ಮಗಳು ಸಾರಾ ಅಮ್ಮ ಅಮೃತಾಳಿಂದ ಪಡೆದ ಬೆಸ್ಟ್ ಆಡ್ವೈಸ್ ಇದು
ಸಾರಾ ಅಲಿ ಖಾನ್ ಬಾಲಿವುಡ್‌ನ ಯಂಗ್ ಆ್ಯಂಡ್ ಪ್ರಾಮಿಸ್ಸಿಂಗ್ ನಟಿ. ತಂದೆ ಸೈಫ್ ಅಲಿ ಖಾನ್ ಹಾಗೂ ತಾಯಿ ಅಮೃತಾ ಸಿಂಗ್ ಬೇರೆಯಾದ ನಂತರ ಸಾರಾ ತಾಯಿ ಜೊತೆಯಲ್ಲಿರುವುದು ಎಲ್ಲರಿಗೂ ಗೊತ್ತುಂಟು. ಸಾರಾ ತಾಯಿ ಅಮೃತಾರ ಜೊತೆ ಒಳ್ಳೆ ಬಾಂಡಿಂಗ್ ಶೇರ್ ಮಾಡಿಕೊಳ್ಳುತ್ತಾರೆ. ಸಾರಾ ತಮ್ಮ ಅಮ್ಮನಿಂದ ಪಡೆದ ಬೆಸ್ಟ್ ಸಲಹೆಯನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿದೆ ವಿವರ.
ಸಾರಾ ಅಲಿ ಖಾನ್ ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು.
ನೋಡಲು ತಾಯಿಯನ್ನು ಹೊಲುವ ಸಾರಾರನ್ನು ಫ್ಯಾನ್ಸ್ ಅಮೃತಾರ ಝೆರಾಕ್ಸ್ ಕಾಪಿ ಎಂದು ಹೇಳುತ್ತಾರೆ.
ಅಷ್ಟೇ ಅಲ್ಲ ನಟಿ ಕೂಡ ಅವರ ತಾಯಿ ಅಮೃತಾ ಸಿಂಗ್ ಅವರಂತೆ ಕಾಣಲು ಇಷ್ಟಪಡುತ್ತಾರೆ.
ಯಾವಾಗಲೂ ತಂದೆ ಹಾಗೂ ಸಹೋದರ ಇಬ್ರಾಹಿಂನೊಂದಿಗೆ ಕಳೆಯುವ ಅಮೃತ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.
ಟ್ಯಾಲೆಂಟ್ ಹಾಗೂ ಲುಕ್ ಜೊತೆ ಒಳ್ಳೆಯ ಫ್ಯಾಷನ್‌ಸೆನ್ಸ್ ಸಹ ಹೊಂದಿದ್ದಾರೆ ಸಾರಾ.
ತನ್ನ ಅತಿದೊಡ್ಡ ಕ್ರಿಟಿಕ್ ಮತ್ತು ಫ್ಯಾಷನ್ ಗುರು ಬೇರೆ ಯಾರೂ ಅಲ್ಲ, ತಾಯಿ ಅಮೃತಾ ಸಿಂಗ್ ಎಂದು ಸಾರಾ ಹೇಳುತ್ತಾರೆ.
ತನ್ನ ತಾಯಿ ತನ್ನನ್ನು ಸುಂದರವಾಗಿ ಕಾಣುವಂತೆ ಪ್ರೇರೇಪಿಸುತ್ತಾರೆಂದು ಸಾರಾ ಬಹಿರಂಗಪಡಿಸಿದ್ದಾರೆ.
ಕೇದರ್‌ನಾಥ್ ನಟಿ ತನ್ನ ಅಮ್ಮ ಅಮೃತಾರಿಂದ ಪಡೆದಿರುವ ಬೆಸ್ಟ್ ಸಲಹೆಯನ್ನು ಹಿಂದೊಮ್ಮ ರಿವೀಲ್ ಮಾಡಿದ್ದರು.
'ನನ್ನ ತಾಯಿ ಯಾವಾಗಲೂ ನನ್ನನ್ನು ನಾನೇ ಆಗಿರಲು ಎಂದು ಪ್ರೇರೇಪಿಸುತ್ತಾಳೆ. ನಾವು ವಾಸಿಸುವ ಜಗತ್ತಿನಲ್ಲಿ ನಾವು ಬೇರೆಯವರಾಗಲು ಸ್ಥಳವಿಲ್ಲ. ನೀನು ನೀನಾಗಿರುವುದಕ್ಕೆ ಹೆಮ್ಮೆಪಡು ಮತ್ತು ನೀನಾಗೇ ಮುಂದುವರಿ' ಎಂದು ಅಮೃತಾ ನೀಡಿರುವ ಸಲಹೆಯನ್ನು ಹಂಚಿಕೊಂಡಿದ್ದಾರೆ ಸಾರಾ.