ಬಾಲಿವುಡ್‌ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಾಫಿ ಮಾರ್ತಿದ್ರು; ಮನನೊಂದು ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ರು!

ಬಾಲಿವುಡ್‌ನಲ್ಲಿ ಫೇಮಸ್ ಆಗಿರೋ ಅದೆಷ್ಟೋ ನಟ-ನಟಿಯರು ಚಿತ್ರರಂಗಕ್ಕೆ ಬರೋ ಮೊದಲು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಕೆಲವೊಬ್ಬರು ಇಂಜಿನಿಯರ್‌, ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದರೆ, ಇನ್ನು ಕೆಲವರು ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೂ ಇದೆ. ಆದರೆ ಬಿಟೌನ್‌ನಲ್ಲಿ ಫೇಮಸ್ ಆಗಿ ನ್ಯಾಶನಲ್‌ ಅವಾರ್ಡ್ ಪಡೆದ ಈ ನಟಿ ಹಿಂದೊಮ್ಮೆ ಕಾಫಿ ಮಾರಿ ಜೀವನ ಸಾಗಿಸ್ತಿದ್ರು ಅನ್ನೋ ವಿಷ್ಯ ನಿಮ್ಗೆ ಗೊತ್ತಿತ್ತಾ?

This National Award winning actress sold coffee at petrol station for Rs 30 per day Vin

ಅನೇಕ ಬಾಲಿವುಡ್ ಮತ್ತು ದಕ್ಷಿಣದ ನಟ-ನಟಿಯರು ನಟನಾ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಬೇರೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು. ಕೆಲವೊಬ್ಬರು ಇಂಜಿನಿಯರ್‌, ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದರೆ, ಇನ್ನು ಕೆಲವರು ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೂ ಇದೆ. ಆದರೆ ಬಿಟೌನ್‌ನಲ್ಲಿ ಫೇಮಸ್ ಆಗಿ ನ್ಯಾಶನಲ್‌ ಅವಾರ್ಡ್ ಪಡೆದ ಈ ನಟಿ ಹಿಂದೊಮ್ಮೆ ಕಾಫಿ ಮಾರಿ ಜೀವನ ಸಾಗಿಸ್ತಿದ್ರು ಅನ್ನೋ ವಿಷ್ಯ ನಿಮ್ಗೆ ಗೊತ್ತಿತ್ತಾ? ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಅಂತಹ ನಟಿಯೊಬ್ಬರು ಪೆಟ್ರೋಲ್ ಬಂಕ್ ನಲ್ಲಿ ಕಾಫಿ ಮಾರಾಟ ಮಾಡಿ ದಿನಕ್ಕೆ 30 ರೂ. ಗಳಿಸಿ ಜೀವನ ಸಾಗಿಸುತ್ತಿದ್ದರು. ಅವರು ತಮ್ಮ ನಟನೆಯನ್ನು ಪ್ರಾರಂಭಿಸಿದಾಗ, ಅಭಿನಯಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

70 ಮತ್ತು 80ರ ದಶಕದಲ್ಲಿ ಚಲನಚಿತ್ರಗಳಲ್ಲಿ (Movies) ತನ್ನ ಸೌಂದರ್ಯ (Beauty) ಮತ್ತು ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗೆದ್ದ ನಟಿ ಶಬಾನಾ ಅಜ್ಮಿ. ಅತಿ ಹೆಚ್ಚು ಸಂಖ್ಯೆಯ ರಾಷ್ಟ್ರೀಯ ಪ್ರಶಸ್ತಿಗಳನ್ನು (National Award) ಗೆದ್ದ ದಾಖಲೆಯನ್ನು ಸಹ ಹೊಂದಿದ್ದಾರೆ. ಆದರೆ ಇವರು ನಟಿಯಾಗುವ ಮೊದಲು ಪೆಟ್ರೋಲ್‌ ಬಂಕ್‌ನಲ್ಲಿ ಕಾಫಿ ಮಾರುತ್ತಿದ್ದರು.

ಬಾಲಿವುಡ್‌ನ ಟಾಪ್‌ ಹೀರೋಯಿನ್; ನೇಮ್‌, ಫೇಮ್ ಎಲ್ಲಾ ಬಿಟ್ಟು ಖಾಸಗಿ ಸಂಸ್ಥೆಯ ಜಾಬ್‌ಗೆ ಜಾಯಿನ್ ಆದ್ಲು!

ಹೈದರಾಬಾದ್‌ನಲ್ಲಿ ಜನಿಸಿದ ಶಬಾನಾ ಅಜ್ಮಿ ಜನಪ್ರಿಯ ಕವಿ ಕೈಫಿ ಅಜ್ಮಿ ಮತ್ತು ನಟಿ ಶೌಕತ್ ಅಜ್ಮಿ ಅವರ ಪುತ್ರಿ. ಅಜ್ಮಿ ಮುಂಬೈನ ಕ್ವೀನ್ ಮೇರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ  ಪದವಿಯನ್ನು ಪೂರ್ಣಗೊಳಿಸಿದರು. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ನಲ್ಲಿ ನಟನೆಯ ಕೋರ್ಸ್‌ ಮಾಡಿದರು.

ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಶಬಾನಾ ಅಜ್ಮಿ
2019ರಲ್ಲಿ ನಿಧನರಾದ ಶಬಾನಾ ಅಜ್ಮಿ ಅವರ ತಾಯಿ ಶೌಕತ್ ಅಜ್ಮಿ ಅವರು 2005ರಲ್ಲಿ ತಮ್ಮ ಆತ್ಮಚರಿತ್ರೆಯಲ್ಲಿ ಶಬಾನಾ ಎರಡು ಬಾರಿ ತನ್ನ ಜೀವ ತೆಗೆದುಕೊಳ್ಳಲು ಯತ್ನಿಸಿದ್ದಳು ಎಂದು ತಿಳಿಸಿದ್ದಾರೆ. ಶೌಕತ್ ಅಜ್ಮಿ 'ನಾನು ಶಬಾನಾಳ ಕಿರಿಯ ಸಹೋದರನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಶಬಾನಾ ಭಾವಿಸಿದ್ದಳು. ಒಂದು ಮುಂಜಾನೆ ನಾನು ಶಬಾನಾ ಆಕೆಯ ಸಹೋದರನ ಜೊತೆ ಉಪಹಾರ ಸೇವಿಸುತ್ತಿದ್ದಳು. ಆಗ ನಾನು ಶಬಾನಾಳ ತಟ್ಟೆಯಿಂದ ಟೋಸ್ಟ್ ಅನ್ನು ಎತ್ತಿಕೊಂಡು ಸಹೋದರನ ಸ್ಕೂಲ್‌ ಬಸ್ಸು ಶೀಘ್ರದಲ್ಲೇ ಬರಲಿದೆ, ಆದ್ದರಿಂದ ನಾನು ಅವನಿಗೆ ನಿನ್ನ ಟೋಸ್ಟ್ ನೀಡುತ್ತಿದ್ದೇನೆ ಎಂದು ಹೇಳಿ ಕೊಟ್ಟೆ. ಈ ಘಟನೆಯ ನಂತರ ಹೋಗಿ ನೋಡಿದಾಗ ಶಬಾನಾ ಬಾತ್‌ರೂಮ್‌ನಲ್ಲಿ ಅಳುತ್ತಿದ್ದಳು' ಎಂದು ತಿಳಿಸಿದ್ದಾರೆ.

ಶಬಾನಾ ಅಜ್ಮಿ ಒಮ್ಮೆ ಲ್ಯಾಬ್‌ನಲ್ಲಿ ತಾಮ್ರದ ಸಲ್ಫೇಟ್‌ ಸೇವಿಸಿ ಆತ್ಮಹತ್ಯೆ ಯತ್ನಿಸಿದಳು. ತಕ್ಷಣ ಚಿಕಿತ್ಸೆ ಕೊಡಿಸಿದ ಕಾರಣ ಪ್ರಾಣಾಪಾಯದಿಂದ ಪಾರಾದಳು.  ಆಕೆಯ ಅಸಭ್ಯ ವರ್ತನೆಗೆ ತಾಯಿ ಗದರಿಸಿದ ನಂತರ ಶಬಾನಾ ರೈಲಿನ ಮುಂದೆ ಬಂದು ಪ್ರಾಣ ತೆಗೆಯಲು ಪ್ರಯತ್ನಿಸಿದಳು. ಆದರೆ ಶಾಲೆಯ ವಾಚ್‌ಮನ್ ಈ ಸಂದರ್ಭದಲ್ಲಿ ರಕ್ಷಿಸಿದರು ಎಂದು ತಿಳಿದುಬಂದಿದೆ.

ಕನ್ನಡದ ಈ ನಟಿಗೆ ಹಿಗ್ಗಾಮುಗ್ಗಾ ಬೈದು, ಬೆದರಿಕೆ ಹಾಕಿದ್ರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌!

ಪೆಟ್ರೋಲ್ ಬಂಕ್‌ನಲ್ಲಿ ಕಾಫಿ ಮಾರುತ್ತಿದ್ದ ಶಬಾನಾ ಅಜ್ಮಿ 
ಶಬಾನಾ ಅಜ್ಮಿ ಅವರ ತಾಯಿ ಶೌಕತ್ ಅಜ್ಮಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ನಟಿ ಪೆಟ್ರೋಲ್ ಬಂಕ್‌ಗಳಲ್ಲಿ ಕಾಫಿಯನ್ನು ಮಾರಾಟ ಮಾಡುತ್ತಿದ್ದಳು. ದಿನಕ್ಕೆ 30 ರೂ ಪಡೆಯುತ್ತಿದ್ದಳು ಎಂಬುದನ್ನು ತಿಳಿಸಿದ್ದಾರೆ. ಶ್ರೀಮಂತ ಕುಟುಂಬವಾಗಿದ್ದರೂ, ನಟಿ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಬಯಸಿದ್ದಳು.

ಶಬಾನಾ ಅಜ್ಮಿ ಚೊಚ್ಚಲ ಚಲನಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ
ಶಬಾನಾ ಅಜ್ಮಿ ಅವರು ನಟನೆಗೆ ಸೇರಲು ಜಯಾ ಭಾದುರಿ ಅವರಿಂದ ಸ್ಫೂರ್ತಿ ಪಡೆದರು. ಅಜ್ಮಿ 1973 ರಲ್ಲಿ FTII ಯಿಂದ ಪದವಿ ಪಡೆದರು ಮತ್ತು ಖ್ವಾಜಾ ಅಹ್ಮದ್ ಅಬ್ಬಾಸ್ ಅವರ ಫಾಸ್ಲಾಗೆ ಸಹಿ ಹಾಕಿದರು ಮತ್ತು ಕಾಂತಿ ಲಾಲ್ ರಾಥೋಡ್ ಅವರ ಪರಿಣಯ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1974 ರಲ್ಲಿ ಶ್ಯಾಮ್ ಬೆನಗಲ್ ನಿರ್ದೇಶನದ ಅಂಕುರ್ ಅವರ ಮೊದಲ ಚಲನಚಿತ್ರವಾಗಿದೆ. ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು.

ನಟಿ ನಂತರ 1983 ರಿಂದ 1985ರ ವರೆಗೆ ಮೂರು ವರ್ಷಗಳ ಕಾಲ ಸತತವಾಗಿ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅರ್ಥ್, ಖಂಡರ್ ಮತ್ತು ಪಾರ್ ನಲ್ಲಿನ ಪಾತ್ರಗಳಿಗಾಗಿ ಪಡೆದರು. ಗಾಡ್ ಮದರ್ (1999) ಆಕೆಗೆ ಐದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದಾಖಲೆ ನಿರ್ಮಿಸಿತು. ಅಷ್ಟೇ ಅಲ್ಲ, ನಟಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇತ್ತೀಚೆಗೆ, ಕರಣ್ ಜೋಹರ್ ಅವರ ನಿರ್ದೇಶನದ ಪುನರಾಗಮನ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರವು ರಣವೀರ್ ಸಿಂಗ್, ಧರ್ಮೇಂದ್ರ ಮತ್ತು ಆಲಿಯಾ ಭಟ್ ಮತ್ತು ಇತರರೊಂದಿಗೆ ನಟಿಸಿದ್ದಾರೆ ಮತ್ತು ವಿಶ್ವಾದ್ಯಂತ 300 ಕೋಟಿ ರೂಪಾಯಿಗಳನ್ನು ಗಳಿಸಿ ದೊಡ್ಡ ಯಶಸ್ಸನ್ನು ಗಳಿಸಿದೆ.

Latest Videos
Follow Us:
Download App:
  • android
  • ios