ಅಪ್ಪ ಅಮ್ಮ ದೂರಾವಾಗಿದ್ದೇ ಬೆಸ್ಟ್ ಎಂದ ಸೈಫ್ ಪುತ್ರಿ

  • ಅಪ್ಪ ಅಮ್ಮನ ವಿಚ್ಛೇದನೆ ಬಗ್ಗೆ ನಟಿ ಸಾರಾ ಅಲಿ ಖಾನ್ ಮಾತು
  • ಅವರಿಬ್ಬರು ಬೇರಾಗಿರುವುದೇ ಬೆಸ್ಟ್ ನಿರ್ಧಾರ ಎಂದ ನಟಿ
To separate was the best decision to make at the time says Sara ali khan about parents divorce dpl

ಬಾಲಿವುಡ್‌ನಲ್ಲಿ ಬಹಳಷ್ಟು ಜೋಡಿ ಮದುವೆಯಾಗಿ ಮಕ್ಕಳಾದ ನಂತರ ಡಿವೋರ್ಸ್ ಕೊಟ್ಟವರಿದ್ದಾರೆ. ಬಹಳಷ್ಟು ಹಿರಿಯ ನಟರಿಂದ ಹಿಡಿದು ಇಂದಿನವರೆಗೂ ಬಾಲಿವುಡ್‌ನಲ್ಲಿ ನಾವು ಬಹಳಷ್ಟು ವಿಚ್ಛೇದನೆಗಳನ್ನು ನೋಡುತ್ತಲೇ ಬಂದಿದ್ದೇವೆ. ಪ್ರೀತಿಸಿ ವಿವಾಹವಾಗಿ ದೂರಾದವರೂ, ಬಹಳಷ್ಟು ವರ್ಷ ಸಂಸಾರ ಮಾಡಿ ದೂರಾದವರೂ ಇದ್ದಾರೆ. ಇದರಲ್ಲಿ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಸ್ಟೋರಿಯೂ ಇದೆ. ತನಗಿಂತ ಹಿರಿಯ ನಟಿಯನ್ನು ಮದುವೆಯಾಗಿ ಇಬ್ಬರು ಮಕ್ಕಳಾದ ನಂತರ ಈ ಜೋಡಿ ವಿಚ್ಛೇದಿತರಾಗಿದ್ದರು.

ಬಾಲಿವುಡ್‌ನ ಟಾಪ್ ನಟಿಯಾಗಿದ್ದ ಅಮೃತಾ ಸಿಂಗ್ ಅವರನ್ನು ನಟ ಸೈಫ್ ಅಲಿ ಖಾನ್ ಮದುವೆಯಾಗಿದ್ದರು. ಅಮೃತಾ ಸಿಂಗ್ ಆಗ ಬೆಸ್ಟ್ ನಟಿಯಾಗಿದ್ದು, ಸೈಫ್ ಅಲಿ ಖಾನ್ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದರು. ಇಬ್ಬರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಅಮೃತಾ ಸಿಂಗ್‌ಗೆ ವಿಚ್ಛೇದನೆ ಕೊಟ್ಟು ನಂತರ ಕರೀನಾ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಸೈಫ್ ಅಲಿ ಖಾನ್. ಅಲ್ಲಿಯೂ ಇಬ್ಬರು ಮಕ್ಕಳಿದ್ದಾರೆ. ತೈಮೂರ್ ಹಾಗೂ ಜೆಹ್.

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ಸಾರಾ ಅಲಿ ಖಾನ್ ಈಗ ತನ್ನ ತಂದೆ ತಾಯಿಯ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ. ನಟಿ ಸಾರಾ ಅಲಿ ಖಾನ್ ತನ್ನ ಕೂಲ್ ವರ್ತನೆಗೆ ಹೆಸರುವಾಸಿಯಾಗಿದ್ದಾರೆ.  ಅದು ಅವಳ ಸಂದರ್ಶನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಮಸ್ತೆ ಎಂದ ನಗುಮುಖದಿಂದ ಮಾತನಾಡುವ ಸಾರಾ ಅಂದ್ರೆ ಮಾಧ್ಯಮದವರಿಗೂ ಪ್ರೀತಿ.

To separate was the best decision to make at the time says Sara ali khan about parents divorce dpl

ಈಗ, ಇತ್ತೀಚಿನ ಚಾಟ್‌ನಲ್ಲಿ ಸಿಂಬಾ ಸ್ಟಾರ್ ಮತ್ತೊಮ್ಮೆ ತಮ್ಮ ಕೂಲ್ ನೇಚರ್ ಪ್ರದರ್ಶಿಸಿದ್ದಾರೆ. ಆಕೆಯ ತಂದೆ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ವಿಚ್ಛೇದನದ ಬಗ್ಗೆ ನಟಿ ಮಾತನಾಡಿದ್ದಾರೆ. ಸಾರಾ ಆ ದಿನಗಳಲ್ಲಿ ತನ್ನ ಹೆತ್ತವರ ಬೇರ್ಪಡಿಕೆಯನ್ನು ಹೇಗೆ ನಿಭಾಯಿಸಿದರು ಎಂಬುದನ್ನೂ ಆಕೆ ಹೇಳಿದ್ದಾರೆ. ಸೈಫ್ ಮತ್ತು ಅಮೃತಾ ದೀರ್ಘ ವಿವಾಹದ ನಂತರ 2004 ರಲ್ಲಿ ವಿಚ್ಛೇದನೆ ಪಡೆದುಕೊಂಡರು.

ಮಗಳು ಸಾರಾ ಅಮ್ಮ ಅಮೃತಾಳಿಂದ ಪಡೆದ ಬೆಸ್ಟ್ ಆಡ್ವೈಸ್‌ ಇದು

ಇತ್ತೀಚೆಗೆ ಚಾಟ್‌ ಶೋ ವೂಟ್ ಒರಿಜಿನಲ್ ಫೀಟ್ ಅಪ್ ವಿತ್ ದ ಸ್ಟಾರ್ ಸೀಸನ್ 3ರಲ್ಲಿ ಸಾರಾ ಅಲಿ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ಪೋಷಕರ ಜೊತೆ ತನ್ನ ಸಂಬಂಧ ಹಾಗೂ ಅವರು ವಿಚ್ಛೇದಿತರಾದಾಗ ತಾವದನ್ನು ಹೇಗೆ ನಿಭಾಯಿಸಿದರು ಎಂದು ಹೇಳಿದ್ದಾರೆ. ಅಪ್ಪ ಅಮ್ಮನ ವಿಚ್ಛೇದನೆ ಅತ್ಯುತ್ತಮ ನಿರ್ಧಾರ ಎಂದು ಸಿಂಬಾ ನಟಿ ಹೇಳಿದ್ದಾರೆ. ಇದು ತುಂಬಾ ಸಿಂಪಲ್. ಎರಡು ಆಯ್ಕೆಗಳಿವೆ. ಒಂದೋ ಯಾರೂ ಸಂತೋಷವಿಲ್ಲದ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಅಥವಾ ಪ್ರತ್ಯೇಕವಾಗಿ ವಾಸಿಸುತ್ತಾರೆ. ಅಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿರುತ್ತಾರೆ. ನೀವು ವಿಭಿನ್ನ ರೀತಿಯ ಪ್ರೀತಿಯನ್ನು ಅನುಭವಿಸುತ್ತೀರಿ. ನೀವು ಭೇಟಿಯಾದಾಗಲೆಲ್ಲಾ ಖುಷಿಯಾಗಿರುತ್ತೀರಿ. ಅಂತೂ ಕೊನೆಯಲ್ಲಿ ಒಟ್ಟಿಗೆ ಸಂತೋಷವಾಗಿರುತ್ತೇವೆ. ಹಾಗಾಗಿ ಆ ಸಮಯದಲ್ಲಿ ತೆಗೆದುಕೊಳ್ಳುವ ಅತ್ಯುತ್ತಮ ನಿರ್ಧಾರ ಬೇರೆಯಾಗುವುದು ಎಂದಿದ್ದಾರೆ.

To separate was the best decision to make at the time says Sara ali khan about parents divorce dpl

ಈಗ ಪ್ರತಿಯೊಬ್ಬರೂ ತಮ್ಮ ಮಾತಿನಲ್ಲಿ ಹೆಚ್ಚು ಸಂತೋಷವಾಗಿದ್ದಾರೆ. ಇಬ್ಬರೂ ತಮ್ಮದೇ ಪ್ರಪಂಚದಲ್ಲಿ ಮತ್ತು ಜೀವನದಲ್ಲಿ ಸಂತೋಷವಾಗಿದ್ದಾರೆ. ಅದರಿಂದ ಅವರ ಮಕ್ಕಳು ಕೂಡ ಸಂತೋಷವಾಗಿದ್ದಾರೆ. ನಾವೆಲ್ಲರೂ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂತೋಷವಾಗಿರುತ್ತೇವೆ. ಆದ್ದರಿಂದ, ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ ಎಂದುಕೊಳ್ಳಬೇಕು ಎಂದಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆಯಲ್ಲಿ ಸಾರಾ ಅಟ್ರಾಂಗಿ ರೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ, ಸಾರಾ ವಿಕ್ಕಿ ಕೌಶಲ್ ಅಭಿನಯದ ಅಮರ ಅಶ್ವತ್ಥಾಮ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios