ಜಗತ್ತಿನಲ್ಲಿ ಕೆಲವೊಂದು ಸೋಜಿಗಗಳು ನಡೆಯುತ್ತಲೇ ಇರುತ್ತವೆ. ಇದು ದೇಶ-ಕಾಲ ಹಾಗೂ ವ್ಯಕ್ತಿಗಳು ಹೀಗೆ ಎಲ್ಲರ, ಎಲ್ಲದರ ವಿಷಯದಲ್ಲೂ ನಿಜ. ಹಿಂದಿಯ 'ಕೂಲಿ' ಸಿನಿಮಾದಲ್ಲಿ ಸ್ವತಃ ಅಮಿತಾಭ್ ಬಚ್ಚನ್ ಕೇಳಿಕೊಂಡ್ರೂ ನಟಿಸಲು ಡಾ ರಾಜ್‌ಕುಮಾರ್ ಒಪ್ಪಲೇ ಇಲ್ಲ. ಆದರೂ...
ಜಗತ್ತಿನಲ್ಲಿ ಕೆಲವೊಂದು ಸೋಜಿಗಗಳು ನಡೆಯುತ್ತಲೇ ಇರುತ್ತವೆ. ಇದು ದೇಶ-ಕಾಲ ಹಾಗೂ ವ್ಯಕ್ತಿಗಳು ಹೀಗೆ ಎಲ್ಲರ, ಎಲ್ಲದರ ವಿಷಯದಲ್ಲೂ ನಿಜ. ಈ ಪೀಠಿಕೆ ಯಾಕೆ ಅಂದ್ರೆ, ಹಿಂದಿಯ 'ಕೂಲಿ' ಸಿನಿಮಾದಲ್ಲಿ ಸ್ವತಃ ಅಮಿತಾಭ್ ಬಚ್ಚನ್ (Amitabh Bachchan) ಕೇಳಿಕೊಂಡರೂ ನಟಿಸಲು ಡಾ ರಾಜ್‌ಕುಮಾರ್ (Dr Rajkumar) ಒಪ್ಪಲೇ ಇಲ್ಲ. ಬೆಂಗಳೂರಿನ ಸೆಂಟ್ರಲ್ ರೇಲ್ವೇ ಸ್ಟೇಷನ್‌ನಲ್ಲಿ ಅಮಿತಾಭ್ ಬಚ್ಚನ್ ನಟನೆಯ ಕೂಲಿ (Coolie) ಸಿನಿಮಾ ಶೂಟಿಂಗ್ ನಡೆಯುತ್ತಿತ್ತು.
ಅದೇ ಸ್ಥಳದಲ್ಲಿ ಅಕ್ಕಪಕ್ಕ ಡಾ ರಾಜ್‌ಕುಮಾರ್ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿತ್ತು. ಅಲ್ಲಿಗೆ ಬಂದ ಅಮಿತಾಭ್ ಬಚ್ಚನ್ ಅವರು ತಮ್ಮ ಚಿತ್ರದಲ್ಲಿ ಗೌರವ ಪಾತ್ರದಲ್ಲಿ (Guest Appearance) ನಟಿಸುವಂತೆ ಅಣ್ಣಾವ್ರನ್ನು ಕೇಳಿಕೊಂಡರು. ಆದರೆ, ಕನ್ನಡ ಸಿನಿಮಾ ಬಿಟ್ಟು ಬೇರೆ ಭಾಷೆಯ ಯಾವುದೇ ಚಿತ್ರದಲ್ಲಿ ನಾನು ನಟಿಸುವುದು. ಅದು ನನ್ನ ವೃತ್ತಿಜೀವನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ..' ಅಂತ ಹೇಳಿ ಡಾ ರಾಜ್‌ಕುಮಾರ್ ಅವರು ನಯವಾಗಿಯೇ ತಿರಸ್ಕರಿಸಿದ್ದರು.
'ರಾಜ್ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!
ಬೆಂಗಳೂರಿನ ಬಹಳಷ್ಟು ಕಡೆ ಅಮಿತಾಭ್ ನಟನೆಯ ಕೂಲಿ ಚಿತ್ರದ ಶೂಟಿಂಗ್ ನಡೆದಿದೆ. ಬಾಲಿವುಡ್ ಸಿನಿಮಾ ಸಿನಿಮಾ ಕೂಲಿ ಭಾರತದ ಎಲ್ಲಾ ಕಡೆ ಬಿಡುಗಡೆ ಕಂಡಾಗ ಅದರಲ್ಲಿ ಡಾ ರಾಜ್ ಇದ್ದರು. ಅವರು ಸಿನಿಮಾ ನೋಡುವ ಪ್ರತಿಯೊಬ್ಬ ಪ್ರೇಕ್ಷಕರ ಕಣ್ಣಿಗೂ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿ ಎಲ್ಲರಿಗೂ ಅಚ್ಚರಿ! ಈ ಸುದ್ದಿ ಅರೆಕ್ಷಣದಲ್ಲಿ ಬಹಳಷ್ಟು ಕಡೆ ಹಬ್ಬಿತ್ತು. ಅರೇ, ಅಣ್ಣಾವ್ರು ಹಿಂದಿ ಚಿತ್ರದಲ್ಲಿ ನಟಿಸೋದಿಲ್ಲ ಅಂತ ಹೇಳಿ ಮತ್ತೆ ನಟಿಸಿದ್ಯಾಕೆ ಅಂತ ಹಲವರು ಅಚ್ಚರಿಗೊಂಡಿದ್ದರು.
ಆದರೆ, ಅಲ್ಲಿ ಆಗಿದ್ದೇ ಬೇರೆ..! ಹಿಂದಿಯ ಕೂಲಿ ಚಿತ್ರವನ್ನು ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವಾಗ, ಆ ಚಿತ್ರದ ನಿರ್ದೇಶಕರು ಉದ್ದೇಶಪೂರ್ವಕವಾಗಿಯೇ ಸೆರೆ ಹಿಡಿಸಿದ್ದರೋ ಅಥವಾ ಬೈ ಮಿಸ್ಟೇಕ್ ಆಗಿತ್ತೋ, ಒಟ್ಟಿನಲ್ಲಿ ಡಾ ರಾಜ್‌ಕುಮಾರ್ ನಟನೆಯ 'ಹೊಸಬೆಳಕು' ಹಾಗೂ 'ಜೇಡರ ಬಲೆ' ಪೋಸ್ಟರ್ ಅದರಲ್ಲಿ ಕ್ಲಿಯರ್ ಆಗಿ ಕಾಣಿಸುತ್ತಿತ್ತು. ಹೀಗಾಗಿ ಹಿಂದಿಯ ಆ ಚಿತ್ರದಲ್ಲಿ ಎಲ್ಲರೂ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರನ್ನು ನೋಡಿದ್ದಾರೆ.! ಕೂಲಿ ಸಿನಿಮಾ ನೋಡಿದ ಡಾ ರಾಜ್‌ಕುಮಾರ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರಿಗೂ ಈ ವಿಷಯ ತಿಳಿದು ಅಚ್ಚರಿ ಹಾಗೂ ಖುಷಿ ಎರಡೂ ಆಗಿತ್ತಂತೆ..!
'ಡಾ ರಾಜ್ ಸ್ಮಾರಕ ಲೋಕಾರ್ಪಣೆ'ಗೆ ಲೀಲಾವತಿ-ವಿನೋದ್‌ರಾಜ್ ಹೋದಾಗ ಶಿವಣ್ಣ ಮಾಡಿದ್ದೇನು?
