಇವರು ಹೇಳುವ ಭವಿಷ್ಯ ತುಂಬಾ ಸ್ಪಷ್ಟವಾಗಿರುತ್ತದೆ ಎಂದು ತಿಳಿದದ್ದು, ಸಮಂತಾ-ನಾಗ ಚೈತನ್ಯ (Samantha-Naga Chaitanya) ಬೇರೆಯಾಗುತ್ತಾರೆ ಎಂದು ಹೇಳಿದ್ದಾಗ. ಈ ಬಗ್ಗೆ  ವೇಣು ಸ್ವಾಮಿ ಮೂರು ವರ್ಷಗಳ ಹಿಂದೆ ಹೇಳಿದ್ದರು. ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಅವರು ಸಮಂತಾ-ನಾಗ ಚೈತನ್ಯ ಮದುವೆಯ ನಂತರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಅವರು ಚಲನಚಿತ್ರಗಳ ವಿಷಯದಲ್ಲಿ ಚೆನ್ನಾಗಿದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಿದ್ದರು. ಇದು ನಿಜವಾಗಿತ್ತು. ಇವರಿಬ್ಬರು ಬೇರೆಯಾಗಲು ಸಾಧ್ಯವೇ ಇಲ್ಲ, ಅಷ್ಟು ಕ್ಯೂಟ್​ ಜೋಡಿ ಎಂದೆಲ್ಲಾ ಹೇಳಿದವರಿಗೆ ಇವರ ಡಿವೋರ್ಸ್​ ವಿಷಯ ನಿಜಕ್ಕೂ ಶಾಕಿಂಗ್​ ಆಗಿತ್ತು.  

3ನೇ ಪತ್ನಿಗೂ ಪವನ್ ಕಲ್ಯಾಣ್ ವಿಚ್ಚೇದನ: ಈ ಗಾಳಿ ಸುದ್ದಿ ಹಬ್ಬುತ್ತಿರುವುದ್ಯಾಕೆ?

ಇದೀಗ ಸಮಂತಾ ಅವರ ಎರಡನೆಯ ಮದುವೆಯ ವಿಷಯದ ಜೊತೆಜೊತೆಗೇನೇ ಪವನ್​ ಕಲ್ಯಾಣ್​ ಹಾಗೂ ಚಿರಂಜೀವಿ ಪುತ್ರಿ ಶ್ರೀಜಾ ಅವರ ಮದುವೆಯ ಗಲಾಟೆಯ ಬಗ್ಗೆಯೂ ವೇಣು ಸ್ವಾಮಿ ಮಾತನಾಡಿದ್ದಾರೆ.  ಅಂದಹಾಗೆ  ಪವನ್ ಕಲ್ಯಾಣ್‌ ಅವರಿಗೆ ಇದಾಗಲೇ ಮೂರು ಮದುವೆ ಆಗಿದೆ. ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು.  2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು,  2008ರಲ್ಲಿ ರೇಣು ಎಂಬುವವರನ್ನು  ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು.  ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್​ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ (Renu Desai) ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್​ ನೀಡಿದ ಬಳಿಕ ಪವನ್​ ಕಲ್ಯಾಣ್​ ಅವರು  ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು  ಮದುವೆಯಾಗಿದ್ದಾರೆ.  ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಆದರೆ ಈ ಮದುವೆ ಕೂಡ ಮುರಿದು ಬಿದ್ದು ಅವರು ನಾಲ್ಕನೆಯ ಮದುವೆಯಾಗುತ್ತಾರೆ ಎಂದಿದ್ದಾರೆ ವೇಣುಸ್ವಾಮಿ!

ಇನ್ನು  ಚಿರಂಜೀವಿ ಮಗಳು ಶ್ರೀಜಾ ಬದುಕಲ್ಲಿಯೂ ಮದುವೆಯ ಬಿರುಗಾಳಿ ಬೀಸಿದೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ (Shreeja) ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವ ನಡುವೆಯೇ ಅವರು ಇನ್ನೂ ಎರಡು ಮದ್ವೆಯಾಗುತ್ತಾರೆ ಎಂದಿದ್ದಾರೆ ವೇಣು ಸ್ವಾಮಿ.  ತನ್ನ ಸ್ನೇಹಿತನನ್ನು ಶ್ರೀಜಾ ಮದುವೆಯಾಗುತ್ತಾರೆ ಎಂದಿದ್ದಾರೆ.  ಇನ್ನು ಸಮಂತಾ ಬಗ್ಗೆಯೂ ಹೇಳಿರುವ ಅವರು, ಸಮಂತಾ ಮತ್ತು ನಾಗಚೈತನ್ಯ ಇಬ್ಬರಿಗೂ  ಎರಡನೇ ವಿವಾಹದ ಯೋಗವಿದೆ. ವೃತ್ತಿ ವಿಚಾರದಲ್ಲಿ ಸಮಂತಾ ಸ್ಟ್ರಾಂಗ್ ಆಗಿದ್ದರು, ಹಾಗಾಗಿ ಹೀಗೆ ಆಯ್ತು ಎಂದಿದ್ದು, ಇಬ್ಬರೂ ಮತ್ತೊಂದು ಮದುವೆಯಾಗುತ್ತಾರೆ ಎಂದಿದ್ದಾರೆ.

ಸಮಂತಾ ಡಿವೋರ್ಸ್​ ವಿಷ್ಯ ಮೊದ್ಲೇ ಹೇಳಿದ್ದ ಜ್ಯೋತಿಷಿಯಿಂದ ಅಲ್ಲು ಅರ್ಜುನ್ 10 ವರ್ಷದ ಭವಿಷ್ಯ!

Follow Us:
Download App:
  • android
  • ios