Asianet Suvarna News Asianet Suvarna News

Shreya Ghoshal Birthday: ಬಾಲಿವುಡ್‌ನ ದುಬಾರಿ ಗಾಯಕಿಯ ಸಂಭಾವನೆ ಎಷ್ಟು ಗೊತ್ತೆ?

ಶ್ರೇಯಾ ಘೋಷಾಲ್ ಜನ್ಮದಿನವಿಂದು. ಲತಾ ಮಂಗೇಶ್ಕರ್ ತೀರಿಕೊಂಡ ಬಳಿಕ, ಬಾಲಿವುಡ್‌ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಗಾಯಕಿ ಶ್ರೇಯಾ. ಆಕೆ ಒಂದು ಹಾಡಿಗೆ ಎಷ್ಟು ಪಡೆಯುತ್ತಾರೆ ಗೊತ್ತೆ?

Today is Shreya Ghoshal Birthday, know about her remuneration
Author
Bangalore, First Published Mar 12, 2022, 4:02 PM IST | Last Updated Mar 12, 2022, 4:02 PM IST

1984ರಲ್ಲಿ ಮುರ್ಷಿದಾಬಾದ್‌ನಲ್ಲಿ ಜನಿಸಿದ ಶ್ರೇಯಾ ಘೋಷಾಲ್‌ಗೆ (Shreya Ghoshal) ಈಗ 38 ವರ್ಷ. ಆದರೆ ಆಕೆಯನ್ನು ನೋಡಿದರೆ ಯಾವ ಬಾಲಿವುಡ್ (Bollywood) ಹೀರೋಯಿನ್‌ಗೂ ಆಕೆಯ ಸೌಂದರ್ಯ ಕಡಿಮೆಯಿಲ್ಲ. ಸೌಂದರ್ಯಕ್ಕಿಂತ ಹೆಚ್ಚಾಗಿ ಆಕೆಯ ಸ್ವರವೂ ಅಪರಂಜಿ ಚಿನ್ನ.ಶ್ರೀಮಂತ ನಿರ್ಮಾಪಕರು, ನಿರ್ದೇಶಕರು ಇವರನ್ನೇ ತಮ್ಮ ಚಿತ್ರಕ್ಕೆ ಬಯಸುತ್ತಾರೆ. ಬಾಲಿವುಡ್‌ನ ಬಲು ಬೇಡಿಕೆಯ ಗಾಯಕಿ ಆಗಿರುವ ಈಕೆ ಒಂದು ಹಾಡಿಗೆ ಚಾರ್ಜ್ ಮಾಡುವ ಮೊತ್ತ ಸುಮಾರು 20ರಿಂದ 25 ಲಕ್ಷ ರೂಪಾಯಿ.

ಇಷ್ಟಿದ್ದರೂ ಶ್ರೇಯಾಗೆ ಒಂದು ಕ್ಷಣವೂ ಪುರುಸೊತ್ತೇ ಇಲ್ಲ. ಫಿಲಂ (Film) ಹಾಡುಗಳ ಜೊತೆಗೆ ದೇಶ ಮತ್ತು ವಿದೇಶಗಳಲ್ಲೂ ರಸಮಂಜರಿಗಳಿಗೆ ಈಕೆಗೆ ಬೇಡಿಕೆಯಿದೆ. ಸುನಿಧಿ ಚೌಹಾಣ್ (Sunidhi Chouhan) , ನೇಹಾ ಕಕ್ಕರ್ ಮುಂತಾದ ಗಾಯಕರು ಇದ್ದರೂ ಅವರ್ಯಾರೂ ಶ್ರೇಯಾ ಅವರಷ್ಟು ಬೇಡಿಕೆ ಹೊಂದಿರುವವರಲ್ಲ. ವಾರ್ಷಿಕ ಸುಮಾರು 12ರಿಂದ 15 ಕೋಟಿ ರೂಪಾಯಿ ಬಾಲಿವುಡ್‌ನಿಂದ ಇವರ ಗಳಿಕೆ. ಇದರಿಂದ ಆಚೆಗೆ ಬ್ರಾಂಡ್ ಅಂಬಾಸಿಡರ್ ಆಗಿ, ಜಾಹೀರಾತುಗಳಲ್ಲಿ, ಆರ್ಕೆಸ್ಟ್ರಾಗಳಿಂದ ಬರುವ ಉತ್ಪತ್ತಿ ಬೇರೆ.

ಶ್ರೇಯಾಗೆ ಕಾರುಗಳ ಬಗ್ಗೆ ತುಂಬ ಖಯಾಲಿ. ಬಿಎಂಡಬ್ಲ್ಯು (BMW) ಸೇರಿದಂತೆ ಅನೇಕ ಕಾರುಗಳು (Cars) ಇವರ ಸಂಗ್ರಹದಲ್ಲಿವೆ. ಬಂಗಾಲಿ ಮೂಲದ ಶ್ರೇಯಾ ಈಗ ಸೆಟಲ್ ಆಗಿರುವುದು ಮುಂಬಯಿ (Mumbai) ಯಲ್ಲಿ. ಮುಂಬಯಿ ಹಾಗೂ ಕೋಲ್ಕೊತಾ (Kolkotta) ಗಳಲ್ಲಿ ಅವರ ಐಷಾರಾಮಿ ವಿಲ್ಲಾಗಳು ಇವೆ. ಒಂದು ಅಂದಾಜಿನ ಪ್ರಕಾರ ಈಕೆಯ ಆಸ್ತಿಮೌಲ್ಯ 182 ಕೋಟಿ ರೂಪಾಯಿ.

ನೀನಾ ಗುಪ್ತಾ ಹೇಳಿದ ಒಂಬತ್ತು ಕತೆಗಳು

20 ವರ್ಷಗಳ ಹಿಂದೆ ಆಕೆ ಹಿಂದಿ ಫಿಲ್ಮ್‌ಗಳಿಗೆ ಪಾದಾರ್ಪಣೆ ಮಾಡಿದ್ದರು. ದೇವದಾಸ್ (Devdas) ಸಿನಿಮಾದ ಸಂಗೀತಕ್ಕೆ ಶ್ರೇಯಾ ಕೊಡುಗೆ ಅಪಾರ. ದೇವದಾಸ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಈ 16 ವರ್ಷದ ಹುಡುಗಿಯನ್ನು ನಂಬಿ ಆಕೆ ಐಶ್ವರ್ಯಾ ರೈಗೆ (Aishwary Rai) ಹಾಡಲು ಅವಕಾಶ ನೀಡಿದ್ದರು. ಭಾರತದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾಗಿರುವ ಶ್ರೇಯಾ ವಿವಿಧ ಭಾಷೆಗಳಲ್ಲಿ ಆಲ್ಬಮ್‌ಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರ ಕೊಡುಗೆಗಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Today is Shreya Ghoshal Birthday, know about her remuneration

2010ರ ಸಮ್ಮರ್ US ಟೂರ್‌ ವೇಳೆ ಅಲ್ಲಿನ ಓಹಿಯೋ ರಾಜ್ಯದ ಗವರ್ನರ್ ಟೆಡ್ ಸ್ಟ್ರಿಕ್ಲ್ಯಾಂಡ್ ಜೂನ್‌ 26ರನ್ನು ಶ್ರೇಯಾ ಘೋಷಾಲ್‌ ದಿನ ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಅಂದು ಶ್ರೇಯಾ ಅಭಿಮಾನಿಗಳು 'ಶ್ರೇಯಾ ಘೋಷಾಲ್ ದಿನ'ವನ್ನು ಆಚರಿಸುತ್ತಾರೆ. ಟ್ಟಿಟರ್ ಇನ್‌ಸ್ಟಾಗ್ರಾಂಗಳಲ್ಲಿ ಶ್ರೇಯಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಶ್ರೇಯಾ ಹುಟ್ಟಿದ್ದು ಬೆಂಗಾಲಿ ಕುಟುಂಬದಲ್ಲಾದರೂ ಬೆಳೆದದ್ದು ರಾಜಸ್ಥಾನದಲ್ಲಿ. ನಾಲ್ಕನೇ ವಯಸ್ಸಿಗೇ ಸಂಗೀತ ಅಭ್ಯಾಸ ಶುರು ಮಾಡಿದ ಈ ಗಾಯಕಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸೈಮಾ, ಫಿಲ್ಮಂ ಫೇರ್ ಹೀಗೆ ಸಾಲು ಸಾಲು ಪ್ರಶಸ್ತಿಗಳು ಮಡಿಲು ಸೇರಿವೆ.

5 ಫೆಬ್ರವರಿ 2015ರಂದು, ಘೋಷಾಲ್ ತಮ್ಮ ಬಾಲ್ಯದ ಗೆಳೆಯ ಶಿಲಾದಿತ್ಯ ಮುಖೋಪಾಧ್ಯಾಯನನ್ನು ಸಾಂಪ್ರದಾಯಿಕ ಬಂಗಾಳಿ ಸಮಾರಂಭದಲ್ಲಿ ವಿವಾಹವಾದರು. ಅದಕ್ಕೂ ಮೊದಲು, ಘೋಷಾಲ್ ಅವರೊಂದಿಗೆ ಸುಮಾರು 10 ವರ್ಷಗಳ ಕಾಲ ಡೇಟಿಂಗ್ (Dating) ಮಾಡಿದರು. ಇತ್ತೀಚೆಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ದೇವ್ಯಾನ್ (Devyan) ಎಂಬ ಹೆಸರಿಟ್ಟಿದ್ದಾರೆ.

Controversial Statements: ನಟ ಚೇತನ್‌ ಗಡೀಪಾರು ಸಾಧ್ಯತೆ?

ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿ (Gangubai Kathiavadi) ಫಿಲಂ ಬಗ್ಗೆ, ಬನ್ಸಾಲಿ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅವರಿಂದಾಗಿ ಹಿಂದಿ ಚಿತ್ರ ಹಾಡುಗಾರಿಕೆಗೆ ಬಂದ ಶ್ರೇಯಾ, ತನಗೆ ತೆರೆದ ಹೊಸ ದಾರಿಗಾಗಿ ಧನ್ಯವಾದ ಸಲ್ಲಿಸಿದ್ದರು.

ಕನ್ನಡದಲ್ಲಿ ಇವರು ಹಾಡಿದ ಕೆಲವು ಹಾಡುಗಳು ಇವು:

1. ಏನೋ ಒಂಥರ ಏನೋ ಒಂಥರ

2. ಓ ಗುಣವಂತ ! ನೀನೆಂದೂ ನನ ಸ್ವಂತ

3. ಆಹಾ ಎಂಥ ಆ ಕ್ಷಣ

4. ಉಲ್ಲಾಸದ ಹೂ ಮಳೆ,

5. ನಿನ್ನ ನೋಡಲೆಂತೋ ಮಾತನಾಡಲೆಂತೊ

6. ತನ್ಮಳಾದೆನು ತಿಳಿಯುವ ಮುನ್ನವೆ

7. ಹೇ ಹೂವೆ ನೀ ಅರಳೋ ಮುಂಜಾನೆ

Twitter CEO Parag Agrawal: ಬಾಲ್ಯದ ಗೆಳೆಯನ ಬಗ್ಗೆ ಶ್ರೇಯಾ ಘೋಷಾಲ್ ಸಂಭ್ರಮ
 

Latest Videos
Follow Us:
Download App:
  • android
  • ios