Asianet Suvarna News Asianet Suvarna News

17ನೇ ವಯಸ್ಸಲ್ಲೇ ಅಸು ನೀಗಿದ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕನ್ನಡದಲ್ಲೂ ನಟಿಸಿದ್ದರು!

ನಟಿ ಶೋಭಾ ಅವರು ತಮಿಳು, ಕನ್ನಡ ಹಾಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಹೊಂದಿದ್ದರು. ಸಾಯುವುದಕ್ಕೂ ಮೊದಲು ತಮ್ಮ ಹದಿನೇಳನೇ ವಯಸ್ಸಿನಲ್ಲಿಯೇ ತಮಿಳು ಸಿನಿಮಾ ಪಾಸಿ..

Malayalam actress Shobha wins National award and died in her 17 age srb
Author
First Published Apr 27, 2024, 6:39 PM IST

ಮಹಾಲಕ್ಷ್ಮಿ ಮೆನನ್ (Mahalakshmi Menon) ಮೂಲ ಹೆಸರಿನ ಮಲಯಾಳಂ ನಟಿ ಶೋಭಾ (Shoba) ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಬಂದವರು.  23 ಸೆಪ್ಟೆಂಬರ್ 1962ರಲ್ಲಿ ಮಲಯಾಳಂ ದಂಪತಿಗಳಿಗೆ ಚೆನ್ನೈನಲ್ಲಿ ಜನಿಸಿದ ಶೋಭಾರ ಮೂಲ ಹೆಸರು ಮಹಾಲಕ್ಷ್ಮಿ ಮೆನನ್. 1966ರಲ್ಲಿ ತಮಿಳಿನ 'ಥಟ್ಟುಂಗಲ್ ಥಿರಕಪ್ಪಡಂ (Thattungal Thirakkappadum)ಚಿತ್ರದ ಮೂಲಕ ಬಾಲನಟಿಯಾಗಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶೋಭಾ, ಬಳಿಕ 1978ರಲ್ಲಿ ಮಲಯಂಳನ 'ಉಥ್ರದ ರಾತ್ರಿ' ಸಿನಿಮಾ ಮೂಲಕ ನಾಯಕಿ ನಟಿಯಾಗಿ (Heroine) ಪರಿಚಿತರಾದರು. ಅವರು ಸಾಕಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಖ್ಯಾತಿ ಪಡೆದಿದ್ದರು.

ನಟಿ ಶೋಭಾ ಅವರು ತಮಿಳು, ಕನ್ನಡ ಹಾಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಹೊಂದಿದ್ದರು. ಸಾಯುವುದಕ್ಕೂ ಮೊದಲು ತಮ್ಮ ಹದಿನೇಳನೇ (17) ವಯಸ್ಸಿನಲ್ಲಿಯೇ ತಮಿಳು ಸಿನಿಮಾ ಪಾಸಿ (Pasi)ಗಾಗಿ ನ್ಯಾಷನಲ್ ಅವಾರ್ಡ್‌ (National Award) ಪಡೆದಿದ್ದರು ನಟಿ ಶೋಭಾ. ಕನ್ನಡದಲ್ಲಿ ಕೂಡ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ ಶೋಭಾ. 1977ರಲ್ಲಿ ಬಿಡುಗಡೆಯಾದ ಕೋಕಿಲಾ, 1978ರಲ್ಲಿ ಬಿಡುಗಡೆಯಾದ ಅಪರಿಚಿತ, 1982ರಲ್ಲಿ ಬಿಡುಗಡೆಯಾದ ಅಮರಾ ಮಧುರಾ ಪ್ರೇಮ ಹಾಗೂ 1983ರಲ್ಲಿ ಬಿಡುಗಡೆಯಾದ 'ಬೆಂಕಿಯ ಬಲೆ' ಚಿತ್ರಗಳಲ್ಲಿ ಶೋಭಾ ನಟಿಸಿದ್ದರು. 

ಡಾ ರಾಜ್ 'ಕಮಲಾ.. ಕಮಲಾ...' ಎಂದು ಕೂಗುತ್ತಾ ಸಾಯುತ್ತಿದ್ದರೆ ನಟಿ ಜಯಂತಿ ಬಿಕ್ಕಿಬಿಕ್ಕಿ ಅತ್ತಿದ್ದರಂತೆ!

ಆದರೆ ವೈಯಕ್ತಿಕ ಜೀವನದಲ್ಲಿ ಮಾಡಿಕೊಂಡ ಒಂದು ತಪ್ಪು ಆಯ್ಕೆಯಿಂದಾಗಿ ಆಕೆ ದುರಂತ ಸಾವು ಕಾಣಬೇಕಾಯಿತು ಎನ್ನಲಾಗಿದೆ. ಶೋಭಾ ಅವರು ಬಾಲು ಮಹೇಂದ್ರ ಅವರನ್ನು 1978ರಲ್ಲಿ ಮದುವೆಯಾಗಿದ್ದರು. ಬಾಲು ಮಹೇಂದ್ರು ಅವರು ಬೇರಾರೂ ಅಲ್ಲ, ಕಮಲ್ ಹಾಸನ್-ಶ್ರೀದೇವಿ ನಟನೆಯ ಚಿತ್ರವಾದ 'ಸದ್ಮಾ' ನಿರ್ದೇಶಕರು. 1983ರಲ್ಲಿ ಬಿಡುಗಡೆಯಾಗಿದ್ದ ಬಾಲು ಮಹೇಂದ್ರ ಸದ್ಮಾ ಚಿತ್ರವು ಸಾಕಷ್ಟು ಸದ್ದು ಮಾಡಿತ್ತು. ತಮಗಿಂತ 26 ವರ್ಷ ಹಿರಿಯರಾಗಿದ್ದ ಬಾಲು ಮಹೇಂದ್ರರನ್ನು ಮದುವೆಯಾಗಿದ್ದ ನಟಿ ಶೋಭಾ ಅದರಿಂದ ಸಾಕಷ್ಟು ನೊಂದು ಬೆಂದಿದ್ದರು ಎನ್ನಲಾಗಿದೆ. ಜತೆಗೆ, ಈ ಮದುವೆಗಾಗಿ ಮನೆಯವರ ವಿರೋಧವನ್ನೂ ಕಟ್ಟಿಕೊಂಡಿದ್ದರು ಎನ್ನಲಾಗಿದೆ. 

ರಶ್ಮಿಕಾ ಜತೆ ವಾಲಿಬಾಲ್ ಆಡಲು ಬಯಸುತ್ತೇನೆ; ವಿಜಯ್ ದೇವರಕೊಂಡ ಮಾತಿಗೆ ಫ್ಯಾನ್ಸ್ ರಿಯಾಕ್ಷನ್ಸ್‌ ನೋಡಿ!

01 ಮೇ 19890ರಲ್ಲಿ ಚೆನ್ನೈನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶೋಭಾ ದುರಂತ ಸಾವು ಕಂಡರು. ಅವರದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಅವರು ನಿಧನ ಹೊಂದಿನ 40 ವರ್ಷಗಳ ಬಳಿಕವೂ ಇತ್ಯರ್ಥವಾಗಿಲ್ಲ. ಒಟ್ಟಿನಲ್ಲಿ, ನಟಿ ಶೋಭಾ ಅವರದು ಕೇವಲ 17 ವರ್ಷಕ್ಕೆ (1 May 1980) ಅಂತ್ಯಗೊಂಡ ದುರಂತ ಬದುಕು. 

ಮಾತೃ ಹೃದಯದ ಡಾ ರಾಜ್‌ಕುಮಾರ್ ಹೂವಿನ ಹಾರ ಹಾಕಿ ನಿಂತಾಗ ಆ ಮನೆಯವ್ರು ಶಾಕ್ ಆಗ್ಬಿಟ್ರು!

Follow Us:
Download App:
  • android
  • ios