ಪ್ರತಿವರ್ಷದಂತೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಈ ಬಾರಿಯೂ ಗಣೇಶನನನ್ನು ಮನೆಗೆ ಸ್ವಾಗತಿಸಿದ್ದಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಸ್ನೇಹಿತರನ್ನು ಆಹ್ವಾನಿಸಿಲ್ಲ. 
ಈ ಬಾರಿ ಶಿಲ್ಪಾ ಶೆಟ್ಟಿ ಮಗಳು ಸಮಿಶಾಳಿಗೆ ಇದು ಮೊದಲ ಗಣೇಶ ಹಬ್ಬ.

ಈ ಬಾರಿ 11ನೇ ವರ್ಷ ನಾನು ಗಣೇಶನನ್ನು ಸ್ವಾಗತಿಸುತ್ತಿದ್ದೇನೆ. ಈ ಬಾರಿ ಸಮಿಶಾ ಇರೋದ್ರಿಂದ ತುಂಬಾ ಸ್ಪೆಷಲ್. ಆದರೆ ಈ ಬಾರಿ ಯಾರನ್ನೂ ಆಹ್ವಾನಿಸಿಲ್ಲ. ಹಾಗಾಗಿ ಮನೆಯವರ ಜೊತೆ ಮಾತ್ರ ಹಬ್ಬ ಆಚರಿಸುತ್ತಿದ್ದೇನೆ. ನನ್ನ ಸಹೋದರಿ ಶಮಿತಾ ಕೂಡಾ ಈ ಬಾರಿ ಶೂಟಿಂಗ್‌ನಿಂದಾಗಿ ಹಬ್ಬದಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ.

ಶಿಲ್ಪಾ ಶೆಟ್ಟಿ ಕೈಯಲ್ಲಿ ಎರಡು ವಾಚು ಯಾಕೆ?

ಕೊರೋನಾ ಮಾರ್ಗಸೂಚಿಗಳನ್ನು ಪರಿಗಣಿಸಿ ಈ ಬಾರಿ ಶಿಲ್ಪಾ ಸಿಂಪಲ್ ಆಗಿ ಹಬ್ಬ ಆಚರಿಸುತ್ತಿದ್ದಾರೆ. ಈ ಕೊರೋನಾ ಬಹಳಷ್ಟು ಕಲಿಸಿದೆ. ಮುಖ್ಯವಾಗಿ ಅಗತ್ಯ ಮತ್ತು ಆಡಂಬರದ ವತ್ಯಾಸ ಕಲಿಸಿದೆ ಎಂದಿದ್ದಾರೆ.

 
 
 
 
 
 
 
 
 
 
 
 
 

🌺 गणपति बाप्पा मोर्या 🌺 And He’s here!😍🙏🏻😍 ~ गणेश चतुर्थी की आप सभी को ढेर सारी शुभकामनाएँ🌺🙏🏻❤️ Wishing my #InstaFam and all a very Happy Ganesh Chaturthi❤️🙏🏻🌺 This year, we need Bappa’s presence and His blessings more than ever. I pray that we emerge victorious from these times with strength & wisdom, and embrace a better future together. May each one of us be blessed abundantly with tons of love, health, happiness, and success. Stay safe... stay healthy... stay strong!🙏🏻❤️ @rajkundra9 . Thank you, @punitbalanaofficial, for these thoughtful outfits loved twinning with the family ❤️🙏🤗 . . . #HappyGaneshChaturthi #GanapatiBappaMorya #Blessed #gratitude #happiness #familytime #FestivalsOfIndia #StayHealthy #StayHappy #StaySafe

A post shared by Shilpa Shetty Kundra (@theshilpashetty) on Aug 22, 2020 at 1:57am PDT

ಈ ಬಾರಿ ನಾನೇ ಡೆಕೊರೇಷನ್ ಮಾಡಿದ್ದೇನೆ. ಈ ಬಾರಿ ಕ್ಯಾಟರಿಂಗ್‌ನವರ್ಯಾರೂ ಇಲ್ಲ, ಯಾಕೆಂದರೆ ಅತಿಥಿಗಳೂ ಇಲ್ಲ. ಈ ಬಾರಿ ಸತ್ಯನಾರಾಯಣ ಪೂಜೆ ಮಾಡಲಿದ್ದೇವೆ. ಸಮಿಶಾಗೆ ಅನ್ನ ಪ್ರಾಶನವಿದೆ. ಹಾಗಾಗಿ ಈ ಬಾರಿ ತುಂಬಾ ಸ್ಪೆಷಲ್ ಎಂದಿದ್ದಾರೆ. ಕೊರೋನಾವನ್ನು ನಿರ್ಲಕ್ಷಿಸಬಾರದು. ಮಾರ್ಗಸೂಚಿ ಪಾಲಿಸಬೇಕು. ವಿಘ್ನವಿನಾಶಕ ಎಲ್ಲ ವಿಘ್ನ ನಿವಾರಿಸಲಿ ಎಂದಿದ್ದಾರೆ.