Asianet Suvarna News Asianet Suvarna News

Mahesh Babu Knee Surgery: ಟಾಲಿವುಡ್ ಪ್ರಿನ್ಸ್‌ಗೆ ವಿದೇಶದಲ್ಲಿ ಮಂಡಿ ಆಪರೇಷನ್!

ನಟ ಮಹೇಶ್ ಬಾಬುಗೆ ಆಪರೇಷನ್. ಯಾರಿಗೂ ಯಾಕೆ ಹೇಳಲಿಲ್ಲ? ಇಷ್ಟು ಚಿಕ್ಕ ವಯಸ್ಸಿಗೆ ಮಂಡಿ ನೋವಾ?

Tollywood actor Mahesh Babu gets Knee Surgery in Spain vcs
Author
Bangalore, First Published Dec 17, 2021, 2:19 PM IST

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಮತ್ತು ಪತ್ನಿ ನಮ್ರತಾ ಶಿರೋಡ್ಕರ್ (Namratha Shirodkar) ವಿಮಾನ ನಿಲ್ದಾಣದ ಬಳಿ ಸೋಮವಾರ ರಾತ್ರಿ ಕಾಣಿಸಿಕೊಂಡಿದ್ದರು. ದಂಪತಿ ಸೈಲೆಂಟ್ ಆಗಿ ವಿದೇಶಕ್ಕೆ ಹಾರುತ್ತಿರುವ ವಿಚಾರ ಎಲ್ಲೆಡೆ ಹಬ್ಬಿತ್ತು. ಯಾವ ಕಾರಣಕ್ಕೆ ಎಂದು ತಿಳಿದು ಬಂದಿರಲಿಲ್ಲ ಆದರೆ ಕೆಲವು ಮೂಲಗಳಿಂದ ಬರುತ್ತಿರುವ ಮಾಹಿತಿ ಪ್ರಕಾರ ಮಹೇಶ್ ಬಾಬು ಮಂಡಿ ಆಪರೇಷನ್ (Knee Surgery) ಮಾಡಿಸಿಕೊಂಡಿದ್ದಾರಂತೆ. 

ಹೌದು!  46 ವರ್ಷದ ಮಹೇಶ್ ಬಾಬು ಅವರಿರಗೆ ಕೆಲವು ತಿಂಗಳಿನಿಂದ ಮಂಡಿ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆಯುತ್ತಿದ್ದರೂ, ನೋವು ಕಡಿಮೆಯಾಗದ ಕಾರಣ ವಿದೇಶದಲ್ಲಿರುವ ವೈದ್ಯರನ್ನು ಸಂಪರ್ಕಿಸಿದ್ದಾರೆ. ಅವರು ತಕ್ಷಣವೇ ಆಪರೇಷನ್ ಮಾಡುವುದಾಗಿ ಸಲಹೆ ಕೊಟ್ಟರಂತೆ. ಹೀಗಾಗಿ ಇಬ್ಬರೂ ಸೋಮವಾರ ರಾತ್ರಿಯೇ ಸ್ಪೇನ್‌ಗೆ (Spain) ಪ್ರಯಾಣ ಮಾಡಿದ್ದಾರೆ. 

ಸ್ಪೇನ್‌ ತಲುಪುತ್ತಿದ್ದಂತೆ, ಇಬ್ಬರೂ ಆಸ್ಪತ್ರೆಗೆ (Hospital) ಭೇಟಿ ನೀಡಿ, ಮಂಗಳವಾರವೇ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಈ ವಿಚಾರ ಈಗ ಬೆಳಕಿಗೆ ಬಂದಿದೆ. ಸದ್ಯ ವಿಶ್ರಾಂತಿಯಲ್ಲಿ ಮಹೇಶ್ ಬಾಬು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಅವರ ಆಪ್ತರು ಹೇಳುವ ಪ್ರಕಾರ ಮಹೇಶ್ ಸ್ವಲ್ಪ ದಿನಗಳ ಕಾಲ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡು, ಆನಂತರ ಪ್ರೈವೇಟ್ ವಿಮಾನದಲ್ಲಿ (Private Jet) ಭಾರತಕ್ಕೆ ಆಗಮಿಸಲಿದ್ದಾರೆ. 

Tollywood actor Mahesh Babu gets Knee Surgery in Spain vcs

'ಮಂಗಳವಾರ ಸಣ್ಣ ಮಂಡಿ ಸರ್ಜರಿ ಮಾಡಲಾಗಿದೆ. ಮಹೇಶ್ ಬಾಬು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆಪರೇಷನ್ ಆದ ಬಳಿಕ ಅವರು ದುಬೈನ (Dubai) ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲ್ಲಿದ್ದಾರೆ. ಆನಂತರ ಸಿನಿಮಾ ಕೆಲಸಗಳಿಗೆ ಭಾರತಕ್ಕೆ ಬರಲಿದ್ದಾರೆ,' ಎಂದು ಅವರ ಆಪ್ತರು (Sources) ಖಾಸಗಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. 

'ಸರ್ಕಾರು ವಾರಿ ಪಾಟ' ಚಿತ್ರದ ಬಿಡುಗಡೆ ದಿನಾಂಕ ಟ್ವೀಟ್ ಮಾಡಿದ ಚಿತ್ರತಂಡ

ಸೋಷಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಇರುವ ಈ ಸೆಲೆಬ್ರಿಟಿ ಕಪಲ್‌ಗಳು ಸ್ನೇಹಿತರ ಹುಟ್ಟುಹಬ್ಬಕ್ಕೆ (Birthday) ಹಾಗೂ ಸಿನಿಮಾ ಪೋಸ್ಟರ್ (Film Poster) ಹೊರತು ಪಡಿಸಿ ಏನನ್ನೂ ಹಂಚಿಕೊಳ್ಳುತ್ತಿಲ್ಲ. ಪರಶುರಾಮ್ ಪೆಟ್ಲಾ ನಿರ್ದೇಶನ ಸರ್ಕಾರಿ ವಾರಿ ಪಾಟು (Sarkaru Vari Paata) ಸಿನಿಮಾದ ಬಿಡುಗಡೆಗೆ ಸಿದ್ಧವಾಗುತ್ತಿದೆ. ಕೀರ್ತಿ ಸುರೇಶ್‌ (Keerthy Suresh) ಜೊತೆ ಮಹೇಶ್ ರೊಮ್ಯಾನ್ಸ್ ಮಾಡಲಿದ್ದು ಏಪ್ರಿಲ್ 1, 2022ರಂದು ಸಿನಿಮಾ ಬಿಡುಗಡೆ ಆಗಲಿದೆ. ಇದಾದ ನಂತರ ಪೂಜಾ ಹೆಗ್ಡೆಗೆ ಜೋಡಿಯಾಗಿ ತ್ರಿವಿಕ್ರಮ್ ಸಿನಿಮಾದಲ್ಲಿ ಪ್ರಿನ್ಸ್‌ ನಟಿಸಲಿದ್ದಾರೆ. 

ರಣವೀರ್‌ ಅಲ್ಲ ಈ ನಟ ದೀಪಿಕಾರ ಫೇವರೇಟ್‌ ಅಂತೆ!

ಇತ್ತೀಚಿಗೆ ಸಾಯಿ ಪಲ್ಲವಿ ನಟನೆಯ ಸಿನಿಮಾ ನೋಡಿ ಪ್ರಿನ್ಸ್ ಫಿದಾ ಆಗಿದ್ದರು. ಟ್ಟಿಟರ್‌ನಲ್ಲಿ ತಮ್ಮ ಅಭಿಪ್ರಾಯ ಕೂಡ ಹಂಚಿಕೊಂಡಿದ್ದರು. 'ಲವ್ ಸ್ಟೋರಿ(Love Story) ಶೇಖರ್ ಕಮ್ಮುಲಾ ಎಲ್ಲ ತರದಲ್ಲಿ ಪರ್ಫೆಕ್ಟ್ ಆಗಿ ಸಿನಿಮಾ ಕೊಡುತ್ತಾರೆ. ನಾಕ್ ಔಟ್ ಫಿಲಂ ನೀಡುತ್ತಾರೆ !! ನಾಗ ಚೈತನ್ಯ (Naga chaitanya) ಅಕ್ಕಿನೇನಿ ಒಬ್ಬ ನಟನಾಗಿ ವಯಸ್ಸಿಗೆ ಬಂದಿದ್ದಾರೆ. ಅವರು ಗೇಮ್ ಚೇಂಜರ್. ಟಾಲಿವುಡ್ ಪ್ರಿನ್ಸ್ ನಂತರ 'ಪ್ರೇಮಂ' ನಟಿ ಸಾಯಿ ಪಲ್ಲವಿ(Sai Pallavi) ಎಂದಿನಂತೆ ಸೆನ್ಸೇಷನಲ್. ಆ ಹುಡುಗಿಗೆ ಮೂಳೆ ಇದೆಯೇ ??? ಪರದೆಯಲ್ಲಿ ಈ ರೀತಿ ಡ್ಯಾನ್ಸ್ ಮಾಡುವುದನ್ನು ಯಾರೂ ನೋಡಿಲ್ಲ !!! ಕನಸಿನಂತೆ ಚಲಿಸುತ್ತಾರೆ,' ಎಂದು ಬರೆದುಕೊಂಡಿದ್ದರು. ಪಲ್ಲವಿಯನ್ನು ಮಹೇಶ್ ಹೊಗಳಿದ್ದು ನೋಡಿ ನೀವಿಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ನೆಟ್ಟಿಗರು ಡಿಮ್ಯಾಂಡ್ ಇಟ್ಟಿದ್ದರು. 

ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯದಲ್ಲೂ ಮಹೇಶ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಫುಡ್ ಕಿಟ್ ವಿತರಣೆ ಮಾಡುವುದಲ್ಲದೇ, ಒಂದಿಷ್ಟು ಊರುಗಳ ಜವಾಬ್ದಾರಿಗಳನ್ನು ತೆಗೆದುಕೊಂಡು ಅವರಿಗೆ ಉಚಿತ ಲಸಿಕೆ ಕೊಡಿಸಿದ್ದರು. ಪ್ರಿನ್ಸ್ ಆದಷ್ಟು ಬೇಗ ಚೇತರಿಸಿಕೊಂಡು ಬರಲಿ, ಎಂದು ಆಶೀಸೋಣ.

Follow Us:
Download App:
  • android
  • ios