ಡಾ ರಾಜ್ 'ಕಮಲಾ.. ಕಮಲಾ...' ಎಂದು ಕೂಗುತ್ತಾ ಸಾಯುತ್ತಿದ್ದರೆ ನಟಿ ಜಯಂತಿ ಬಿಕ್ಕಿಬಿಕ್ಕಿ ಅತ್ತಿದ್ದರಂತೆ!
ಡಾ ರಾಜ್ ನಟನೆಯೆಂದರೆ ಅದು ಬರೀ ನಟನೆಯಲ್ಲ, ಅದು ಒಂಥರಾ ರಿಯಲ್ ಇದ್ದಂತೆ ಎಂದಿದ್ದಾರೆ ನಟಿ ಜಯಂತಿ. ಜಯಂತಿಯವರು ಡಾ ರಾಜ್‌ಕುಮಾರ್ ಜತೆ ನಟಿಸಿದ ಹಲವು ಚಿತ್ರಗಳಲ್ಲಿ ಅವರಿಂದ ಇಂತಹ ಅಭಿನಯವನ್ನು ಕಂಡಿದ್ದರಂತೆ.
ನಟಿ ಜಯಂತಿಯವರು ಡಾ ರಾಜ್‌ಕುಮರ್ ಅವರನ್ನು ಯಾವತ್ತೂ 'ರಾಜ್' ಎಂದಷ್ಟೇ ಕರೆಯುತ್ತಿದ್ದರು. ಅವರನ್ನು 'ಅಣ್ಣವ್ರು' ಅಂತಲೋ, 'ರಾಜಣ್ಣ' ಅಂತಲೋ ಅಥವಾ ನಟಿ ಮಂಜುಳಾ ಅವಳು ಕರೆದಂತೆ 'ಅಂಕಲ್' ಅಂತಲೋ ಕರೆಯುತ್ತಿರಲಿಲ್ಲವಂತೆ. ಡಾ ರಾಜ್ ಬಗ್ಗೆ ಜಯಂತಿಯವರಿಗೆ ಅತೀವ ಪ್ರೀತಿ ಹಾಗೂ ಗೌರವ ಇದ್ದರೂ ಅವರನ್ನು ರಾಜ್ ಅಂತಲೇ ಕರೆಯಲು ಜಯಂತಿ ಇಷ್ಟಪಡುತ್ತಿದ್ದರು ಎನ್ನಲಾಗಿದೆ. ಆದರೆ ಯಾವತ್ತೂ ನಾನು ಈಗಿನ ನಟರಿಗೆ ನಾನು ಕರೆದಂತೆ ಹೋಗೋ, ಬಾರೋ ಎಂದು ಯಾವತ್ತೂ ಕರೆದಿರಲಿಲ್ಲ ಎಂದಿದ್ದರು ನಟಿ ಜಯಂತಿ.
ಡಾ ರಾಜ್‌ಕುಮಾರ್ ಜೊತೆ ನಟಿ ಜಯಂತಿಯವರು 30 ರಿಂದ 35 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೊಂದು ಚಿತ್ರ 'ಚಕ್ರತೀರ್ಥ'ದ ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನಟಿ ಜಯಂತಿಯವರು ಒಮ್ಮೆ ಹಂಚಿಕೊಂಡಿದ್ದರು. ಅದೇನು ಅಂದ್ರೆ 'ಚಕ್ರತೀರ್ಥ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅದರಲ್ಲಿ ಡಾ ರಾಜ್ ಅವರು 'ಕಮಲಾ.. ಕಮಲಾ..' ಎಂದು ಕೂಗಿಕೊಳ್ಳುತ್ತಾ ಸಾಯುವ ದೃಶ್ಯ. ನಟ ಡಾ ರಾಜ್‌ಕುಮಾರ್ ಅವರು ದೃಶ್ಯದಲ್ಲಿ ಅದೆಷ್ಟು ತಲ್ಲೀನರಾಗಿ ಅಭಿನಯಿಸುತ್ತಿದ್ದರಂತೆ ಎಂದರೆ, ನಟನೆ ಎಂದು ಗೊತ್ತಿದ್ದರೂ ಸ್ವತಃ ನಟಿ ಜಯಂತಿಯವರು ಡಾ ರಾಜ್ ಅವರ ನಟನೆ ನೋಡಿ ಬಿಕ್ಕಿಬಿಕ್ಕಿ ಅಳತೊಡಗಿದ್ದರಂತೆ.
ರಶ್ಮಿಕಾ ಜತೆ ವಾಲಿಬಾಲ್ ಆಡಲು ಬಯಸುತ್ತೇನೆ; ವಿಜಯ್ ದೇವರಕೊಂಡ ಮಾತಿಗೆ ಫ್ಯಾನ್ಸ್ ರಿಯಾಕ್ಷನ್ಸ್ ನೋಡಿ!
ಡಾ ರಾಜ್ ನಟನೆಯೆಂದರೆ ಅದು ಬರೀ ನಟನೆಯಲ್ಲ, ಅದು ಒಂಥರಾ ರಿಯಲ್ ಇದ್ದಂತೆ ಎಂದಿದ್ದಾರೆ ನಟಿ ಜಯಂತಿ. ಜಯಂತಿಯವರು ಡಾ ರಾಜ್‌ಕುಮಾರ್ ಜತೆ ನಟಿಸಿದ ಹಲವು ಚಿತ್ರಗಳಲ್ಲಿ ಅವರಿಂದ ಇಂತಹ ಅಭಿನಯವನ್ನು ಕಂಡಿದ್ದರಂತೆ. ಡಾ ರಾಜ್‌ಕುಮಾರ್ ಮೇರು ನಟರು ಮಾತ್ರವಲ್ಲ, ಅವರೊಬ್ಬರು ಮಾನವೀಯತೆಯ ಸಾಕಾರ ಮೂರ್ತಿ ಎಂದಿದ್ದರು ನಟಿ ಜಯಂತಿ. ಜಯಂತಿಯವರು ಯಾವತ್ತೂ ಡಾ ರಾಜ್‌ಕುಮಾರ್ ಅವರೊಂದಿಗೆ ನಟಿಸುವಾಗ ತುಂಬಾ ಖುಷಿ ಪಡುತ್ತಿದ್ದರಂತೆ. ಕಾರಣ, ಡಾ ರಾಜ್ ಅವರು ಸಹಕಲಾವಿದರಿಗೆ ತುಂಬಾ ಪ್ರೀತಿ-ಗೌರವ ಕೊಡುತ್ತಿದ್ದರಂತೆ.
ಮಾತೃ ಹೃದಯದ ಡಾ ರಾಜ್‌ಕುಮಾರ್ ಹೂವಿನ ಹಾರ ಹಾಕಿ ನಿಂತಾಗ ಆ ಮನೆಯವ್ರು ಶಾಕ್ ಆಗ್ಬಿಟ್ರು!
ನಟಿ ಜಯಂತಿಯವರು ಡಾ ರಾಜ್ ಚಿತ್ರಗಳೆಂದರೆ ಅದು ಕುಟುಂಬ ಸಮೇತರಾಗಿ ನೋಡುವ ಚಿತ್ರ ಎಂದಿದ್ದರು. 'ಬಂಗಾರದ ಮನುಷ್ಯ' ಇರಬಹುದು ಅಥವಾ 'ಕಸ್ತೂರಿ ನಿವಾಸ' ಇರಬಹುದು, ಅದರಲ್ಲಿ ಕೌಟುಂಬಿಕ ಮೌಲ್ಯಗಳು ತುಂಬಾನೇ ಇದ್ದವು. ಅದೇ ರೀತಿ, ಜಯಂತಿ ಹಾಗೂ ಡಾ ರಾಜ್‌ಕುಮಾರ್ ನಟನೆಯ ಚಿತ್ರಗಳಾದ 'ಜೇಡರಬಲೆ, ಚಿಕ್ಕಮ್ಮ, ಕುಲಗೌರವ, ಬೆಟ್ಟದ ಹುಲಿ, ಪರೋಪಕಾರಿ, ಮಂತ್ರಾಲಯ ಮಹಾತ್ಮೆ ಸೇರಿದಂತೆ ಹಲವು ಚಿತ್ರಗಳಲ್ಲಿ ನೈತಿಕತೆ, ಮಾನವೀಯತೆ ಹಾಸು ಹೊಕ್ಕಾಗಿವೆ.
ನಟಿಯಾಗುವ ಫೇಸ್ ಅಲ್ಲ, ನಟನೆ ಬರುವುದಿಲ್ಲ ಅಂದಿದ್ರು, ಸಂಕಟಪಟ್ಟು ಅಳುತ್ತಿದ್ದೆ; ನಟಿ ರಶ್ಮಿಕಾ ಮಂದಣ್ಣ
ಇದೆಲ್ಲ ಕಾರಣಗಳಿಂದ ಡಾ ರಾಜ್ ಅವರು ಜಯಂತಿ ಅಥವಾ ಬೇರೆ ಎಲ್ಲ ಸಹಕಲಾವಿದರಿಂದ ಗೌರವಕ್ಕೆ ಪಾತ್ರರಾಗುತ್ತಿದ್ದರು. ಜತೆಗೆ, ಸಿನಿಮಾ ಹೊರತಾಗಿಯೂ ಅವರೊಬ್ಬ ಮಾನವೀಯತೆಯ ಮೂರ್ತಿಯೇ ಆಗಿದ್ದರು. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಇಂತಹ ಹಲವಾರು ಘಟನೆಗಳು ವೈರಲ್ ಆಗತೊಡಗಿವೆ. ಡಾ ರಾಜ್ ಜತೆ ನಟಿಸಿದ್ದ ಹಲವು ಸಹಕಲಾವಿದರು ತಮ್ಮ ಅನುಭವವನ್ನು ಹಂಚಿಕೊಂಡಿರುವ ಸಂದರ್ಶನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ.